“ಓಟ್ ಪಾಡೆರ್ ಉಂಡು ಬೇಗ ಪೋಯಿಯೇ’
Team Udayavani, Apr 10, 2018, 6:20 AM IST
ಉಡುಪಿ: “ಎಂಥ ಕೆಟ್ಟಿದ್ರೂ ವೋಟ್ ಹಾಕೂದೊಂದ್ ಮರೂಕಾಗ’, “ಓಟ್ ಪಾಡೆರೆ ಉಂಡು ಬೇಗ ಪೋಯಿಯೇ’, “ನಮ್ಮ ಮತ ಅಮೂಲ್ಯ ಕಟ್ಟಲಾಗದು ಅದರ ಮೌಲ್ಯ’, “ಕಂಗಿಗೆ ಸಿಂಗಾರ ಒಂದೊಂದು ಹಿಂಗಾರ, ಒಂದೊಂದು ಮತವೂ ಅಪ್ಪಟ ಬಂಗಾರ’, “ನಾನು ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ, ಮತದಾನ ಮಾಡುವುದನ್ನು ಮರೆಯುವುದಿಲ್ಲ’…
ಹೀಗೆ ವಿವಿಧ ಜನವರ್ಗಗಳು ಹೇಳುವ ಸಹಜವಾದ ಉಕ್ತಿಗಳನ್ನು ಹೊತ್ತ ಭಿತ್ತಿಚಿತ್ರಗಳು (ಪೋಸ್ಟರ್) ಮುಂದೆ ನಗರ ಸಾರಿಗೆ ಬಸ್, ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ, ಫೇಸ್‌ಬುಕ್, ವ್ಯಾಟ್ಸಪ್, ಟ್ವೀಟರ್, ಸಾರ್ವಜನಿಕ ಪ್ರದೇಶಗಳಲ್ಲಿ ಹೋರ್ಡಿಂಗ್ಸ್ ಮೂಲಕ ಪ್ರಚಾರಕ್ಕೆ ಬರಲಿವೆ. ಜಾಥ, ರ್ಯಾಲಿ, ತಾ.ಪಂ., ಗ್ರಾ.ಪಂ.ಗಳ ಜಾಗೃತಿ ಕಾರ್ಯಕ್ರಮಗಳಲ್ಲಿ ಇವು ಬಳಕೆಗೆ ಬರಲಿವೆ. ಇವೆಲ್ಲ ಹೇಳಿಕೆಗಳು ಗೋಡಂಬಿ ಕಾರ್ಖಾನೆ ಕಾರ್ಮಿಕರು, ಕೊರಗ ಸಮುದಾಯದವರು, ಅಡಿಕೆ ಹಾಳೆ ಮಾಡುವವರು, ಹೊಟೇಲ್ ಸಿಬಂದಿ, ಹಿರಿಯ ನಾಗರಿಕರು, ಹಿರಿಯ ನಾಗರಿಕರು ಮಕ್ಕಳೊಂದಿಗೆ ಸಹಜವಾಗಿ ಹೊರಹೊಮ್ಮಿವೆ. ಒಟ್ಟು 21 ಚಿತ್ರಗಳನ್ನು ತೆಗೆಯಲಾಗಿದೆ. ಈಗ 17 ಚಿತ್ರಗಳನ್ನು ಮುದ್ರಿಸಲಾಗಿದೆ.
ಇದು ಜಿಲ್ಲಾ ಸ್ವೀಪ್ ಸಮಿತಿಯವರು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಪ್ರೇರೇಪಿಸಲು ಕೈಗೊಂಡ ವಿಶಿಷ್ಟ ಪ್ರಚಾರ ಸಾಮಗ್ರಿಗಳು. ಇವುಗಳನ್ನು ಸೋಮವಾರ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧಾ, ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿ.ಪಂ. ಸಿಇಒ ಶಿವಾನಂದ ಕಾಪಶಿ ಬಿಡುಗಡೆಗೊಳಿಸಿದರು. ಭಿತ್ತಿ ಪತ್ರಗಳನ್ನು ಹೊರತಂದ ಕರ್ತವ್ಯಾಧಿಕಾರಿ ಗಳಾದ ಗ್ರಾ.ಪಂ. ಪಿಡಿಒ ಪ್ರಮೀಳಾ, ಮಹೇಶ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.