ಕಾರ್ಕಳ: ಯಕ್ಷಗಾನದ ಮೂಲಕ ಮತದಾನ ಜಾಗೃತಿ
Team Udayavani, Apr 30, 2018, 7:25 AM IST
ಕಾರ್ಕಳ: ಉಡುಪಿ ಜಿ.ಪಂ. ವತಿಯಿಂದ ಸ್ವೀಪ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮತದಾನ ಜಾಗೃತಿ ಕಾರ್ಯಕ್ರಮ ಬಡಗುತಿಟ್ಟಿನ ಯಕ್ಷಗಾನದ ಕಲಾವಿದರ ತಂಡದಿಂದ ಕಾರ್ಕಳ ಬಸ್ ನಿಲ್ದಾಣ ಬಳಿ ನಡೆಯಿತು. ಮತದಾನದ ಕುರಿತ ಎಲ್ಲ ಸೂಕ್ಷ್ಮ ವಿಚಾರಗಳನ್ನು ಯಕ್ಷಗಾನದ ಅರ್ಥಗಾರಿಕೆ ಮೂಲಕ ಜನತೆಗೆ ತಿಳಿಸಲಾಯಿತು.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಅವಕಾಶವಿದೆ. ಯಾರಿಗೂ ಹಣ ನೀಡಬಾರದು, ಪಡೆಯಬಾರದು. ಹೀಗೆ ಮಾಡಿದಲ್ಲಿ ಕಠಿನ ಶಿಕ್ಷೆ ವಿಧಿಸಲಾಗುತ್ತದೆ. ಹೆಂಡದ ಆಮಿಷ ಸಲ್ಲದು, ಮನುಷ್ಯ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡುವ ಹೆಂಡ ನೀಡುವಾತ ಗೆದ್ದರೆ ಮುಂದೆ ನಮ್ಮ ನಾಡು ಅಧಃಪತನವಾದೀತು. ಅಂತಹ ಅಭ್ಯರ್ಥಿಗಳು ಕಂಡುಬಂದರೆ ಅವರ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು. ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಎಲ್ಲರೂ ತಮ್ಮ ಗುರುತಿನ ಚೀಟಿ ಅಥವಾ ಪ್ರಮುಖ ದಾಖಲೆ ಹಿಡಿದುಕೊಂಡು ಮತದಾನ ಕೇಂದ್ರಕ್ಕೆ ತೆರಳಬೇಕು. ಮತಯಂತ್ರದ ಮೂಲಕ ಹಾಕಿದ ಮತವನ್ನು ಖಾತ್ರಿಪಡಿಸುವ ಯೋಜನೆ ಕೂಡ ಈ ಬಾರಿ ಮಾಡಲಾಗಿದೆ. ದಣಿದವರಿಗೆ ನೀರಿನ ವ್ಯವಸ್ಥೆ ಕೂಡ ಇದೆ. ಹೀಗೆ ಎಲ್ಲ ವಿಚಾರಗಳನ್ನು ಜನತೆಯ ಮುಂದಿಟ್ಟು ಜಾಗೃತಿ ಮೂಡಿಸಲಾಯಿತು.
ನರಸಿಂಹ ತುಂಗ ನಿರ್ದೇಶನದ ಈ ಯಕ್ಷಗಾನಕ್ಕೆ ಸತೀಶ್ ಕೆದ್ಲಾಯ ಭಾಗವತಿಕೆ ನಡೆಸಿದ್ದರು. ದೇವದಾಸ್ ಕೂಡ್ಗಿ ಮದ್ದಳೆಗಾರರಾಗಿ, ವಿಷ್ಣುದಾಸ್ ಗೋರ್ಪಾಡಿ, ವಿಠ್ಠಲ ಕಥ್ಕುಂಜೆ ಮತ್ತು ಅಭಿನವ ತುಂಗ ಮುಂತಾದವರು ಕಲಾವಿದರಾಗಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ
Manipal: ಮಣ್ಣಪಳ್ಳ ಸ್ವಚ್ಛತೆಗಿಳಿದ ಸಾರ್ವಜನಿಕರು!
ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ
ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ
Malpe: ಕುಸಿದು ಬಿದ್ದು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.