ವರದೇಂದ್ರ ತೀರ್ಥ ಸ್ವಾಮೀಜಿ ಅವರ ಪುಣ್ಯತಿಥಿ ಆರಾಧನಾ ಮಹೋತ್ಸವ
Team Udayavani, Jun 29, 2017, 3:35 AM IST
ಕುಂದಾಪುರ: ಕಾಶೀ ಮಠದ ಪರಮ ಪೂಜ್ಯ ಶ್ರೀಮತ್ ವರದೇಂದ್ರ ತೀರ್ಥ ಸ್ವಾಮೀಜಿ ಅವರ ಪುಣ್ಯತಿಥಿ ಆರಾಧನಾ ಮಹೋತ್ಸವ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ರವಿವಾರ ಜರಗಿತು.
ಮಧ್ಯಾಹ್ನ ಭಜನ ಕಾರ್ಯಕ್ರಮ, ಶ್ರೀ ದೇವರಿಗೆ ಮಹಾಪೂಜೆ, ರಾತ್ರಿ ವಿಶೇಷ ವಸಂತ ಪೂಜೆ ನಡೆಯಿತು.
ಅನಂತರ ನಡೆದ ಗುರು ಗುಣಗಾನದಲ್ಲಿ ದೇಗುಲದ ಆಡಳಿತ ಮೊಕ್ತೇಸರ ಶ್ರೀಧರ ಕಾಮತ್ ಅವರು ಮಾತನಾಡಿ, ಗುರುವರ್ಯರು ಕಾಶೀಯ ಮೂಲ ಮಠದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸಂಸ್ಕೃತವನ್ನು ಕಲಿತು ಅಪಾರ ಪಾಂಡಿತ್ಯ ಹೊಂದಿ ದೇವರ ಕೀರ್ತನೆಗಳನ್ನು ರಚಿಸಿದ್ದರು. ಅಲ್ಲದೇ ದೇಶ ವಿದೇಶದ ಸುಮಾರು 16 ಭಾಷೆಗಳನ್ನು ಬಲ್ಲವರಾಗಿದ್ದರು. ಅದರಲ್ಲಿ ಫ್ರೆಂಚ್, ಜರ್ಮನ್, ಜಪಾನೀ ಭಾಷೆಯೂ ಸೇರಿತ್ತು. ಅವರಿಗೆ ಕೈಗಾರಿಕೆ ಹಾಗೂ ಯಂತ್ರಗಳ ಕುರಿತು ಅಪಾರ ಒಲವಿತ್ತು. ಆ ಕಾಲದ ಆಧುನಿಕ ಯಂತ್ರ, ಕೈಮಗ್ಗಗಳ ಕುರಿತು ಅಧ್ಯಯನ ನಡೆಸಿದ್ದರು ಎಂದು ನಿದರ್ಶನದ ಮೂಲಕ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದೇಗುಲದ ಮೊಕ್ತೇಸರರು ಹಾಗೂ ಸೇವಾದಾರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.