ಮುಂಜಾಗ್ರತೆ ಕ್ರಮ, ಮಳೆಗಾಲ ಎದುರಿಸಲು ಹೆಬ್ರಿ ಸನ್ನದ್ಧ
ಪ್ರಕೃತಿ ವಿಕೋಪಕ್ಕೆ 24 ಗಂಟೆಗಳಲ್ಲಿ ಪರಿಹಾರ
Team Udayavani, Jun 18, 2019, 5:00 AM IST
ಮಾತಿಬೆುr ಬಳಿ ರಸ್ತೆಯಲ್ಲಿ ಬಿದ್ದ ಮರವನ್ನು ತೆರವುಗೊಳಿಸುತ್ತಿರುವುದು.
ಹೆಬ್ರಿ: ನೂತನವಾಗಿ ಘೋಷಣೆ ಗೊಂಡ ಹೆಬ್ರಿ ತಾಲೂಕು ಈ ಬಾರಿಯ ಮುಂಗಾರು ಎದುರಿಸಲು ಸನ್ನದ್ಧಗೊಂಡಿದ್ದು ಯಾವುದೇ ಪ್ರಕೃತಿ ವಿಕೋಪ ಸಂಭವಿಸಿದರೆ 24 ಗಂಟೆಗಳಲ್ಲಿ ಪರಿಹಾರ ನೀಡಲು ಸಿದ್ಧವಾಗಿದೆ.
ಈ ಹಿನ್ನಲೆಯಲ್ಲಿ ಹೆಬ್ರಿ ತಾಲೂಕಿನ ತಹಶೀಲ್ದಾರ್ ತಂಡದಿಂದ ಮುಂಗಾರು ಪೂರ್ವ ಸಭೆಯಲ್ಲಿ ಟಾಸ್ಕ್ ಫೋರ್ಸ್ ಸಿದ್ಧವಾಗಿದೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪಶುಸಂಗೋಪನಾ ಇಲಾಖೆ, ಅಗ್ನಿಶಾಮಕದಳ, ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಸಣ್ಣ ನೀರಾವರಿ ಇಲಾಖೆಗಳು ಮಳೆಗಾಲದಲ್ಲಾಗುವ ಪ್ರಕೃತಿ ವಿಕೋಪಕ್ಕೆ ಮುಂಜಾಗ್ರತೆ ಕ್ರಮ ವಹಿಸಿ ಸಂಪೂರ್ಣ ಸನ್ನದ್ಧವಾಗಿದೆ. ಕರಾವಳಿಗೆ ಮುಂಗಾರು ಈಗಾಗಲೇ ಆಗಮಿಸಿದೆ. ಯಾವುದೇ ಸಮಯದಲ್ಲಿ ತುರ್ತು ಸಂಪರ್ಕಕ್ಕಾಗಿ ಗ್ರಾಮ ಮಟ್ಟದ ಸಮಿತಿಯನ್ನು ರಚಸಿ ಅಲ್ಲಿಯ ಪಿಡಿಒ ಹಾಗೂ ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿದ್ದು ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.
ತುರ್ತು ವ್ಯವಸ್ಥೆ
ಪ್ರಾಕೃತಿಕ ವಿಕೋಪ ನಿರ್ವಹಣೆಗೆ ತಂಡ ಸನ್ನದ್ದ ಜತೆಗೆ ಹೆಬ್ರಿ ತಾಲೂಕು ವ್ಯಾಪ್ತಿಯ ಜೇಸಿಬಿ ಮಾಲಕರು, ಟಿಪ್ಪರ್, ಕ್ರೇನ್ ಹಾಗೂ ತಜ್ಞರ ಮಾಹಿತಿಗಳನ್ನು ಸಂಗ್ರಹಿಸಿದ್ದು ತುರ್ತು ವ್ಯವಸ್ಥೆಗೆ ರೂಪುರೇಷೆ ತಯಾರಿಸಲಾಗಿದೆ.
ಗ್ರಾಮ ಸಮಿತಿ
ಪಂ.ಅ. ಅಧಿಕಾರಿ ನೋಡಲ್ ಅಧಿಕಾರಿ ಅವರ ಕಮಿಟಿಯು ಗ್ರಾಮ ಮಟ್ಟದ ಅನಾಹುತವನ್ನು ಎದುರಿಸಲು ಗ್ರಾಮ ಕರಣಿಕರು, ಗ್ರಾಮ ಸಹಾಯಕರು, ಕಂದಾಯ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರು 24×7 ಕರ್ತವ್ಯ ನಿರ್ವಹಿಸಲು ಸಿದ್ಧರಾಗಿದ್ದಾರೆ.
ಕಂಟ್ರೋಲ್ ರೂಂ ಸಂಪರ್ಕಿಸಿ
ಮಳೆಗಾಲ ಎದುರಿಸಲು ವಿಪತ್ತು ನಿರ್ವಹಣೆ ತಂಡ ಸಂಪೂರ್ಣ ಸನ್ನದ್ಧವಾಗಿದೆ.
ಯಾವುದೇ ಗ್ರಾಮಗಳಲ್ಲಿ ಏನೇ ಸಮಸ್ಯೆ ಅಥವಾ ಅನಾಹುತವಾದದಲ್ಲಿ ಕೂಡಲೇ ಕಂಟ್ರೋಲ್ ರೂಮ್‌ನ್ನು ಸಂಪರ್ಕಿಸಬಹುದು. ಗ್ರಾಮದ ಯಾವುದೇ ವಿಭಾಗದಲ್ಲಿ ಪ್ರಕೃತಿ ವಿಕೋಪ ದಿಂದ ಅನಾಹುತ ಸಂಭವಿಸಿ ದಲ್ಲಿ 24 ಗಂಟೆಗಳಲ್ಲಿ ಪರಿಹಾರ ನೀಡಲಾಗುತ್ತದೆ.
– ಕೆ. ಮಹೇಶ್ಚಂದ್ರ,
ತಹಶೀಲ್ದಾರರು , ಹೆಬ್ರಿ ತಾಲೂಕು
ಮಳೆಗಾಲದಲ್ಲಿ ಹೆಬ್ರಿ ತಾಲೂಕಿನ 16 ಗ್ರಾಮಗಳಲ್ಲಿ ಯಾವುದೇ ವಿಭಾಗಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದರೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು.
- ಹೆಬ್ರಿ ಉದಯಕುಮಾರ್ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.