ಯೋಧ ರವಿಚಂದ್ರ ಶೆಟ್ಟಿ ಅವರಿಗೆ ಹುಟ್ಟೂರ ಸಮ್ಮಾನ
Team Udayavani, Feb 9, 2020, 10:14 PM IST
ತೆಕ್ಕಟ್ಟೆ : ಭಾರತೀಯ ಸೇನೆಯಲ್ಲಿ ಕಳೆದ 17 ವರ್ಷಗಳ ಕಾಲ ದೇಶ ಸೇವೆಗೈದು ಹುಟ್ಟೂರು ತೆಕ್ಕಟ್ಟೆಗೆ ಆಗಮಿಸಿದ ವೀರ ಯೋಧ ಎ.ವಿ. ರವಿಚಂದ್ರ ಶೆಟ್ಟಿ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಭರಮಾಡಿಕೊಂಡು ಫೆ.9 ರಂದು ತೆಕ್ಕಟ್ಟೆ ಗ್ರಾಮಸ್ಥರು ಸಮ್ಮಾನಿಸಿ ಗೌರವಿಸಿದರು. ಹಾಗೂ ಮಾಜಿ ಯೋಧ ಶಿವರಾಮ ಶೆಟ್ಟಿ ಅವರನ್ನು ಕೂಡ ಸಮ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ರೈತ ಹಾಗೂ ಯೋಧರು ನಮ್ಮ ರಾಷ್ಟ್ರದ ಬೆನ್ನೆಲುಬು. ರಾಷ್ಟ್ರಸೇವೆಯಲ್ಲಿಯೇ ನಮ್ಮ ಗ್ರಾಮದ ಯುವಶಕ್ತಿಗಳ ಕೊಡುಗೆ ಅಪಾರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸಮ್ಮಾನಿಸಿದ ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಕಾಂಚನ್ ಕೊಮೆ ಮಾತನಾಡಿ, ನಮ್ಮ ಗ್ರಾಮದ ಆರು ಮಂದಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವುದೇ ನಮ್ಮ ಗ್ರಾಮಕ್ಕೆ ಹೆಮ್ಮೆ. ಇಂತಹ ಜೀವನ ಶ್ರೇಷ್ಠ ಕಾರ್ಯದಲ್ಲಿ ಬದುಕನ್ನೇ ರಾಷ್ಟ್ರಸೇವೆಗಾಗಿ ಸಮರ್ಪಿಸುವ ಯೋಧರಿಗೆ ಸದಾ ನಮಿಸುತ್ತೇನೆ ಎಂದರು.
ನಿವೃತ್ತ ಶಿಕ್ಷಕಿ ಸೀತಾಲಕ್ಷ್ಮೀ ಮಾತನಾಡಿ, ನನ್ನ ಶಿಷ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾನೆ ಎನ್ನುವ ಹೆಮ್ಮೆ ಇದೆ. ಇಂದು ನಾವು ನೆಮ್ಮದಿಯಿಂದ ಬದುಕು ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಗಡಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರೇ ಕಾರಣರಾಗಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಗ್ರಾಮದ ಹೆಮ್ಮೆಯ ಯೋಧನ ಸೇವೆ ನಮ್ಮೂರಿನ ಮತ್ತಷ್ಟು ಯುವಶಕ್ತಿಗಳಿಗೆ ಪ್ರೇರಣೆಯಾಗಲಿ ಎಂದವರು ತಿಳಿಸಿದರು.
ತೆರೆದ ವಾಹನದಲ್ಲಿ ರ್ಯಾಲಿ
ತೆಕ್ಕಟ್ಟೆ ರಾ.ಹೆ.66 ರಿಂದ ಕೋಟ, ಕೋಟೇಶ್ವರದ ವರೆಗೆ ತೆರೆದ ವಾಹನದ ಮೂಲಕ ಯೋಧ ಎ.ವಿ.ರವಿಚಂದ್ರ ಶೆಟ್ಟಿ ಅವರ ಅಭಿಮಾನಿಗಳು ರ್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ನಾಗಯ್ಯ ಶೆಟ್ಟಿ, ಉದ್ಯಮಿ ಸುಜಯ್ ಶೆಟ್ಟಿ, ಸಂಘಟಕ ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ, ತೆಕ್ಕಟ್ಟೆ ಗ್ರಾ.ಪಂ. ಸದಸ್ಯರು, ಶ್ವೇತಾ ರವಿಚಂದ್ರ ಶೆಟ್ಟಿ, ಜ್ಯೋತಿ ಪ್ರಕಾಶ್ ಶೆಟ್ಟಿ, ಮಾ| ವಿಕ್ರಾಂತ್, ತೆಕ್ಕಟ್ಟೆ ಫ್ರೆಂಡ್ಸ್‌ನ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಯೋಧನಿಗೆ ಸೇಬು ಹಣ್ಣಿನ ಹಾರ !
ಕುಂದಾಪುರ ತಾಲೂಕಿನ ಗ್ರಾಮದ ಹೆಮ್ಮೆಯ ಯೋಧ ತೆಕ್ಕಟ್ಟೆ ರವಿಚಂದ್ರ ಶೆಟ್ಟಿ (ಹವಾಲ್ದಾರ ಹುದ್ದೆ) ಯಿಂದ ದೇಶ ಸೇವೆಗೈದು ಹುಟ್ಟೂರಿಗೆ ಬಂದ ಸಂಭ್ರಮದಲ್ಲಿ ಅವರ ಅಭಿಮಾನಿಗಳು ಸುಮಾರು 15 ಕೆ.ಜಿ. ತೂಕದ ಸೇಬು ಹಣ್ಣಿನ ಹಾರವನ್ನು ಅರ್ಪಿಸಿರುವುದು ಗಮನ ಸೆಳೆಯಿತು. ಗ್ರಾಮದಲ್ಲಿ ಪ್ರಭಾಕರ ಹರಪನಕೆರೆ (ಸೇನೆಯಲ್ಲಿ ರೇಡಿಯೋ ಆಪರೇಟರ್), ಸುಧಾಕರ ಹರಪನಕೆರೆ (ಸಿಗ್ನಲ್ ಮ್ಯಾನ್), ರವೀಂದ್ರ ಕೊಮೆ,(ಐಟಿಬಿಪಿ ಹವಾಲ್ದಾರ್), ಅರುಣ್ (ಏರ್‌ಫೋರ್ಸ್‌ನಲ್ಲಿ ಏರ್‌ವೆುನ್) , ಸುದರ್ಶನ್ ನಾಯಕ್ ತೆಕ್ಕಟ್ಟೆ (ಸಿಆರ್‌ಪಿಎಫ್)ಗ್ರಾಮದಲ್ಲಿ ಅತೀ ಹೆಚ್ಚು ಮಂದಿ ದೇಶ ಸೇವೆಯಲ್ಲಿ ದ್ದು ಪ್ರಸ್ತುತ ತೆಕ್ಕಟ್ಟೆ ಗ್ರಾಮ ಯೋಧರ ಗ್ರಾಮವಾಗುತಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ನನ್ನ ಮಗ ಯೋಧ ಎ.ವಿ.ರವಿಚಂದ್ರ ಶೆಟ್ಟಿ 17 ವರ್ಷಗಳ ಕಾಲ ದೇಶ ಸೇವೆಗೈದು ಹುಟ್ಟೂರು ತೆಕ್ಕಟ್ಟೆಗೆ ಆಗಮಿಸಿದ್ದಾನೆ. ನಮ್ಮ ಗ್ರಾಮದಲ್ಲಿ ಈಗಾಗಲೇ ಹಲವು ಮಂದಿ ಯುವಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದೇಶ ಸೇವೆ ಮಾಡಬೇಕು ಎನ್ನುವ ಹಂಬಲದಲ್ಲಿರುವ ಯುವಕರಿಗೆ ನಾನು ಸದಾ ಪ್ರೋತ್ಸಾಹಿಸುತ್ತೇನೆ. ಬದಲಾದ ಕಾಲದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿಚ್ಚಿಸುವವರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸುವ ಅವಕಾಶಗಳಿದೆ . ಯುವಶಕ್ತಿ ಮಂದೆ ಬರಬೇಕು ಎನ್ನುವುದೇ ನನ್ನ ಆಶಯ
-ಶಿವರಾಮ ಶೆಟ್ಟಿ ,ಮಾಜಿ ಯೋಧರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.