ಕೋಡಗನ ಕೋಳಿ ನುಂಗಲಿಲ್ಲ; ತ್ಯಾಜ್ಯ ನೀರು ಈ ಕೆರೆಗಳನ್ನೇ ನುಂಗಿತು!


Team Udayavani, Feb 15, 2020, 7:45 AM IST

gombe-marida-duddu

ಬೇಸಗೆ ಇರಲಿ, ಜನವರಿ ಬಂದ ಕೂಡಲೇ ನಗರಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಏಳುತ್ತದೆ. ಎಷ್ಟೋ ಬಡಾವಣೆಗಳಲ್ಲಿ ಆಗಲೇ ಬೇಸಗೆ ಆರಂಭವಾಗುತ್ತದೆ. ನಗರಾಡಳಿತವು ನಾಗರಿಕರ ಬಾಯಾರಿಕೆ ತಣಿಸಲು ಹರಸಾಹಸ ಪಡುತ್ತದೆ. ಆಗ ನಮ್ಮ ಕೆರೆಗಳನ್ನು, ಬಾವಿಗಳನ್ನು ಉಳಿಸಿಕೊಂಡಿದ್ದರೆ ಎಷ್ಟು ಸುಖವಾಗಿರುತ್ತಿತ್ತು ಎಂದು ಜನರೂ ಹಲುಬುತ್ತಾರೆ. ನಗರಾಡಳಿತವೂ ನೀರು ಉಳಿಸಿ, ಜಲಸಂಪನ್ಮೂಲ ವ್ಯರ್ಥ ಮಾಡಬೇಡಿ ಎಂದೆಲ್ಲಾ ಪ್ರವಚನ ನೀಡುತ್ತದೆ. ಇದು ಪ್ರತಿ ವರ್ಷದ ಸಂಪ್ರದಾಯ. ಉಡುಪಿ ನಗರದ ವಿಚಿತ್ರವೆಂದರೆ, ಸುಮಾರು 22 ವರ್ಷಗಳಿಂದ ಬುದ್ಧಿ ಹೇಳಬೇಕಾದ ನಗರಾಡಳಿತದ ಜವಾಬ್ದಾರಿ ಹೊತ್ತ ನಗರಸಭೆಯ ನಿರ್ಲಕ್ಷ್ಯವೇ ಎಲ್ಲ ಜಲ ಮೂಲಗಳಿಗೂ ಕಂಟಕವಾಗುತ್ತಿದೆ ಎಂದರೆ ನಂಬಲು ಕಷ್ಟವೆನಿಸಬಹುದು, ಆದರೂ ಸತ್ಯ.

ಕೊಡವೂರು: ಇಂದ್ರಾಣಿ ನದಿಯನ್ನು ನಗರದ ಕೆಲವು ವಸತಿ ಪ್ರದೇಶಗಳು ಮತ್ತು ನಗರಸಭೆಯ ವೆಟ್‌ವೆಲ್‌ಗ‌ಳಿಂದ ಬಿಡಲಾಗುವ ತ್ಯಾಜ್ಯ ನೀರು ಬರೀ ಬಾವಿಗಳ ಬದುಕನ್ನಷ್ಟನ್ನೇ ನುಂಗಿಲ್ಲ.

ಕೊಡವೂರು, ಕಾನಂಗಿ ಹಾಗೂ ಕಲ್ಮಾಡಿ ಪರಿಸರದ ನಾಲ್ಕಕ್ಕಿಂತಲೂ ಹೆಚ್ಚು ಕೆರೆಗಳನ್ನೂ ಈಗಾಗಲೇ ಆಪೋಶನ ತೆಗೆದುಕೊಂಡಿದೆ. ಇನ್ನಷ್ಟು ಕೆರೆಗಳು ಇದೇ ಸಾಲಿನಲ್ಲಿ ನಿಂತು ರೋಗಗ್ರಸ್ತವಾದರೆ ಅಚ್ಚರಿ ಪಡಬೇಕಿಲ್ಲ.

ಸುದಿನ ತಂಡವು ಈ ಪ್ರದೇಶದಲ್ಲೆಲ್ಲ ಸಾಕಷ್ಟು ತಿರುಗಾಡಿತು. ಈಗಾಗಲೇ ರೋಗಗ್ರಸ್ತವಾಗಿರುವ ನಾಲ್ಕು ಕೆರೆಗಳ ಸ್ಥಿತಿ ಶೋಚನೀಯವಾಗಿದೆ. ಬಹಳ ಮುಖ್ಯವಾಗಿ ಕಾನಂಗಿ ಪರಿಸರದ ಶಂಕರನಾರಾಯಣ ತೀರ್ಥ ಕೆರೆ, ಕಲ್ಲಮಠ ಕೆರೆ, ಶ್ರೀದೇವಿ ಜ್ಞಾನೋದಯ ಪಾಂಡುರಂಗ ಕೆರೆ, ಸೇನರ ಜಿಡ್ಡ ನಾಗಬನ ಹತ್ತಿರ, ಮುಕ್ತಿಧಾಮ ಕೆರೆ (ಕೊಡವೂರು ಸೇತುವೆ ಬಳಿ)-ಎಲ್ಲವೂ ಈಗಾಗಲೇ ಉಸಿರುಗಟ್ಟಿಕೊಂಡು ಸಾಯುತ್ತಿವೆ.

ಒಂದು ಸಂದರ್ಭ ಜಲರಾಶಿ
ಪ್ರತಿ ಕೆರೆಯ ಬಳಿಯ ಹೋಗಿ ಮಾತನಾಡಿಸಿದರೂ ಕೇಳಿಬರುವುದು ಒಂದೇ ಮಾತು. “ಹಿಂದೆಲ್ಲಾ ಈ ಕೆರೆಗಳಿಂದಲೇ ನಾವು ಕೃಷಿ ಮಾಡುತ್ತಿದ್ದೆವು. ಜತೆಗೆ ಇವುಗಳಲ್ಲಿ ಚೆನ್ನಾಗಿ ನೀರಿದ್ದ ಕಾರಣ ನಮ್ಮ ಮನೆಗಳ ಬಾವಿಗಳಲ್ಲೂ ಚೆನ್ನಾಗಿ ನೀರಿರುತ್ತಿತ್ತು. ಈಗ ಎಲ್ಲವೂ ಹಾಳಾಗಿವೆ’ ಎನ್ನುತ್ತಾರೆ ಸ್ಥಳೀಯರಾದ ರಾಘವೇಂದ್ರರಾವ್‌.

ಈ ಮಾತು ಇವರೊಬ್ಬರದ್ದೇ ಅಲ್ಲ. ಸೇನರ ಜಿಡ್ಡ ಬಳಿ ಹೋದಾಗಲೂ ಅಲ್ಲೇ ಇದ್ದ ಎರಡು ಕೆರೆಗಳ ಬಗ್ಗೆಯೂ ಸ್ಥಳೀಯರೊಬ್ಬರು ಹೇಳಿದ್ದು ಇದನ್ನೇ. “ಈ ಕೆರೆಗಳಿಂದ ಸಾಕಷ್ಟು ಅನುಕೂಲವಾಗುತ್ತಿತ್ತು. ಜನರೂ ನೀರು ಬಳಸುತ್ತಿದ್ದರು. ಈಗ ಹಾಳಾದ ಕಾರಣ ಯಾರೂ ಹತ್ತಿರಕ್ಕೆ ಬರುತ್ತಿಲ್ಲ’.

ಮುಕ್ತಿಧಾಮದ ಕೆರೆ
ಕೊಡವೂರು ಸೇತುವೆ ಬಳಿ ಇಂದ್ರಾಣಿ ತೀರ್ಥ ಹರಿದು ಹೋಗುತ್ತದೆ. ಇಲ್ಲಿ ಅಪರ ಕ್ರಿಯೆಗಳಿಗೆ ಸೂಕ್ತವಾಗುವಂತೆ ಮುಕ್ತಿ ಧಾಮ ಎಂಬುದನ್ನು ನಿರ್ಮಿಸಲಾಗಿದೆ. ಅದರ ಕೆರೆಯೂ ಈ ಇಂದ್ರಾಣಿ ತೀರ್ಥದ ತ್ಯಾಜ್ಯ ನೀರಿನಿಂದ ಹಾಳಾಗಿದೆ. ಸುತ್ತಲಿನ ಬಾವಿಯ ನೀರೂ ಹಾಳಾಗಿರುವುದರಿಂದ ಮುಕ್ತಿಧಾಮದ ಉದ್ದೇಶಕ್ಕೆ ಸಂಕಷ್ಟ ಎದುರಾಗಿದೆ.

ಇಲ್ಲಿ ನೀರಿನ ಸಮಸ್ಯೆ ಒಂದಾದರೆ ಇಂದ್ರಾಣಿ ತೀರ್ಥಕ್ಕೆ ಸೇರುವ ತ್ಯಾಜ್ಯ ನೀರಿನ ದುರ್ನಾತದಿಂದ ಸುತ್ತಲಿನ ವಾತಾವರಣವೂ ಹಾಳಾಗಿದೆ. ಆಡಳಿತದ ಅವಜ್ಞೆಯಿಂದ ಈ ಸ್ಥಳದ ಪವಿತ್ರಮಯ ವಾತಾವರಣಕ್ಕೆ ಧಕ್ಕೆಯಾಗಿದೆ.

ಶಂಕರನಾರಾಯಣ ತೀರ್ಥ ಕೆರೆ
ಶಂಕರನಾರಾಯಣ ತೀರ್ಥ ಕೆರೆಯೂ ಹಾಳಾಗಿದೆ. ಅದನ್ನೂ ತ್ಯಾಜ್ಯ ನೀರು ಬಿಟ್ಟಿಲ್ಲ. ಹಾಗೆಂದು ಸ್ಥಳೀಯ ನಾಗರಿಕರು ಸುಮ್ಮನೆ ಕುಳಿತಿಲ್ಲ. ವಿವಿಧ ಸಂಘಟನೆಗಳು ಸೇರಿ ಕಳೆದ ವರ್ಷ ಸುಮಾರು ಕೆಲವು ಕೆರೆಗಳ ಹೂಳೆತ್ತಿ ಸ್ವತ್ಛಗೊಳಿಸಿದ್ದಾರೆ. ಆದರೆ, ಮತ್ತೆ ಅದು ಪಾಚಿಕಟ್ಟಿಕೊಂಡು ಹಾಳಾಗಿದೆ.

ಹತ್ತಿರ ಹೋದರೆ ದುರ್ನಾತ ಬರುತ್ತದೆ. ಕೆಲವು ಕೆರೆಯ ನೀರಿನಲ್ಲಿ ಎಣ್ಣೆ ಅಂಶವೂ ತೆಳ್ಳಗೆ ಕಂಡು ಬರುತ್ತಿದೆ. ಕಾನಂಗಿ ಪರಿಸರದ ಬಹುತೇಕ ಕೆರೆಗಳ ಸ್ಥಿತಿ ಹೆಚ್ಚಾ ಕಡಿಮೆ ಇದೇ.

ಜಲಸಂಪನ್ಮೂಲವನ್ನು ಉಳಿಸಬೇಕಿದ್ದ ನಗರಸಭೆಯೇ ಇಂಥದೊಂದು ಅಪರಾಧ ಎಸಗುತ್ತಿದೆ ಎಂಬುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಅಭಿಪ್ರಾಯ. ನಗರ ಸಭೆಯು ತನ್ನ ವ್ಯವಸ್ಥೆಯನ್ನು ಸರಿಪಡಿಸಿ ದ್ದರೆ, ಹದಿನೈದು ವರ್ಷಗಳಲ್ಲಿ ಈ ಜಲ ಮೂಲಗಳನ್ನೆಲ್ಲ ಉಳಿಸಬಹುದಿತ್ತೆಂಬುದು ಸ್ಥಳೀಯರ ಅಭಿಪ್ರಾಯ.

ಬಾವಿ ನೀರು ಏಕೆ ಹದಗೆಡುತ್ತದೆ?
ಜಲಪರಿಣತರು ಹೇಳುವಂತೆ, ಒಳಚರಂಡಿ ಸಮಸ್ಯೆಯಿಂದ, ತ್ಯಾಜ್ಯ ನೀರು ಸೇರ್ಪಡೆಯಿಂದ ಹಾಳಾಗುತ್ತದೆ. ನೀರು ಬಣ್ಣಕ್ಕೆ ತಿರುಗಿ, ಎಣ್ಣೆ ಅಂಶ ಕೂಡತೊಡಗುತ್ತದೆ. ಅದು ಬಾವಿ ನೀರು ಹಾಳಾಗುತ್ತಿರು ವುದರ ಲಕ್ಷಣ. ಇಲ್ಲೆಲ್ಲಾ ಆಗುತ್ತಿರುವುದೂ ಅದೇ.

ಬಾವಿ ನೀರು ಪರಿಶೀಲಿಸಿಕೊಳ್ಳಿ
ಬಾವಿ ನೀರು ಹಾಳಾಗಲು ಮುಖ್ಯ ಕಾರಣಗಳೆಂದರೆ, ಒಳಚರಂಡಿ ಬಿರುಕು ಬಿಟ್ಟು ತ್ಯಾಜ್ಯ ನೀರಿನ ಸೋರಿಕೆ ಬಾವಿ ನೀರಿಗೆ ಸೇರುವುದು. ಮತ್ತೂಂದು ವೆಟ್‌ವೆಲ್‌ ಸೋರಿಕೆ ಇದ್ದಲ್ಲಿ ಮಣ್ಣು ಸಡಿಲವಾಗಿ ಅಥವಾ ಮಣ್ಣು ಸಡಿಲ ಹೊಂದಿರುವ ಪ್ರದೇಶಗಳಲ್ಲಿ ಕೊಳಚೆ ನೀರು ಹರಿದು ಬಾವಿ ನೀರು ಕಲುಷಿತವಾಗುತ್ತದೆ. ಸಮೀಪದಲ್ಲೇ ಪ್ರಾಣಿ ವಧಾ ಕೇಂದ್ರ, ರಾಸಾಯನಿಕ ಕಂಪೆನಿಗಳು ಇದ್ದರೆ ಬಾವಿ ನೀರಿಗೆ ಸಮಸ್ಯೆಯಾಗುತ್ತದೆ. ಆ ಸಂದರ್ಭದಲ್ಲಿ ಬಾವಿ ನೀರು ದುರ್ನಾತ ಬೀರುತ್ತದೆ. ಬಣ್ಣ ಬದಲಾವಣೆಯಾಗುತ್ತದೆ. ಎಣ್ಣೆ ಜಿಡ್ಡಿನ ಆಂಶವೂ ಕಂಡು ಬರುತ್ತದೆ. ಅಂಥ ಸಂದರ್ಭದಲ್ಲಿ ಅಗತ್ಯವಾಗಿ ಬಾವಿ ನೀರನ್ನು ಹತ್ತಿರದ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಬೇಕು.
– ಪ್ರೊ. ಶ್ರೀನಿಕೇತನ್‌,
– ಪ್ರೊ. ಗಣಪತಿ ಮಯ್ಯ,
ಜಲ ಪರಿಣತರು, ಎನ್‌ಐಟಿಕೆ, ಸುರತ್ಕಲ್‌

ನಾವು ತ್ಯಾಜ್ಯ ನೀರು ಬಿಡಬೇಡಿ ಎಂದು ಈಗಾಗಲೇ ಪ್ರತಿಭಟನೆ
ಮಾಡಿದ್ದೇವೆ. ಜಿಲ್ಲಾಧಿಕಾರಿಗೂ ಮನವಿ ಮಾಡಿದ್ದೇವೆ. ಇಂದ್ರಾಣಿ ತೀರ್ಥ ಮುಕ್ತಿ ಆಂದೋಲನ ಸಮಿತಿ ವತಿಯಿಂದಲೂ ಹೋರಾಟ ನಡೆಸಿದ್ದೇವೆ. ನಮ್ಮ ಕೆಲಸವನ್ನೇನೂ ನಾವು ನಿಲ್ಲಿಸಿಲ್ಲ. ಸ್ಥಳೀಯರು ಮತ್ತು ಸೇವಾ ಸಂಘಟನೆಗಳ ಸಹಾಯದಿಂದ ಕೆರೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಆದರೂ ತ್ಯಾಜ್ಯ ನೀರು ಹರಿಯುವಿಕೆ ನಿಲ್ಲದಿದ್ದರೆ
ಇವೆಲ್ಲವೂ ಹೀಗೇ ಹಾಳಾಗುತ್ತಲೇ ಇರುತ್ತವೆ. ನಾವು ಕಾನೂನು
ರೀತಿಯ ಮಾರ್ಗವನ್ನು ಹುಡುಕಿಕೊಳ್ಳಬೇಕಿದೆ.
– ವಿಜಯ್‌ ಸೇರಿಗಾರ್‌, ಕೊಡವೂರು ವಾರ್ಡ್‌ ಸದಸ್ಯ

ಟಾಪ್ ನ್ಯೂಸ್

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.