ಜಲ ಸಂರಕ್ಷಣೆ ಜಾಗೃತಿ: ಅಂಚೆ ಇಲಾಖೆಯಿಂದ ಅಂಚೆಚೀಟಿ, ಕಾರ್ಡ್‌

Team Udayavani, May 19, 2019, 6:10 AM IST

anche

ಉಡುಪಿ: ನೀರು ಉಳಿಸಿ ಅಂತರ್ಜಲ ಮಿತವಾಗಿ ಬಳಸಿ ಎಂಬ ಅಭಿಯಾನ ಬಲಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ನಾಗರಿಕರ ಜತೆಗೆ ಸರಕಾರಿ ಇಲಾಖೆಗಳ ಜವಾಬ್ದಾರಿಯ ಮಾತುಗಳೂ ಕೇಳಿ ಬರುತ್ತಿವೆ. ಅಂಚೆ ಇಲಾಖೆ ಈಗಾಗಲೇ 2 ವಿಧದ ಅಂಚೆಚೀಟಿ, ಪೋಸ್ಟ್‌ ಕಾರ್ಡ್‌ ಹಾಗೂ ಲಕೋಟೆ ಬಿಡುಗಡೆಗೊಳಿಸಿ ಈ ಅಭಿಯಾನವನ್ನು ಬೆಂಬಲಿಸಿದೆ.

ಅಂಚೆಚೀಟಿಗಳು
1990ರಲ್ಲಿ ಅಂಚೆ ಇಲಾಖೆಯು ಸೇಫ್ ವಾಟರ್‌ (ಸ್ವತ್ಛ ಜಲ) ಎಂಬ ಸಂದೇಶ ಹೊತ್ತ 4 ರೂ.ಮುಖಬೆಲೆಯ ಅಂಚೆಚೀಟಿ ಬಿಡುಗಡೆಗೊಳಿಸಿತ್ತು. ಇದರಲ್ಲಿ ಮಹಿಳೆಯೊಬ್ಬಳು ಬೋರ್‌ವೆಲ್‌ನಿಂದ ನೀರು ಸೇದುವ ಚಿತ್ರವಿತ್ತು. ಅನಂತರ ಎರಡನೇ ಅಂಚೆ ಚೀಟಿ 2007ರ ಡಿಸೆಂಬರ್‌ 28ರಂದು ರಾಷ್ಟ್ರೀಯ ಜಲದಿನದ ಅಂಗವಾಗಿ ಹೊರಬಂದಿತ್ತು. ಈ ಸ್ಟಾಂಪ್‌ 5ರೂ. ಮುಖಬೆಲೆ ಹೊಂದಿತ್ತು.

ನೀರು ಉಳಿಸಿ ಸಂದೇಶ
ಅಂಚೆ ಇಲಾಖೆಯು 25 ಪೈಸೆ ಮುಖಬೆಲೆಯ ಮೇಘದೂತ ಪೋಸ್ಟ್‌ ಕಾರ್ಡ್‌ ಬಿಡುಗಡೆಗೊಳಿಸಿತ್ತು. ಇದರಲ್ಲಿ ಅಂತರ್ಜಲ ಅತಿ ಮುಖ್ಯವಾಗಿದ್ದು, ಅದನ್ನು ಮಿತವಾಗಿ ಬಳಸಿ ಎಂಬ ಸಂದೇಶವಿತ್ತು. ಕಾರ್ಡ್‌ನಲ್ಲಿ ಮಹಿಳೆ ಬೊರ್‌ವೆಲ್‌ನಿಂದ ನೀರು ಸೇದುವ ಚಿತ್ರವೂ ಅದರಲ್ಲಿತ್ತು. ಇದಾದ ಅನಂತರ 2013ರ ಡಿ. 12ರಂದು 50 ಪೈಸೆ ಮುಖಬೆಲೆಯ ಮತ್ತೂಂದು ಪೋಸ್ಟ್‌ಕಾರ್ಡ್‌ ಅನ್ನು ಅಂಚೆ ಇಲಾಖೆ ಬಿಡುಗಡೆಗೊಳಿಸಿದೆ.

ವಿಶೇಷ ಅಂಚೆ ಲಕೋಟೆ
1999ರ ನವೆಂಬರ್‌ 23ರಂದು ಪುಟ್ಟಪರ್ತಿ ಶ್ರೀ ಸತ್ಯಸಾಯಿ ಕುಡಿಯುವ ನೀರಿನ ಯೋಜನೆ ಬಗ್ಗೆ ವಿಶೇಷ ಅಂಚೆ ಲಕೋಟೆ ಹಾಗೂ 2015ರ ಜು.7ರಂದು ಕೇಂದ್ರ ಸರಕಾರದ ನೀರು ಸಂರಕ್ಷಣೆ ಯೋಜನೆಗೆ ಚಾಲನೆ ನೀಡಿದ ಅಂಗವಾಗಿ ವಿಶೇಷ ಅಂಚೆ ಲಕೋಟೆಯನ್ನು ಇಲಾಖೆ ಹೊರತಂದಿದೆ.

ಸಹಕಾರ ಅಗತ್ಯ
ಇತ್ತೀಚಿನ ದಿನಗಳಲ್ಲಿ ಜೀವಜಲ ಕಡಿಮೆಯಾಗುತ್ತಿದ್ದು, ಜೀವಜಲದ ಮಹತ್ವ ಈಗ ಅರಿವಾಗುತ್ತಿದೆ. ಜೀವಜಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ನೀರು ಉಳಿಸುವ ಅಭಿಯಾನದ ಸಂದೇಶ ಹೊತ್ತ ಪೋಸ್ಟ್‌ ಕಾರ್ಡ್‌, ಲಕೋಟೆಯನ್ನು ಅಂಚೆ ಇಲಾಖೆಯ ಮೂಲಕ ಬಿಡುಗಡೆಗೊಳಿಸಬಹುದು.
– ಎಂ.ಕೆ.ಕೃಷ್ಣಯ್ಯ, ಹಿರಿಯ ಅಂಚೆಚೀಟಿ ಸಂಗ್ರಹಕಾರರು ಉಡುಪಿ

ಟಾಪ್ ನ್ಯೂಸ್

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

Thiruvannamali

Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Nithin-gadkari

Nagpura: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

accident

Shirva: ಬೈಕ್‌ಗೆ ಜೀಪು ಢಿಕ್ಕಿ; ಸವಾರನಿಗೆ ಗಾಯ

de

Karkala: ಕೌಟುಂಬಿಕ ಹಿಂಸೆ ಆರೋಪ; ವಿಷ ಸೇವಿಸಿದ್ದ ವಿವಾಹಿತ ಮಹಿಳೆ ಸಾವು

5

Karkala: ಅಪರಿಚಿತ ಬೈಕ್‌ ಸವಾರನಿಂದ ಚಿನ್ನದ ಸರ ಸುಲಿಗೆ; ಪ್ರಕರಣ ದಾಖಲು

Karkala: ನಂದಿಕೂರು-ಕೇರಳ ಹೈಟೆನ್ಷನ್ ವಿದ್ಯುತ್ ತಂತಿ ಯೋಜನೆ ಕಾಮಗಾರಿಗೆ ತಡೆ

Karkala: ನಂದಿಕೂರು-ಕೇರಳ ಹೈಟೆನ್ಷನ್ ವಿದ್ಯುತ್ ತಂತಿ ಯೋಜನೆ ಕಾಮಗಾರಿಗೆ ತಡೆ

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

accident

Shirva: ಬೈಕ್‌ಗೆ ಜೀಪು ಢಿಕ್ಕಿ; ಸವಾರನಿಗೆ ಗಾಯ

14

Punjalkatte: ಮಳೆಗೆ ಮನೆಯ ಗೋಡೆ ಕುಸಿತ

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

courts

Puttur: ರಸ್ತೆ ಬದಿಯಲ್ಲಿ ಶವ ಇರಿಸಿದ ಪ್ರಕರಣ; ಮೂವರಿಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.