Udupi; ಬೈಲಕೆರೆ ಬಳಿ ಮನೆಗಳಿಗೆ ನುಗ್ಗಿದ ನೀರು; ನಿವಾಸಿಗಳ ಸ್ಥಳಾಂತರ
Team Udayavani, Jun 27, 2024, 8:14 AM IST
![Udupi; ಬೈಲಕೆರೆ ಬಳಿ ಮನೆಗಳಿಗೆ ನುಗ್ಗಿದ ನೀರು; ನಿವಾಸಿಗಳ ಸ್ಥಳಾಂತರ](https://www.udayavani.com/wp-content/uploads/2024/06/udupi1-1-620x349.jpg)
![Udupi; ಬೈಲಕೆರೆ ಬಳಿ ಮನೆಗಳಿಗೆ ನುಗ್ಗಿದ ನೀರು; ನಿವಾಸಿಗಳ ಸ್ಥಳಾಂತರ](https://www.udayavani.com/wp-content/uploads/2024/06/udupi1-1-620x349.jpg)
ಉಡುಪಿ: ಇಲ್ಲಿನ ಬೈಲಕೆರೆ ಅದಮಾರು ಮಠದ ಬಳಿಯ ತೋಟದಲ್ಲಿ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಮನೆಯವರನ್ನು ಸ್ಥಳಾಂತರಿಸಲಾಗಿದೆ.
ರಾತ್ರಿ ಸುರಿದ ವಿಪರೀತ ಮಳೆಗೆ ಮುಂಜಾನೆ ವೇಳೆ ಸುಮಾರು 4 ಮನೆಗಳ ಒಳಗೆ ನೀರು ತುಂಬಿಕೊಂಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳೀಯರನ್ನು ರಕ್ಷಿಸಿದ್ದಾರೆ. ನಾಲ್ಕು ಮನೆಯಲ್ಲಿದ್ದ ಒಟ್ಟು 14 ಮಂದಿಯ ರಕ್ಷಣೆ ಮಾಡಲಾಗಿದೆ.
ಅವರಿಗೆ ಶ್ರೀ ಕ್ರಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ರುವ ಖಾಸಗಿ ಹೊಟೇಲ್ ನಲ್ಲಿ ಉಳಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ವ್ಯಾಪಕ ಮಳೆಯ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.