ಬ್ರಹ್ಮಾವರ ಗ್ರಾಮಾಂತರ: ಜೀವ ಜಲ ಬರಿದು

Team Udayavani, Apr 2, 2018, 6:45 AM IST

2403bvre1.jpg

ಬ್ರಹ್ಮಾವರ: ಬಿಸಿಲಿನ ಪರಿಣಾಮ ನೀರಿನ ಸೆಲೆಗಳು ತ್ವರಿತವಾಗಿ ಬರಿದಾಗುತ್ತಿದ್ದು, ಬ್ರಹ್ಮಾವರ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಸೀತಾನದಿ ಮತ್ತು ಮಡಿಸಾಲು ಹೊಳೆ ಕೂಡ ಒಣಗಲಾರಂಭಿಸಿದೆ. 
 
ಚೇರ್ಕಾಡಿಯಲ್ಲಿ ನೀರಿಲ್ಲ
ಕಳೆದ ವರ್ಷ ಕುಡಿಯುವ ನೀರಿನ ಭೀಕರ ಸಮಸ್ಯೆ ತಲೆದೋರಿದ್ದ ಪಾರ್ತಿಬೆಟ್ಟು, ಜಾರ್ಜಡ್ಡು ಪ್ರಗತಿ ನಗರದಲ್ಲಿ ಈ ಬಾರಿ ಬೋರ್‌ವೆಲ್‌ ಹಾಕಿಸಿದ್ದರಿಂದ ಸಮಸ್ಯೆ ಕಡಿಮೆ ಇದೆ. ಆದರೆ ಹೊಸಗರಡಿಬೆಟ್ಟು, ಮೈತ್ರಿನಗರ ಪ್ರದೇಶದಲ್ಲಿ ನೀರಿನ ಸಮಸ್ಯೆ ಈಗಾಗಲೇ ಇದೆ. 

ಕುಧ್ಕುಂಜೆಯಲ್ಲಿ ಮಡಿಸಾಲು 
ಹೊಳೆಯ ನೀರು ಶುದ್ಧೀಕರಣ- ಪೂರೈಕೆ ಘಟಕ ಸ್ಥಾಪನೆಯಿಂದ ಪಂಚಾಯತ್‌ ವ್ಯಾಪ್ತಿಯ ನೀರಿನ ಸಮಸ್ಯೆ ಒಂದು ಹಂತಕ್ಕೆ ಪರಿಹಾರ ಕಂಡಿದೆ. ಆದರೆ ಗೋರ್ಪಳ್ಳಿ ಸರ್ಪು ಕುಧ್ಕುಂಜೆ ಸೇತುವೆ ನಿರ್ಮಾಣ ಕಾಮಗಾರಿಯಿಂದ ನೀರಿನ ಸಂಗ್ರಹಕ್ಕೆ ತೊಂದರೆಯಾಗಿದೆ. ಮಡಿಸಾಲು ಹೊಳೆಯಲ್ಲಿ ವಿಪರೀತ ಮರಳುಗಾರಿಕೆಯಿಂದ ನೀರು ಬರಿದಾಗುವ ಆರೋಪವಿದೆ. ಕೊಕ್ಕರ್ಣೆಯಲ್ಲಿ ಅಂತರ್ಜಲ ವೃದ್ಧಿ ಪಂಚಾಯತ್‌ ವ್ಯಾಪ್ತಿಯ ಗುಂಡಾಲಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಈ ಬಾರಿ ಅಂತರ್ಜಲ ವೃದ್ಧಿಯಾಗಿದೆ. ಪಂಚಾಯತ್‌ ಅನುದಾನದಲ್ಲಿ ಹಲವೆಡೆ ಪೈಪ್‌ಲೈನ್‌ ಅಳವಡಿಸಿರುವುದರಿಂದ ಅನುಕೂಲವಾಗಿದೆ. ಒಟ್ಟು 11 ಬೋರ್‌ವೆಲ್‌, 2 ತೆರೆದ ಬಾವಿ ನೀರುಣಿಸುತ್ತಿವೆ.

ಕಳೂ¤ರಿನ ಹಲವೆಡೆ ಅಭಾವ 
ಪಂಚಾಯತ್‌ ವ್ಯಾಪ್ತಿಯ ಕೆಂಜೂರು, ಪಾದೇಮಠ, ಬಲ್ಲೆಬೈಲು, ಕಲ್ಲುಗುಡ್ಡೆ, ಕಳೂ¤ರು ಸಂತೆಕಟ್ಟೆ, ಸುಳ್ಳಿ ಪ್ರದೇಶದಲ್ಲಿ ಪ್ರತಿವರ್ಷ ಬೇಸಗೆಯಲ್ಲಿ ನೀರಿನ ಸಮಸ್ಯೆಯಾಗುತ್ತದೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಒಟ್ಟು 5 ಬೋರ್‌ ವೆಲ್‌ಗ‌ಳಿವೆ. ಇದರೊಂದಿಗೆ ಸೀತಾನದಿಯ ಜೋಮ್ಲುವಿನಿಂದ ನೀರು ಶುದ್ಧೀಕರಣಗೊಂಡು ಎಲ್ಲೆಡೆಗೆ ಪೂರೈಕೆಯಾಗುತ್ತಿದೆ.

ಇದ್ದ ನೀರೂ ಪೋಲು
ನಾಲ್ಕೂರು ಗ್ರಾ.ಪಂ.ನ ಬಹುತೇಕ ಭಾಗಕ್ಕೆ ನೀರುಣಿಸುವ ಮಿಯಾರು ಕಿಂಡಿ ಅಣೆಕಟ್ಟಿನ ಹಲಗೆ ಒಡೆದಿದೆ. ಪರಿಣಾಮ ಸಂಗ್ರಹಿಸಿದ ಅಮೂಲ್ಯ ಜೀವಜಲ ವ್ಯರ್ಥವಾಗಿದೆ.

ಸರಿಯಾದ ಸಮಯದಲ್ಲಿ ಹಲಗೆ ಹಾಕದಿರುವುದು, ಕಳಪೆ ಗುಣಮಟ್ಟದ ಹಲಗೆಯಿಂದ ಸಮಸ್ಯೆ ಬಿಗಡಾಯಿಸಿದೆ. ಜತೆಗೆ ತೋಡುಗಳಿಗೆ ಅಡ್ಡವಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟುಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆೆ. ಪ್ರತಿವರ್ಷದಂತೆ ಕರ್ಜೆ, ಮಾರಾಳಿ, ಮಿಯಾರು, ನಂಚಾರು, ಹೆಸ್ಕಾಂದ ಮೊದಲಾದ ಪ್ರದೇಶದಲ್ಲಿ ನೀರಿನ ಬವಣೆ ಪ್ರಾರಂಭವಾಗಿದೆ.

ಕರ್ಜೆಯಲ್ಲಿ  ಟ್ಯಾಂಕರ್‌ ನೀರು 
ಪಾಲಂಡೆ, ತಡಾಲು, ಹಾಡಿಬೆಟ್ಟು, ಕಡಂಗೋಡು, ಕೆಳಬೆಟ್ಟು, ಬ್ರಾಹ್ಮಣರಬೆಟ್ಟು, ಕುಪ್ಪಾಳ,ಬಾಳೆಬೆಟ್ಟು, ಗುಂಡಾಳ, ನೂಜಿ, ಆಲಡ್ಕ, ತಳಬ, ಕಂಗಿಬೆಟ್ಟು,ಮರ್ಡಿ, ಕುರ್ಪಾಡಿ, ಸರಂಬಳ್ಳಿ, ಹಾಲಿಬೆಟ್ಟು, ತೆಂಕಬೈಲು, ಕುಕ್ಕುಡೆ, ತೆಕ್ಕರಾಡಿ, ಉದ್ದಳ್ಕ ಪ್ರದೇಶಗಳಲ್ಲಿ ಬೇಸಗೆಯಲ್ಲಿ ನೀರಿನ ಕೊರತೆ ಸಾಮಾನ್ಯವಾಗಿದೆ. ಕೆಲವೆಡೆ ಪೈಪ್‌ಲೈನ್‌ ಅಳವಡಿಸಲಾಗಿದ್ದು, ತೀವ್ರ ಸಮಸ್ಯೆ ಇರುವಲ್ಲಿ ಟ್ಯಾಂಕರ್‌ ಮೂಲಕ ಪೂರೈಸಲಾಗುತ್ತದೆ. ಪಂಚಾಯತ್‌ ವ್ಯಾಪ್ತಿಯ 9 ಬೋರ್‌ವೆಲ್‌, 3 ತೆರೆದ ಬಾವಿ ನೀರಿನ ಮೂಲವಾಗಿದೆ.

ಶಾಶ್ವತ ಪರಿಹಾರ
ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್‌ ನೀರು ಪೂರೈಸಲು ತಯಾರಿ ಮಾಡಲಾಗಿದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾರ್ಯಗತವಾದರೆ ಶಾಶ್ವತ ಪರಿಹಾರ ದೊರೆಯಲಿದೆ.  

– ಪ್ರವೀಣ್‌ ಡಿ’ಸೋಜಾ,
 ಕಳೂ¤ರು ಪಿಡಿಒ

– ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mob

Karkala: ದೂರವಾಣಿ ಕರೆ ಮಾಡಿ ಹಣ ಲೂಟಿ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

1-kalla

Karkala: ಚಿನ್ನದಂಗಡಿ ಕಳ್ಳತನ: ಕುಖ್ಯಾತ ಸರಗಳ್ಳ ಅರೆಸ್ಟ್

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

ud-sp

Udupi ಹೊಸ ವರ್ಷಾಚರಣೆ: ಹಾನಿಕಾರಕ ಸಂದೇಶ ಎಚ್ಚರ ವಹಿಸಲು ಎಸ್‌ಪಿ ಸೂಚನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

death

Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು

arrested

Kasaragod: ಪತ್ನಿಯ ಹಂತಕನಿಗೆ 10 ವರ್ಷ ಕಠಿನ ಸಜೆ

saavu

Puttur: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.