ಮಠದಬೆಟ್ಟುವಿನ 25 ಬಾವಿಗಳ ನೀರು ದುರ್ನಾತ
Team Udayavani, Jan 15, 2021, 4:00 AM IST
ಉಡುಪಿ: ನಗರಸಭೆ ಇಚ್ಛಾಶಕ್ತಿಯ ಕೊರತೆ ಹಾಗೂ ಬೇಜವಾಬ್ದಾರಿತನದಿಂದಾಗಿ ನಗರದ ಜಲಮೂಲಗಳು ಕಲ್ಮಶಗೊಳ್ಳುತ್ತಿವೆ. ನಗರದ ಸರ್ವಿಸ್ ಬಸ್ ನಿಲ್ದಾಣದ ಸಮೀಪದ ವಾಣಿಜ್ಯ ಮಳಿಗೆಗಳ ಕೊಳಚೆ ನೀರು ನೇರವಾಗಿ ಮಳೆ ನೀರು ಹರಿಯುವ ಒಳಚರಂಡಿಗೆ ಬಿಡಲಾಗುತ್ತಿದೆ.
ಇದು ಕಾನೂನಿಗೆ ವಿರುದ್ಧವಾದರೂ, ಇದುವರೆಗೂ ನಗರಸಭೆಯಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ಸಾರ್ವಜನಿಕರು ಓಡಾಡುವ ಪ್ರದೇಶವೆಲ್ಲ ದುರ್ನಾತ ಬೀರುತ್ತಿವೆ.
25 ಕಡೆ ಬಾವಿ ನೀರು ದುರ್ನಾತ :
ಸರ್ವಿಸ್ ಬಸ್ ನಿಲ್ದಾಣ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಕೊಳಚೆ ನೀರು ಮಳೆ ನೀರು ಹರಿಯುವ ಚರಂಡಿಯ ಮೂಲಕ ಮಠದಬೆಟ್ಟುವಿನ ಮೂಲಕ ಹರಿದು ಇಂದ್ರಾಣಿಗೆ ಸೇರುತ್ತಿದೆ. ಇದರಿಂದಾಗಿ ಶಿರಿಬೀಡು ಟವರ್ ಹಿಂಭಾಗದ ಸುಮಾರು 25 ಕಡೆಗಳಲ್ಲಿ ಬಾವಿಯ ನೀರು ಒಂದು ವಾರದಿಂದ ದುರ್ನಾತ ಬೀರುತ್ತಿದೆ ಎಂದು ಮಠದಬೆಟ್ಟು ನಿವಾಸಿಗಳು ದೂರಿದ್ದಾರೆ. ನಗರಸಭೆಗೆ ಸಂಬಂಧಿಸಿದ ಸರ್ವಿಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳಿಗೆ ಇದುವರೆಗೂ ಡ್ರೈನೇಜ್ ಸಂಪರ್ಕ ನೀಡಿಲ್ಲ. ಇದರಿಂದಾಗಿ ನೀರು ನೇರವಾಗಿ ತಗ್ಗು ಪ್ರದೇಶದಲ್ಲಿರುವ ಬನ್ನಂಜೆ ವಾರ್ಡ್‌ನ ಮಠದಬೆಟ್ಟು ಪರಿಸರಕ್ಕೆ ಸೇರುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ದೂರು ನೀಡಿದರೂ ಕ್ರಮವಿಲ್ಲ :
ನಗರಸಭೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳು, ಅಧ್ಯಕ್ಷರಿಗೆ ಈಗಾಗಲೇ ದೂರು ನೀಡಿದ್ದೇವೆ. ಸರಿಪಡಿಸುವು ದಾಗಿ ಭರವಸೆ ನೀಡಿದ್ದಾರೆ. ಪ್ರಸ್ತುತ ನಗರಸಭೆಯ ನಳ್ಳಿ ನೀರನ್ನು ಕುಡಿಯಲು ಬಳಕೆ ಮಾಡುತ್ತಿದ್ದೇವೆ. ಬಾವಿ ಪಕ್ಕದಲ್ಲಿ ನಮಗೆ ನಿಂತುಕೊಳ್ಳಲೂ ಸಾಧ್ಯವಾಗು ತ್ತಿಲ್ಲ ಎಂದು ಮಠದಬೆಟ್ಟು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಶೀಘ್ರ ಸಮಸ್ಯೆ ಪರಿಹರಿಸಲು ಗಮನಹರಿಸುತ್ತೇನೆ. -ಸವಿತಾ ಹರೀಶ್ ರಾಮ್, ಸದಸ್ಯೆ, ಬನ್ನಂಜೆ ವಾರ್ಡ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.