ಸದ್ಯಕ್ಕಿಲ್ಲ ನೀರಿನ ಸಮಸ್ಯೆ; ತಾತ್ಕಾಲಿಕ ಪರಿಹಾರವೂ ಸಿದ್ಧ
ಕಡೆಕಾರು, ಅಂಬಲಪಾಡಿ ಗ್ರಾಮಪಂಚಾಯತ್
Team Udayavani, Mar 16, 2020, 5:19 AM IST
ಕಡೆಕಾರು, ಅಂಬಲಪಾಡಿ ಗ್ರಾ.ಪಂ.ಗಳ ಕೆಲವು ಭಾಗದಲ್ಲಿ ವರ್ಷವೂ ನೀರಿನ ಸಮಸ್ಯೆ ಇದೆ. ಆದರೆ ಕಳೆದ ವರ್ಷದ ಅನುಭವದಿಂದಾಗಿ ಗ್ರಾ.ಪಂ.ಗಳು ಈಗಾಗಲೇ ಬೇಸಗೆ ಎದುರಿಸಲು ಸಿದ್ಧತೆ ಮಾಡಿಕೊಂಡಿವೆ. ಶಾಶ್ವತ ಪರಿಹಾರಕ್ಕೂ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುತ್ತಿದೆ.
ಮಲ್ಪೆ: ಕಳೆದ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಕಡೆಕಾರು ಮತ್ತು ಅಂಬಲಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸದ್ಯ ನೀರಿನ ಸಮಸ್ಯೆ ಇಲ್ಲ. ಆದರೂ ಎಪ್ರಿಲ್-ಮೇ ತಿಂಗಳಲ್ಲಿ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕ ಪರಿಹಾರಗಳನ್ನೂ ಈಗಾಗಲೇ ಕಂಡುಕೊಳ್ಳಲಾಗುತ್ತಿದೆ.
ಕಡೆಕಾರು ಗ್ರಾ.ಪಂ.
ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡೆಕಾರು ಕುತ್ಪಾಡಿ ಗ್ರಾಮದ ಬಹುಭಾಗವು ಉಪ್ಪು ನೀರಿನ ಪ್ರದೇಶವಾದ್ದರಿಂದ ಇಲ್ಲಿ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯ. ಈ ಬಾರಿ ನೀರಿನ ಸಮಸ್ಯೆ ನೀಗಿಸುವಲ್ಲಿ ಪಂಚಾಯತ್ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಶಾಶ್ವತ ಪರಿಹಾರದ ಅಗತ್ಯವೂ ಇಲ್ಲಿಗಿದೆ.
ಪರಿಹಾರ ಕ್ರಮಗಳೇನು?
ಕುತ್ಪಾಡಿ ಮಾಂಗೋಡು ಸುಬ್ರಹ್ಮಣ್ಯ ದೇವಸ್ಥಾನ ಹಿಂಬದಿ ಜಿ.ಪಂ. ಅನುದಾನದಿಂದ 1ಲಕ್ಷ ಲೀ. ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್‌ನ್ನು ನಿರ್ಮಿಸಲಾಗಿದ್ದು ಇದಕ್ಕೆ ಎಸ್‌ಡಿಎಂ ಕಾಲೇಜು ಮೂಡುತೋಟದ ಬಳಿ ಹೊಸ ಬಾವಿ ತೆರೆದು ನೀರು ಪೂರೈಕೆ ಮಾಡಲಾಗುತ್ತದೆ. ಇದರಿಂದ ಕುತ್ಪಾಡಿ ಸಸಿತೋಟದ ಭಾಗದ ಜನರಿಗೆ ಹೆಚ್ಚು ಉಪಯೋಗವಾಗಲಿದೆ. ಕಟ್ಟೆಗುಡ್ಡೆಯ ಬಳಿ ಬಾವಿಯನ್ನು ತೆರೆಯಲಾಗಿದೆ. ಕಟ್ಟೆಗುಡ್ಡೆ ಬಳಿ 2ಲಕ್ಷ ಲೀಟರ್‌ನ ಅಂಡರ್‌ಗ್ರೌಂಡ್ ಟ್ಯಾಂಕ್‌ನ ಕಾಮಗಾರಿ ಪ್ರಗತಿಯಲ್ಲಿದೆ.
ಅಂಬಲಪಾಡಿ ಗ್ರಾ.ಪಂ.
ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸರಕಾರಿ ಜಾಗದಲ್ಲಿ ಶುದ್ಧ ನೀರಿನ ಮೂಲ ಇಲ್ಲ. ಹಾಗಾಗಿ ಕುಡಿಯುವ ನೀರಿಗೆ ಉಡುಪಿ ನಗರಸಭೆಯನೇ° ಆಶ್ರಯಿಸಬೇಕಾಗಿದೆ. ಕಿದಿಯೂರು ಗ್ರಾಮದ ಪಡುಕರೆ, ಕಿದಿಯೂರು ಮೂಡುದಡ್ಡಿ, ಪಡುದಡ್ಡಿ, ಬಂಕೇರುಕಟ್ಟ ಉಪ್ಪು ನೀರಿನಿಂದಾಗಿ ಸಮಸ್ಯೆ ಉಲ್ಬಣಿಸಿತ್ತು. ಸುಮಾರು 300 ಮನೆಗಳಿಗೆ ನೀರಿನ ಸಮಸ್ಯೆ ಉಂಟಾಗಿತ್ತು. ಹೆಚ್ಚಾಗಿ ಟ್ಯಾಂಕರ್ ನೀರನ್ನು ಸರಬರಾಜು ಮಾಡಲಾಗಿತ್ತು. ಕಪ್ಪೆಟ್ಟು ಬಳಿ ಪಾದೆ ಇರುವುದರಿಂದ ಸಮಸ್ಯೆ ತೀವ್ರವಾಗಿತ್ತು. ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ.
ಪರಿಹಾರ ಕ್ರಮಗಳೇನು?
ರಾ.ಹೆ. ಪೆಟ್ರೋಲ್ ಬಂಕ್ ಹಿಂದೆ ಕೆರೆ ಇರುವ ಜಾಗದಲ್ಲಿ ಬಾವಿ ನಿರ್ಮಾಣಕ್ಕೆ ಜಿ.ಪಂ. ನಿಂದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾವರೆ ಕರೆ ಬಳಿ ಪಂಚಾಯತ್ ಬಾವಿ ಇದ್ದು ಕರೆಯನ್ನು ಅಭಿವೃದ್ದಿ ಪಡಿಸಿದರೆ ಒರತೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಶಾಸಕರ ನಿಧಿನಿಂದ 50ಲಕ್ಷ ರೂಪಾಯಿ ಕೆರೆ ಅಭಿವೃದ್ದಿ ಮಂಜೂರಾತಿ ದೊರೆತಿದೆ. ಬಾಪುತೋಟದ ಬಳಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಶಾಸಕರಿಗೆ ಮನವಿ ಮಾಡಲಾಗಿದ್ದು, ಈ ಬಗ್ಗೆ ಪ್ರಯತ್ನ ನಡೆದಿದೆ.
ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ.
ಬಾವಿ ನಿರ್ಮಾಣ
ಅಂಬಲಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಿಯೂ ಸರಿಯಾದ ನೀರಿನ ಮೂಲ ಇಲ್ಲ. ನಗರಸಭೆಯ ನೀರನ್ನೇ ಅವಲಂಬಿಸಿದೇªವೆ. ಆದಿವುಡುಪಿ ಬಳಿಯಿರುವ ಕೆರೆಯಲ್ಲಿ ಕೊನೆವರೆಗೂ ನೀರು ಇರುವುದರಿಂದ ಇಲ್ಲೊಂದು ಬಾವಿ ನಿರ್ಮಾಣ ಮಾಡಿ ಪೈಪ್‌ಲೈನ್ ಮೂಲಕ ನೀರು ಪೂರೈಕೆ ಮಾಡಿದರೆ ಶಾಶ್ವತ ಪರಿಹಾರ ಸಿಗಬಹದೆಂಬ ನೆಲೆಯಲ್ಲಿ ಜಿ.ಪಂ. ಅಧ್ಯಕ್ಷರ ಮೂಲಕ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ.
– ವಸಂತಿ, ಪಿಡಿಓ, ಅಂಬಲಪಾಡಿ ಗ್ರಾ.ಪಂ.
ಸಮಸ್ಯೆಯಾಗದು
ನೀರಿನ ಸಮಸ್ಯೆ ಕಾಡದಂತೆ ಎಚ್ಚರ ವಹಿಸಲಾಗುತ್ತದೆ. ಈ ಬಾರಿ ಹೆಚ್ಚುವರಿಯಾಗಿ ಎರಡು ಹೊಸ ಬಾವಿ ಒಂದು ಓವರ್‌ಹೆಡ್ ಟ್ಯಾಂಕ್ ರೆಡಿಯಾಗಿದೆ. ಕಡೆಕಾರು ಪಡುಕರೆಯಲ್ಲಿ ಓವರ್‌ಹೆಡ್ ಟ್ಯಾಂಕ್ ಮತ್ತು ಒಂದು ಬಾವಿ, ಹಾಗೂ ಕನ್ನರ್ಪಾಡಿಯಲ್ಲಿ ಓವರ್‌ಹೆಡ್ ಟ್ಯಾಂಕ್ ಮತ್ತು ಬಾವಿಗೆ ನಿರ್ಮಾಣಕ್ಕೆ ಜಿ.ಪಂ. ನಿಂದ ಅನುದಾನ ಮಂಜೂರಾಗಿದೆ. ಹಾಗಾಗಿ ಮುಂದಿನ ದಿನದಲ್ಲಿ ನೀರಿನ ಸಮಸ್ಯೆ ಎದುರಾಗದು.
– ಪ್ರವೀಣ್ ಡಿಸೋಜಾ, ಪಿಡಿಓ., ಕಡೆಕಾರು ಗ್ರಾ.ಪಂ.
-ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.