ನೀರಿದೆ; ಕುಡಿಯುವಂತಿಲ್ಲ: ಬನ್ನಂಜೆ ವಾರ್ಡ್ ಕಥೆ-ವ್ಯಥೆ
ತ್ಯಾಜ್ಯ ನೀರು ಹರಿದು ಬಾವಿಯ ನೀರೂ ಕಲುಷಿತ
Team Udayavani, Apr 30, 2019, 6:30 AM IST
ಉಡುಪಿ: ಸುಮಾರು 2,910ರಷ್ಟು ಜನಸಂಖ್ಯೆ ಇರುವ ಬನ್ನಂಜೆ ವಾರ್ಡ್‌ನ ಮಠದ ಬೆಟ್ಟು ಪರಿಸರದಿಂದ ಕಲ್ಸಂಕದವರೆಗೆ ಸುಮಾರು 100ರಿಂದ 150ರಷ್ಟು ಮನೆಗಳಿವೆ. 50ರಿಂದ 60ರಷ್ಟು ಬಾವಿಗಳಿದ್ದರೂ ನೀರು ಕುಡಿಯಲು ಅಯೋಗ್ಯವಾಗಿದೆ. ಅದಕ್ಕೆ ಕಾರಣ ತ್ಯಾಜ್ಯ ನೀರು!. ಇದರಿಂದಾಗಿ ಇಲ್ಲಿನ ವಾರ್ಡಿನ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ನಗರದ ಸರ್ವಿಸ್ ಬಸ್ಸು ತಂಗುದಾಣದಿಂದ ಹರಿಯುವ ತ್ಯಾಜ್ಯ ನೀರು ಮಳೆ ನೀರು ಹರಿ ಯುವ ಒಳಚರಂಡಿ ತೋಡಿನಲ್ಲಿ ಹರಿಯು ತ್ತಿದೆ. ಇದರಿಂದ ಕಂಗೀತೋಟ ಪ್ರದೇಶದಲ್ಲಿ ರುವ ಬಾವಿ ನೀರುಗಳೂ ಕಲುಷಿತಗೊಂಡಿವೆ. ನೀರಿದ್ದರೂ ಕುಡಿಯಲಾಗದಂತಹ ಪರಿಸ್ಥಿತಿ ಇದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಅಮಿತಾ.
ಊರೆಲ್ಲ ಗಬ್ಬು ವಾಸನೆ
ತ್ಯಾಜ್ಯ ನೀರು ಹರಿಯುವುದರಿಂದ ಈ ವ್ಯಾಪ್ತಿಯಲ್ಲಿ ಗಬ್ಬುವಾಸನೆ ಹರಡಿದೆ. ಚರಂಡಿ ಸಂಪೂರ್ಣ ತೆರೆದಿದ್ದು, ರೋಗ – ರುಜಿನಗಳು ಹರಡುವ ಭೀತಿಯೂ ಇದೆ. ತ್ಯಾಜ್ಯ ನೀರು ಚರಂಡಿಯಲ್ಲೇ ನಿಲ್ಲುವ ಕಾರಣ ಸೊಳ್ಳೆಗಳ ತಾಣವಾಗಿದೆ. ಬಾವಿಗಳ ನೀರು ಕೂಡ ಕಲುಷಿತಗೊಂಡಿದೆ. ತೋಟಕ್ಕೆ ನೀರು ಬಿಡಬಹುದಷ್ಟೇ ಆದರೆ ಕುಡಿಯಲು ಏನು ಮಾಡುವುದು? 3 ದಿನಕ್ಕೊಮ್ಮೆ ಬರುವ ನೀರನ್ನೇ ಕಾಯಬೇಕು ಎಂಬ ಅಸಹಾಯಕತೆ ಮಲ್ಲಿಕಾ ಅಂಚನ್ ಅವರದು.
ಅಂಗಡಿಗಳಿಗೂ ಇದೇ ಬಾವಿ ನೀರು!
ರಸ್ತೆ ಬದಿ ವ್ಯಾಪಾರ ಮಾಡುವ ಅಂಗಡಿಗಳಿಗೂ ಇಲ್ಲಿಂದಲೇ ನೀರು ತೆಗೆದುಕೊಂಡು ಹೋಗುತ್ತಾರೆ. ನಾವು ಎಷ್ಟು ಹೇಳಿದರೂ ಅವರು ಕೇಳುವುದಿಲ್ಲ. ನೀರಿಲ್ಲದಿದ್ದರೆ ಅವರಾದರೂ ಏನು ಮಾಡಬೇಕು? ನಗರಸಭೆಯೂ ಟ್ಯಾಂಕರ್ ನೀರು ಪೂರೈಸುತ್ತಿಲ್ಲ ಎಂಬ ಕಳವಳವನ್ನು ವಿಮಲಾ ವ್ಯಕ್ತಪಡಿಸುತ್ತಾರೆ.
ಬಟ್ಟೆ ಒಗೆಯುವ ಚಿಂತೆ
ನೀರಿದೆ, ಕುಡಿಯುವಂತಿಲ್ಲ. ಕುಡಿಯುವ ನೀರು ಸಿಗುವುದು ಮೂರು ದಿನಕ್ಕೊಮ್ಮೆ. ತ್ಯಾಜ್ಯ ನೀರು ಹರಿಯುವುದಕ್ಕೆ ಪರಿಹಾರ ಕಲ್ಪಿಸಿದರೆ ನಮಗೆ ಸಮಸ್ಯೆಯಿಲ್ಲ. ಈಗಿನ ಸ್ಥಿತಿಯಲ್ಲಿ ಬಾವಿ ನೀರಿನಲ್ಲಿ ಬಟ್ಟೆ ಒಗೆಯಲೂ ಅಸಾಧ್ಯ ಎಂದು ನೇತಾಜಿನಗರದ ಅಂಬಿಕಾ ಹೇಳುತ್ತಾರೆ.
ಕೆಲವೆಡೆ ಓಕೆ
ನೇತಾಜಿ ನಗರ, ಕಂಗೀತೋಟ, ಮಠದಬೆಟ್ಟು, ಕಲ್ಸಂಕವರೆಗೂ ಇದೇ ಸಮಸ್ಯೆ ಇದೆ. ಕಲ್ಸಂಕ, ಎಸ್‌ಪಿ ಕಚೇರಿ, ಎಸ್‌ಟಿ ಕಾಲನಿ, ಹಳೇ ಆರ್‌ಟಿಒ ಕಚೇರಿ ಸಮೀಪ ಕೂಡ ಕೆಲವರು ಬಾವಿ ನೀರನ್ನು ಆಶ್ರಯಿಸಿದರೆ ಇನ್ನು ಕೆಲವರು ಮೂರು ದಿನಕ್ಕೊಮ್ಮೆ ಬರುವ ನಳ್ಳಿ ನೀರಿಗೆ ಅವಲಂಬಿತರಾಗಿದ್ದಾರೆ.
ಹಲವಾರು ವರ್ಷಗಳ ಸಮಸ್ಯೆ
ಚರಂಡಿ ನೀರಿನಿಂದ ಕುಡಿಯುವ ನೀರು ಹಾಳಾಗುತ್ತಿರುವುದು ಇಂದು ನಿನ್ನೆಯ ಸಮಸ್ಯೆಯಲ್ಲ. ಕಳೆದ 7-8 ವರ್ಷಗಳಿಂದಲೂ ಈ ಸಮಸ್ಯೆ ಇದೆ. ನಗರಸಭೆಗೆ ಪ್ರತೀ ವರ್ಷ ಮನವಿ ಕೊಡುವುದೇ ನಮಗೆ ಕೆಲಸವಾಗಿದೆ. ಯಾವುದೇ ದುರಸ್ತಿ ಕ್ರಮವನ್ನು ಕೈಗೊಳ್ಳಲಿಲ್ಲ. ತ್ಯಾಜ್ಯ ನೀರು ಹೋಗಲು ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ನಮಗೆ ಬಾವಿಯ ನೀರನ್ನಾದರೂ ಕುಡಿಯಲು ಉಪಯೋಗಿಸಬಹುದಿತ್ತು. ಆದರೆ ಒಳಚರಂಡಿಯ ಅಸಮರ್ಪಕ ನಿರ್ವಹಣೆಯಿಂದ ಅದು ಕೂಡ ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ ಮಠದಬೆಟ್ಟು ನಿವಾಸಿ ಆನಂದ್.
ಸಮಸ್ಯೆ ಗಮನಕ್ಕೆ ಬಂದಿದೆ
ಕಂಗೀತೋಟ, ಮಠದಬೆಟ್ಟು ಪರಿಸರದಲ್ಲಿ ನಗರದ ಡ್ರೈನೇಜ್ ನೀರು ಹರಿದು ಬರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ಈ ಬಗ್ಗೆ ಗಮನಹರಿಸಲಾಗುವುದು. ಉಳಿದೆಡೆ ಕೆಲವರು ಬಾವಿನೀರನ್ನು ಉಪಯೋಗಿಸಿದರೆ ಇನ್ನು ಕೆಲವರು ನಳ್ಳಿ ನೀರನ್ನು ಉಪಯೋಗಿಸುತ್ತಿದ್ದಾರೆ. ನಗರಸಭೆಗೆ ನಾವು ಆಯ್ಕೆಯಾದರೂ ಮಂಡಳಿ ಅಸ್ತಿತ್ವಕ್ಕೆ ಬಂದಿಲ್ಲ. ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ ಸಮಸ್ಯೆ ನೀಗಿಸಲು ಯತ್ನಿಸುತ್ತೇವೆ.
-ಸವಿತಾ ಹರೀಶ್ ರಾಂ ಭಂಡಾರಿ, ಬನ್ನಂಜೆ ವಾರ್ಡ್ ಸದಸ್ಯರು
ನಿರ್ವಹಣೆ ಮಾಡಲಿ
ನಮ್ಮ ವಾರ್ಡ್‌ನಲ್ಲಿ ಬಾವಿ ನೀರೇ ಅಧಿಕವಾಗಿದೆ. ಆದರೆ ಚರಂಡಿ ನೀರು ತುಂಬಿ ಉಪಯೋಗಿ ಸದಂತಾಗಿದೆ. ಇದನ್ನು ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಂಬಂಧಪಟ್ಟವರು ಮನಸ್ಸು ಮಾಡಬೇಕು.
-ಲಕ್ಷ್ಮೀ, ಸ್ಥಳೀಯರು
ವಾರ್ಡ್‌ನವರ ಬೇಡಿಕೆ
– ಎತ್ತರ-ತಗ್ಗು ಪ್ರದೇಶಗಳಿಗೆ ಸಮಪ್ರಮಾಣದಲ್ಲಿ ನೀರು ಒದಗಿಸಲಿ.
– ಲಭ್ಯ ಇರುವ ಬಾವಿ ನೀರನ್ನಾದರೂ ಉಪಯೋಗಿಸುವಂತೆ ಮಾಡಲು ಅನುಕೂಲ ಮಾಡಿಕೊಡಲಿ.
– ನೀರು ಉಪಯೋಗಿಸಲು ಇರುವ ಸಾಧ್ಯತೆಗಳನ್ನು ಪರಿಶೀಲಿಸುವ ಕೆಲಸ ನಗರಸಭೆಯಿಂದ ಆಗಲಿ.
– ಹೆಚ್ಚುವರಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಿ.
– ಹಗಲು ಹೊತ್ತು ನಳ್ಳಿ ನೀರು ನೀಡಿದರೆ ಉತ್ತಮ.
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.