ಹೆಜಮಾಡಿ: 9.85 ಲಕ್ಷ ರೂ. ವೆಚ್ಚದ ಶುದ್ಧ ನೀರಿನ ಘಟಕ ಉದ್ಘಾಟನೆ
Team Udayavani, Dec 11, 2018, 2:40 AM IST
ಪಡುಬಿದ್ರಿ: ಭೂಸೇನಾ ನಿಗಮದ ಮೂಲಕ ಅನುಷ್ಠಾನಗೊಂಡಿರುವ 9.85ಲಕ್ಷ ರೂ. ವೆಚ್ಚದ 5000 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ರವಿವಾರದಂದು ಕಾಪು ಶಾಸಕ ಲಾಲಾಜಿ ಮೆಂಡನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಲಾಲಾಜಿ ಸಾರ್ವಜನಿಕರಿಗಾಗಿ ಈ ಘಟಕವನ್ನು ತೆರೆಯಲಾಗಿದ್ದು ಜನತೆ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಸರಕಾರಿ ಸವಲತ್ತು ಉಪಯೋಗಿಸುವ ಮತ್ತು ಅದನ್ನು ರಕ್ಷಿಸುವ ಜವಾಬ್ದಾರಿಯೂ ತಮ್ಮದಾಗಿರುತ್ತದೆ ಎಂದರು.
ಭೂಸೇನಾ ನಿಗಮದ ಎಂಜಿನಿಯರ್ ದಿವ್ಯರಾಜ್, ನಿರ್ಮಿತಿ ಕೇಂದ್ರದ ಸಚಿನ್, ಹೆಜಮಾಡಿ ಗ್ರಾ. ಪಂ. ಉಪಾಧ್ಯಕ್ಷ ಸುಧಾಕರ ಹೆಜ್ಮಾಡಿ, ಗ್ರಾ. ಪಂ. ಸದಸ್ಯರಾದ ರೇಶ್ಮಾ, ವಾಸು ಕೋಟ್ಯಾನ್, ಪ್ರಾಣೇಶ್ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು. ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಹೆಜಮಾಡಿ ಗ್ರಾ. ಪಂ. ನ ನೂತನ ಕಟ್ಟಡಕ್ಕೆ ಶಾಸಕರ ನಿಧಿಯಿಂದ ಸುಮಾರು 10 ಲಕ್ಷ ರೂ.ಗಳ ಅನುದಾನವನ್ನು ಮಂಜೂರು ಮಾಡಬೇಕೆಂದರು. ಈ ಸಂದರ್ಭದಲ್ಲಿ ಶಾಸಕ ಲಾಲಾಜಿ ಮೆಂಡನ್ ಅವರನ್ನು ಗೌರವಿಸಲಾಯಿತು. ಹೆಜಮಾಡಿ ಗ್ರಾ. ಪಂ. ಪಿಡಿಒ ಮಮತಾ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಗ್ರಾ. ಪಂ. ಅಧ್ಯಕ್ಷ ನಡಿಕುದ್ರು ವಾಮನ್ ಕೋಟ್ಯಾನ್ ವಂದಿಸಿದರು.
ಹೆಜಮಾಡಿ ಬಂದರು ಅನುಷ್ಟಾನಕ್ಕೆ ಸರ್ವಯತ್ನ
ಹೆಜಮಾಡಿ ಬಂದರು ಯೋಜನೆಗಾಗಿ ಕೇಂದ್ರ ಸರಕಾರದ ಮೊದಲ ಕಂತು ಬಿಡುಗಡೆಗೊಂಡಿದೆ. ಸದ್ಯ ರಾಜ್ಯ ಸರಕಾರದ ಸಂಪುಟ ಅನುಮತಿಗಾಗಿ ಕಾದಿರುವ ಈ ಯೋಜನೆಗಾಗಿ ಮೀನುಗಾರಿಕಾ ಇಲಾಖೆಗೆ ಸುಮಾರು 35ಎಕ್ರೆ ಸ್ಥಳವನ್ನು ಹಸ್ತಾಂತರಿಸುವ ಪ್ರಕ್ರಿಯೆಯು ನಡೆದಿದೆ. ಹಸ್ತಾಂತರ ಪ್ರಕ್ರಿಯೆಯ ಬಳಿಕಷ್ಟೇ ಟೆಂಡರು ಪ್ರಕ್ರಿಯೆ ಆರಂಭಗೊಳ್ಳಲಿದೆ. ಸುಮಾರು 100 ಎಕ್ರೆಗಳಷ್ಟಿರುವ ಈ ಜಾಗವು ಬಳಿಯ ಜಿಲ್ಲೆಯ ಸಸಿಹಿತ್ಲುವರೆಗೂ ಕರಾವಳಿ ಭಾಗದಲ್ಲಿ ಉಡುಪಿ ಜಿಲ್ಲೆಯ ಕೊನೆಯ ಭೂಭಾಗವಾಗಿ ಆವರಿಸಿಕೊಂಡಿದ್ದು ಆ ಜಿಲ್ಲೆಯವರ ಕೊರೆತದ ಕುರಿತಾದ ಭಯದ ಪ್ರಶ್ನೆಯನ್ನೂ ನಿವಾರಿಸಿಕೊಂಡು ಯೋಜನೆಯನ್ನು ಶೇಕಡಾ ನೂರಕ್ಕೆ ನೂರು ಅನುಷ್ಠಾನಿಸಲಾಗುವುದು.
– ಲಾಲಾಜಿ ಮೆಂಡನ್, ಕಾಪು ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.