ಬೇಸಗೆ ನೀರಿನ ಅಭಾವ ತಪ್ಪಿಸಿದ ಜಲ ಮರುಪೂರಣ
Team Udayavani, Aug 1, 2019, 6:39 AM IST
ಉಡುಪಿ: ಉದಯವಾಣಿಯ ಮಳೆಕೊಯ್ಲು ಅಭಿಯಾನಕ್ಕೆ ಎಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈಗಾಗಲೇ ಹಲವಾರು ಮಂದಿ ಅನುಷ್ಠಾನಗೊಳಿಸಿಕೊಂಡಿರುವವರು ಫಲಿತಾಂಶ ಕಂಡು ಹೆಮ್ಮೆಪಡುತ್ತಿದ್ದಾರೆ. ಮಾರ್ಪಳ್ಳಿಯ ನಂದಗೋಕುಲ ಕ್ರೀಡಾಂಗಣ ಸಮೀಪದ ನಿವಾಸಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕ ಡಾ| ಆನಂದ ಆಚಾರ್ಯ ಅವರು 3 ವರ್ಷಗಳ ಹಿಂದೆ ಮನೆಯಲ್ಲಿ ಮಳೆಕೊಯ್ಲು ವಿಧಾನವನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.
ಮನೆಯ ಛಾವಣಿಯ ಮೇಲಿನಿಂದ ಬೀಳುವ ಮಳೆನೀರನ್ನು ಪೈಪ್‌ಗ್ಳ ಸಹಾಯದಿಂದ ನೇರವಾಗಿ ಬಾವಿಗೆ ಬಿಡುತ್ತಿದ್ದಾರೆ. ಪೈಪ್‌ಗ್ಳ ತುದಿಗೆ ಬಲೆಗಳನ್ನು ಅಳವಡಿಸಿದ್ದು, ಕಸಕಡ್ಡಿಗಳು ಇದರಲ್ಲಿ ಶೇಖರಣೆಯಾಗುತ್ತವೆ. 4 ದಿನಗಳಿಗೊಮ್ಮೆ ಇದನ್ನು ಶುಚಿತ್ವ ಮಾಡಲಾಗುತ್ತಿದೆ. ಇವರ ಛಾವಣಿಯ ಮೇಲೆ ಬೀಳುವ ಶೇ. 95 ಮಳೆನೀರು ಬಾವಿ ಸೇರುತ್ತಿದೆ.
ಕುಡಿಯಲು ಹಾಗೂ ಮರಗಿಡಗಳಿಗೆ ಸಿಂಪಡಿಸಲು ಅವರು ಇದನ್ನು ಬಳಕೆ ಮಾಡುತ್ತಿದ್ದಾರೆ. 3 ವರ್ಷಗಳ ಹಿಂದೆ ಬೇಸಗೆಯ ಸಮಯದಲ್ಲಿ ಇವರಿಗೆ ವಿಪರೀತ ನೀರಿನ ಅಭಾವ ಉಂಟಾಗುತ್ತಿತ್ತು. ಇದನ್ನು ಮನಗಂಡು ಅವರಿಗೆ ಮಳೆಕೊಯ್ಲು ಮಾಡುವ ಉಪಾಯ ಹೊಳೆಯಿತು. ಪೈಪ್ ಅಳವಡಿಕೆ ಹಾಗೂ ರಾಡ್‌ಗಳನ್ನು ಹಾಕಲು ಸುಮಾರು 18ರಿಂದ 20 ಸಾವಿರ ರೂ. ಖರ್ಚಾಗಿತ್ತು.
ಆದರೆ ಈಗ ಅದರ ಪರಿಪೂರ್ಣ ಪ್ರಯೋಜನ ಲಭ್ಯವಾಗುತ್ತಿದೆ ಎಂದು ತಿಳಿಸುತ್ತಾರೆ ಅವರು.
3 ವರ್ಷಗಳ ಹಿಂದೆ ಉಡುಪಿಯಲ್ಲಿ ತೀವ್ರವಾಗಿ ನೀರಿನ ಅಭಾವ ಉಂಟಾಗಿತ್ತು. ಆದರೆ ಇದನ್ನು ಅನುಷ್ಠಾನ ಮಾಡಿದ ಅನಂತರ ಇಲ್ಲಿಯವರೆಗೂ ನೀರಿಗೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಬೇಸಗೆಯಲ್ಲಿ ಪಂಪ್‌ಗ್ಳ ಮೂಲಕ ಬಾವಿಯಿಂದ ನೀರನ್ನು ಗಿಡಗಳಿಗೆ ಹಾಯಿಸಲಾಗುತ್ತಿತ್ತು. ಆದರೂ ಕೂಡ ಮೇ ತಿಂಗಳ ಅನಂತರವೂ ಬಾವಿಯಲ್ಲಿ ಸುಮಾರು ಮುಕ್ಕಾಲು ಅಡಿಯಷ್ಟು ನೀರು ಲಭ್ಯವಿರುತ್ತದೆ.
ಹೆಚ್ಚಾಯಿತು ಒರತೆ
ಮಳೆನೀರು ಕೊಯ್ಲು ಅನುಷ್ಠಾನದಿಂದ ಇವರ ಮನೆಯ ಪಕ್ಕದಲ್ಲಿರುವ ಬಾವಿಗಳ ಒರತೆಯೂ ಹೆಚ್ಚಾಗಿದೆ. ಇದರಿಂದಾಗಿ ಬೇಸಗೆಯ ಸಮಯದಲ್ಲಿಯೂ ನೀರಿಗಾಗಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಬಾವಿಗೆ ಬಿಟ್ಟ ನೀರು ಲಭಿಸುತ್ತದೆ. ಯಾವುದೇ ರೀತಿಯಲ್ಲಿ ದುರುಪಯೋಗವಾಗುವುದಿಲ್ಲ ಎನ್ನುತ್ತಾರೆ ಡಾ| ಆನಂದ ಆಚಾರ್ಯ ಅವರು.
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.