ಇಲ್ಲಿ 2 ದಿನಕ್ಕೊಮೆ 200 ಲೀ. ನೀರು ಸಿಕ್ಕರೆ ಅದೇ ಭಾಗ್ಯ
ಮರ್ಣೆ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ತೀವ್ರ ಅಭಾವ | ನಳ್ಳಿ ನೀರು ಪೂರೈಕೆ ಅಸಮರ್ಪಕ; ಸಂಕಷ್ಟದಲ್ಲಿ ಜನತೆ
Team Udayavani, Apr 27, 2019, 12:06 PM IST
ಅಜೆಕಾರು,ಎ.26: ಎರಡು ದಿನಕ್ಕೊಮ್ಮೆ 200 ಲೀ. ನೀರು ಪೂರೈಕೆಯಾದರೆ ಅದೇ ಇಲ್ಲಿನ ಜನತೆಯ ಭಾಗ್ಯ. ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಅಭಾವ ಬಿಗಡಾಯಿಸಿದ್ದು, ಬರಗಾಲದಛಾಯೆ ಆವರಿಸಿದೆ.
ಕೆಲ ಭಾಗಗಳಿಗೆ ನಳ್ಳಿಯಲ್ಲಿ 2 ದಿನಕ್ಕೊಮ್ಮೆ 1 ಗಂಟೆ ನೀರು ಪೂರೈಕೆಯಾಗುತ್ತದೆ. ಆದರೆ ಕೆಲ ಮನೆಗಳಿಗೆ ನೀರು ಬರುತ್ತಲೇ ಇಲ್ಲ. ಪಂಚಾಯತ್ ವ್ಯಾಪ್ತಿಯ ಗುಡ್ಡೆಯಂಗಡಿ, ಕಾಡುಹೊಳೆ, ದೆಪುತ್ತೆ, ಕಿರೆಂಚಿಬೈಲು, ಕೊಟ್ಟಾರಿಬೆಟ್ಟು, ನಂದಾರು, ಅಜೆಕಾರು, ನೀರಲ್ಕೆ, ಗುಂಡ್ಯಡ್ಕ, ಅಂಬೇಡ್ಕರ್ ಕಾಲನಿ, ಬಂಡಸಾಲೆ, ಕುರುಡೇಲು, ಜ್ಯೋತಿನಗರ, ಹೆರ್ಮುಂಡೆ, ನೇಲ್‌ನೆಕ್ಕರೆ, ಎಣ್ಣೆಹೊಳೆ, ಬೊಂಡುಕುಮೇರಿ, ಕೈಕಂಬ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಹಿಂದೆಂದಿಗಿಂತಲೂ ತೀವ್ರವಾಗಿ ಕಾಡಿದೆ. ವರ್ಷಗಳ ಹಿಂದೆ ನಳ್ಳಿ ನೀರಿನ ವ್ಯವಸ್ಥೆ ಇದ್ದಾಗ ಕುಡಿಯುವ ನೀರಿಗೆ ಸಮಸ್ಯೆ ಇರಲಿಲ್ಲ. ಇತ್ತೀಚೆಗೆ ನಳ್ಳಿ ನೀರು ಸ್ಥಗಿತಗೊಂಡಿರುವುದರಿಂದ ಸಮಸ್ಯೆ ತೀವ್ರವಾಗಿದ್ದು, ಯಾವಾಗ ನೀರು ಬರುತ್ತದೆ ಎಂದು ಕಾಯಬೇಕಾಗಿದೆ.
200 ಲೀ. ನೀರಲ್ಲಿ ಎಲ್ಲವೂ ಆಗಬೇಕು :
ಪಂಚಾಯತ್‌ನಿಂದ ಪೂರೈಕೆಯಾಗುವ 200 ಲೀಟರ್ ನೀರಿನಿಂದಲೇ ಅಡುಗೆ, ಸ್ನಾನ,ಬಟ್ಟೆ ಒಗೆಯಲು, ಶೌಚ್ಚಕ್ಕೆ ಉಪಯೋಗಿಸುವ ಅನಿವಾರ್ಯತೆ ಇದೆ. ಮನೆಯಲ್ಲಿ ಹೆಚ್ಚಿನ ಜನವಿದ್ದರೆ ಸಮಸ್ಯೆ ಹೇಳತೀರದು. ರಜೆ ದಿನಗಳಲ್ಲಿ ನೆಂಟರು ಬಂದರಂತೂ ಸಮಸ್ಯೆ ಬಿಗಡಾಯಿಸುತ್ತದೆ.
ದೂರದೃಷ್ಟಿ ಇಲ್ಲದ ಯೋಜನೆಗಳು :
7-8 ವರ್ಷಗಳ ಹಿಂದೆ ತೆರೆದ ಬಾವಿ, ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತಾದರೂ ಬಾವಿಯ ಆಳ ಕಡಿಮೆ ಇರುವುದರಿಂದ ಡಿಸೆಂಬರ್ ತಿಂಗಳಿನಲ್ಲಿಯೇ ನೀರಿನ ಕೊರತೆ ಕಾಡುತ್ತದೆ. ಇದರಿಂದ ಟ್ಯಾಂಕ್ ನಿಷ್ಪ್ರಯೋಜಕವಾಗಿದೆ. ಕಳೆದವರ್ಷ ಬೇಸಗೆಯಲ್ಲೇ ಮಳೆಯಾದ್ದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚೇನು ಉದ್ಭವವಾಗಿರಲಿಲ್ಲ. ಆದರೆ ಈ ಬಾರಿ ಮಳೆ ಸುರಿಯದೆ ಸಮಸ್ಯೆ ಹೆಚ್ಚಾಗಿದೆ.
ಬಾವಿ, ಕೊಳವೆ ಬಾವಿಗಳಲ್ಲಿ ನೀರಿಲ್ಲ: ಜನವರಿ ವೇಳೆ ಈ ಭಾಗದಲ್ಲಿ ಬಾವಿ, ಕೊಳವೆ ಬಾವಿಗಳ ಜಲಮಟ್ಟ ಕುಸಿದಿದೆ. ಒಂದೆರಡು ಖಾಸಗಿ ಬಾವಿಗಳ ತಳಮಟ್ಟದಲ್ಲಿ ಅಲ್ಪಸ್ವಲ್ಪ ಇದ್ದ ನೀರು ವಠಾರದ ಪ್ರತಿಯೊಂದು ಮನೆಗೂ ಆಸರೆಯಾಗಿತ್ತು. ಆದರೆ ಎ.15ರ ನಂತರ ಆ ಬಾವಿಗಳೂ ಬತ್ತಿವೆ. ಕೊಳವೆ ಬಾವಿಗಳೂ ಬರಿದಾಗಿವೆ. ಪ್ರತಿವರ್ಷ ನೀರಿನ ಸಮಸ್ಯೆ ಕಾಡುತ್ತಿದ್ದು, ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.