ಕುಸಿಯುವ ಭೀತಿಯಲ್ಲಿ ಶಿಥಿಲಗೊಂಡ ನೀರಿನ ಟ್ಯಾಂಕ್
Team Udayavani, Jan 11, 2019, 8:10 PM IST
ಕೋಟೇಶ್ವರ: ರಾ.ಹೆದ್ದಾರಿ 66 ರಿಂದ ಕವಲೊಡೆದು ಸಾಗುವ ಬೀಜಾಡಿ ವೈ ಜಂಕ್ಷನ್‌ನಲ್ಲಿ ಹೆದ್ದಾರಿಗೆ ತಾಗಿಕೊಂಡಂತೆ 33 ವರ್ಷ ಹಳೆಯ ಶಿಥಿಲಗೊಂಡ ನೀರಿನ ಟ್ಯಾಂಕ್ ಇದ್ದು ಕುಸಿಯುವ ಭೀತಿ ಎದುರಿಸುತ್ತಿದೆ. ಪಕ್ಕದಲ್ಲಿಯೇ ಅನೇಕ ಕುಟುಂಬಗಳು ವಾಸವಾಗಿದ್ದು ಬಿರುಕು ಬಿಟ್ಟಿರುವ ಟ್ಯಾಂಕ್ ಕುಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಸಮಸ್ಯೆಯಿದ್ದರೂ, ಇದನ್ನು ನೆಲಸಮಗೊಳಿಸಲು ಮಾತ್ರ ಇಲಾಖೆ ಮೀನಮೇಷ ಎಣಿಸುತ್ತಿರುವುದು ಇಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ತೆರವಿಗೆ ರೂ.2.50 ಲಕ್ಷ ವೆಚ್ಚ :
ತೆರವಿನ ಕಾರ್ಯಕ್ಕೆ ಕನಿಷ್ಟ 2.50 ಲಕ್ಷ ವೆಚ್ಚವಾಗಲಿದೆ. ಗೋಪಾಡಿ ಗ್ರಾ.ಪಂ.ನಲ್ಲಿ ಆರ್ಥಿಕ ಸಮಸ್ಯೆ ಇರುವುದರಿಂದ ಅಷ್ಟೊಂದು ಹಣ ಹೊಂದಾಣಿಕೆ ಮಾಡಲುಅಸಾಧ್ಯವಾಗಿದೆ. ಆದ್ದರಿಂದ ಸ್ಥಳೀಯರು ಟ್ಯಾಂಕ್ ತೆರವುಗೊಳಿಸುವಂತೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಬೈಂದೂರು ಸಹಿತ, ಗೋಪಾಡಿ ಗ್ರಾ.ಪಂ., ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆಶ್ವಾಸನೆ ನೀಡಿದ್ದಾರೆ
ಅನುದಾನದ ಕೊರತೆಯಿಂದ ವಾಟರ್ ಟ್ಯಾಂಕ್ ತೆರವು ಕಾರ್ಯಕ್ಕೆ ಹಿಂದೇಟು ಹಾಕಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು, ಇಲಾಖೆಗಳನ್ನು ಸಂಪರ್ಕಿಸಲಾಗಿದೆ. ಜಿ.ಪಂ. ಸಿ.ಇ.ಒ. ಕ್ರಮ ಕೈಗೊಳ್ಳುವ ಅಶ್ವಾಸನೆ ನೀಡಿದ್ದಾರೆ.
– ಗಣೇಶ ಪಿ., ಪಿ.ಡಿ.ಒ ಗೋಪಾಡಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.