ಕೃಷಿಭೂಮಿಗೆ ನೀರು: ಕಂಗಾಲಾದ ಕೃಷಿಕರು
Team Udayavani, Jun 12, 2018, 7:50 AM IST
ಕೋಟೇಶ್ವರ: ಗೋಪಾಡಿ, ಬೀಜಾಡಿ ಪರಿಸರದಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದ ನೀರಿನ ಹೊರ ಹರಿವಿಗೆ ಅನುಕೂಲ ಕಲ್ಪಿಸುವ ನೆಲಯಲ್ಲಿ ಪಂಚಾಯತ್ ಕೆಲವೆಡೆ ಹೂಳೆತ್ತದಿರುವುದರಿಂದ ಆ ಭಾಗದ ಚರಂಡಿಗಳಲ್ಲಿ ನೀರು ತುಂಬಿ ಅಕ್ಕಪಕ್ಕದ ಗದ್ದೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿರುವುದು ಕೃಷಿಕರಿಗೆ ಆತಂಕದ ವಾತಾವರಣ ಸೃಷ್ಟಿಸಿದೆ.
ಗೋಪಾಡಿಯಲ್ಲಿ ಉಂಟಾಗಿರುವ ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಗ್ರಾ.ಪಂ. ಸಹಕಾರದೊಡನೆ ಆ ಭಾಗದ ನಿವಾಸಿಗಳು ಸ್ವಯಂಪ್ರೇರಣೆಯಿಂದ ತೋಡಿನ ತೊಡಕನ್ನು ನಿಭಾಯಿಸಿದರೂ ಕೂಡ ಅನೇಕ ಗದ್ದೆಗಳು ಜಲಾವೃತಗೊಂಡಿದೆ. ಈ ರೀತಿಯ ವಿದ್ಯಮಾನಕ್ಕೊಂದು ಪರಿಹಾರ ಕಂಡುಕೊಳ್ಳುವಲ್ಲಿ ಮಳೆಗಾಲದ ಮೊದಲು ಎಲ್ಲಾ ಗ್ರಾಮ ಪಂಚಾಯತ್ ಗಳು ಒಳಚರಂಡಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಕೃತಕ ನೆರೆಯ ಹಾವಳಿಯನ್ನು ತಪ್ಪಿಸಲು ಸಾಧ್ಯವೆಂದು ಅಲ್ಲಿನ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.
ಇನ್ನಾದರೂ ಹೂಳೆತ್ತಿಯಾರೇ ?
ಬಹುತೇಕ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಒಳಚರಂಡಿ ಮಾಯವಾಗಿದ್ದು ಆ ಭಾಗದ ನಿವಾಸಿಗಳ ಮನೆಯ ಪಾಗಾರವು ಚರಂಡಿಯನ್ನು ಚಾಚಿರುವುದು ಪಂಚಾಯತ್‌ಗಳಿಗೆ ಇರಿಸು ಮುರಿಸಾದರೂ ಮುಂಬರುವ ದಿನಗಳಲ್ಲಿ ಸುರಿಯುವ ಭಾರೀ ಮಳೆಗೆ ಗ್ರಾಮೀಣ ಪ್ರದೇಶಗಳ ಮನೆಗಳು ನೀರಿನ ಹೊರ ಹರಿವಿಗೆ ವ್ಯವಸ್ಥೆ ಇಲ್ಲದೇ ಜಲಾವೃತಗೊಳ್ಳುವ ಮೊದಲೇ ಪಂಚಾಯತ್‌ಗಳು ಎಚ್ಚೆತ್ತುಕೊಳ್ಳಬೇಕಾಗಿದೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.