ಕುಡಿಯುವ ನೀರಿನ ಕಾಮಗಾರಿ: ಟಾಸ್ಕ್ಫೋರ್ಸ್‌ಗೆ 80 ಲ.ರೂ. ಬಿಡುಗಡೆ


Team Udayavani, Mar 10, 2017, 2:08 PM IST

10-UDUPI-8.jpg

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಕುಡಿಯುವ ನೀರಿನ ಕಾಮಗಾರಿಯ ಕಾರ್ಯಪಡೆಗೆ (ಟಾಸ್ಕ್ ಫೋರ್ಸ್‌) ಪ್ರಥಮ ಹಂತದಲ್ಲಿ 40 ಲ.ರೂ. ಅನುದಾನ ಬಂದಿದ್ದು, ಅದರ ಕಾಮಗಾರಿಗಳ ಪಟ್ಟಿ ಸಿದ್ಧಗೊಂಡು ಪ್ರಗತಿಯಲ್ಲಿದೆ. ಇದೀಗ ಮತ್ತೆ 40 ಲ.ರೂ. ಅನುದಾನ ಹಂಚಿಕೆಯಾಗಿ ಬಂದಿದ್ದು, ಈ ಅನುದಾನದಲ್ಲಿ ಕಾಮಗಾರಿಗಳ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಲು ಪ್ರಸ್ತಾವನೆ, ಅಭಿಪ್ರಾಯ ಸಂಗ್ರಹಣೆಗೆ ಹಾಗೂ ಮನೆನಿವೇಶನಗಳ ಬಗ್ಗೆ ಚರ್ಚಿಸಲು ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಅವರ ಅಧ್ಯಕ್ಷತೆಯಲ್ಲಿ ಉಡುಪಿ ತಾ.ಪಂ. ಸಭಾಂಗಣದಲ್ಲಿ ಗುರುವಾರ ಸಭೆ ನಡೆಯಿತು.

ಜಿ.ಪಂ., ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಪಿಡಿಒ, ವಿ.ಎ. ಸಹಿತ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಬೋರ್‌ವೆಲ್‌, ಬಾವಿಗಳಿಗೆ ಪಂಪು, ಪೈಪ್‌ಲೈನ್‌ ಅಳವಡಿಸಲು ತುರ್ತಾಗಿ ಮೆಸ್ಕಾಂ ಕನೆಕ್ಷನ್‌ಗಳನ್ನು ಮಾಡಬೇಕು. ನೀರಿನ ಮೂಲಗಳಿದ್ದರೂ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಧಿಕಾರಿಗಳು ಆದ್ಯತೆ ಮೇರೆಗೆ ಕೆಲಸ ಮಾಡಬೇಕು ಎಂದು ಶಾಸಕ ಸೊರಕೆ ಸೂಚಿಸಿದರು.

ಎಂಜಿನಿಯರ್‌ಗಳು ಅವರ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ಗಳಲ್ಲಿ ಇರುವ ನೀರಿನ ಸಮಸ್ಯೆಯನ್ನು ಗುರುತಿಸಿಕೊಳ್ಳಬೇಕು ಎಂದು ಹೇಳಿದ ಶಾಸಕರು, ಕಂದಾಯ ಇಲಾಖೆಯ ಜಾಗಗಳ ಸರ್ವೇ ನಡೆಸಲು ಅಗತ್ಯವಿರುವ ಸರ್ವೇಯರ್‌ಗಳ ಕೊರತೆಯ ಬಗ್ಗೆ ಕಂದಾಯ ಸಚಿವರ ಗಮನಕ್ಕೆ ತರಲಾಗುವುದು. ಅನುದಾನಗಳನ್ನು ಜೋಡಣೆ ಮಾಡಿಕೊಂಡು ಕಾಮಗಾರಿ ನಡೆಸಲಾಗುವುದು. ಅಗತ್ಯ ಬಿದ್ದರೆ ತನ್ನ ಶಾಸಕ ನಿಧಿಯಿಂದಲೂ ಅನುದಾನ ಬಳಸಿಕೊಳ್ಳಲಾಗುವುದು ಎಂದವರು ಹೇಳಿದರು.

ಪಲಿಮಾರಿನಲ್ಲಿ ಶ್ಮಶಾನ, ತ್ಯಾಜ್ಯ ವಿಲೇವಾರಿಗೆ ಗುರುತಿಸಿರುವ ಜಾಗದ ಬಳಿ ಇರುವ ಸಮಸ್ಯೆಯ ಕುರಿತು ವಿಷಯ ಪ್ರಸ್ತಾಪವಾಯಿತು. ಪಿಡಬ್ಲೂéಡಿ ರಸ್ತೆ ಪಕ್ಕ ಬೇಲಿ ಹಾಕಿರುವುದಕ್ಕೆ ಪಲಿಮಾರು ಗ್ರಾ.ಪಂ. ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಪೊಲೀಸ್‌ ಕಂಪ್ಲೇಂಟ್‌ ದಾಖಲಿಸಲು ಶಾಸಕರು ಪಿಡಬ್ಲೂéಡಿ ಅಧಿಕಾರಿಗಳಿಗೆ ಸೂಚಿಸಿದರು.

ಯುಪಿಸಿಎಲ್‌ನಿಂದ 4 ಬೋರ್‌ವೆಲ್‌ಗ‌ಳು ಎಲ್ಲೂರಿಗೆ ನೀಡಲಾಗಿದೆ. ಟಿ.ಸಿ. ಸಮಸ್ಯೆ ಇದೆ. ಪಡುಬೆಳ್ಳೆಯಲ್ಲಿ ಬಾವಿಯಾಗಿ 4 ವರ್ಷಗಳಾದರೂ ಮೆಸ್ಕಾಂ ಕನೆಕ್ಷನ್‌ ಆಗಿಲ್ಲ. ಪಟ್ಲ, ಪಡುಬಿದ್ರಿ ಹಾಸ್ಟೆಲ್‌ಗ‌ಳಲ್ಲಿ ನೀರಿನ ಸಮಸ್ಯೆ ಇದೆ. ನಡಾÕಲು ಗ್ರಾಮದಲ್ಲಿನ 2 ಬಾವಿಗಳು ಬತ್ತಿ ಹೋಗಿದ್ದು, ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ. ಮುದ್ದೂರು ಹರಿಜನ ಕಾಲನಿ ಬಾವಿ ಕುಸಿದಿದೆ. ಕಂದಾಯ ಇಲಾಖೆಯಲ್ಲಿ ಸರ್ವೇ ಕಾರ್ಯ ವಿಳಂಬ, ಹಕ್ಕುಪತ್ರದ ಸಮಸ್ಯೆಗಳ ಕುರಿತು ವಿಷಯ ಪ್ರಸ್ತಾಪಕ್ಕೆ ಬಂದಿತು.

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್‌ ಪಡುಬಿದ್ರಿ, ಜಿ.ಪಂ. ಸದಸ್ಯರಾದ ಚಂದ್ರಿಕಾ ರಂಜನ್‌ ಕೇಳ್ಕರ್‌, ಶಿಲ್ಪಾ ಜಿ. ಸುವರ್ಣ, ವಿಲ್ಸನ್‌ ರಾಡ್ರಿಗಸ್‌, ಮೈರ್ಮಾಡಿ ಸುಧಾಕರ ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ತಹಶೀಲ್ದಾರ್‌ ಮಹೇಶ್ಚಂದ್ರ, ತಾ.ಪಂ. ಇಒ ಶೇಷಪ್ಪ ಆರ್‌. ಉಪಸ್ಥಿತರಿದ್ದರು.

ಪಿಡಿಒ ಅವರಿಗೆ ವಸತಿಯದ್ದೇ ಗೋಳಂತೆ..!
ವಸತಿ ಯೋಜನೆಗಳಿಗೆ ಸಂಬಂಧಿಸಿ ವಸತಿ ನಿಗಮ ಆ್ಯಪ್‌ ತಯಾರಿಸಿದ್ದು, ಇದರಿಂದ ಬಹಳ ಸಮಸ್ಯೆಯಾಗುತ್ತಲಿದೆ. 1 ಮನೆಯದ್ದು 5 ಬಾರಿ ಫೊಟೋ ತೆಗೆಯಬೇಕಾಗಿದೆ. ಹೀಗಾಗಿ ಒಬ್ಬ ಪಿಡಿಒ 1 ಮನೆಗೆ ಕನಿಷ್ಠ 20 ಬಾರಿ ಭೇಟಿ ನೀಡಬೇಕಿದೆ. ಆ್ಯಪ್‌ಗೆ ಸರಿಯಾಗಿ ಅಪ್‌ಲೋಡ್‌ ಆಗದಿದ್ದರೆ, ಟಾರ್ಗೆಟ್‌ ಆಗದಿದ್ದರೆ ನಿಗಮದಿಂದ ಶೋಕಾಸ್‌ ನೊಟೀಸ್‌ ಕಳುಹಿಸುತ್ತಾರೆ. ಇದರಿಂದಾಗಿ ಬೇರೆ ಕೆಲಸಗಳತ್ತ ಗಮನ ಕೊಡಲೂ ಆಗುತ್ತಿಲ್ಲ ಎಂದು ಹಲವು ಪಿಡಿಒ ಅವರು ಶಾಸಕರಲ್ಲಿ ಗೋಳು ತೋಡಿಕೊಂಡರು. ಈ ಬಗ್ಗೆ ವಸತಿ ಸಚಿವರು, ನಿಗಮದ ಎಂಡಿ ಅವರಲ್ಲಿ ಮಾತನಾಡುವುದಾಗಿ ಶಾಸಕರು ತಿಳಿಸಿದರು.

ಮನೆನಿವೇಶನ ಹಂಚಿಕೆಗೆ ಕ್ರಮ
ಮನೆನಿವೇಶನಕ್ಕೆ ಜಾಗಗಳನ್ನು ಆಯಾ ಗ್ರಾ.ಪಂ.ಗಳನ್ನು ಗುರುತಿಸಿಡಬೇಕು. ಜಾಗದ ಲಭ್ಯತೆ ಇಲ್ಲದಿದ್ದರೆ, ಪಕ್ಕದ ಪಂಚಾಯತ್‌ಗಳಲ್ಲಿ ಜಾಗವಿದ್ದರೆ ಕೊಡಲು ಅವಕಾಶವಿದೆ. ಪಂಚಾಯತ್‌ ಕಾಡು, ನೆಡುತೋಪು, ಡೀಮ್ಡ್ ಫಾರೆಸ್ಟ್‌ ಇದ್ದಲ್ಲಿ ಅದನ್ನು ವಿರಹಿತಗೊಳಿಸಿ ನಿವೇಶನಕ್ಕೆ ಮೀಸಲಿಡಲು ಅವಕಾಶಗಳಿದೆ. ಜಿಲ್ಲಾಧಿಕಾರಿಗಳ ಹಂತದಲ್ಲಿ ಸಮಿತಿಯೊಂದಿದ್ದು, ಪಂಚಾಯತ್‌ ಕಾಡು, ನೆಡುತೋಪುವಿನ ಪಟ್ಟಿಯನ್ನು ಗ್ರಾ.ಪಂ.ಗಳು ತಹಶೀಲ್ದಾರ್‌ ಅಥವಾ ರೇಂಜರ್‌ ಅವರಿಗೆ ನೀಡಬೇಕು ಎಂದು ಶಾಸಕರು ಹೇಳಿದರು.

ಟಾಪ್ ನ್ಯೂಸ್

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

11

Manipal: ಡಂಪಿಂಗ್‌ ಯಾರ್ಡ್‌ ಆದ ಮಣ್ಣಪಳ್ಳ!

10

Udupi: ಒಂದೇ ವೃತ್ತ; ಪೊಲೀಸ್‌ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.