ಸಸ್ಯಾಮೃತದಲ್ಲಿ ನೀರೂರಿಸುವ ಖಾದ್ಯ ವೈವಿಧ್ಯ
Team Udayavani, Jul 30, 2018, 6:05 AM IST
ಕುಂದಾಪುರ: ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಆಹಾರ ಪದ್ದತಿ ಮಾಯವಾಗಿ, ಪಾಶ್ಚಿಮಾತ್ಯ ಆಹಾರವೇ ಪ್ರಧಾನವಾಗಿರುವ ಇಂದಿನ ಕಾಲಘಟ್ಟದಲ್ಲಿ ರವಿವಾರ ವಕ್ವಾಡಿ ಗುರು ಕುಲದಲ್ಲಿ ಸಾಂಪ್ರದಾಯಿಕ ಸಸ್ಯ ಪದಾರ್ಥಗಳಲ್ಲಿಯೇ ತಯಾರಿಸಿದ ಬಾಯಿ ನೀರೂರಿಸುವ ಬಗೆ-ಬಗೆಯ ಖಾದ್ಯಗಳನ್ನು ಉಣ ಬಡಿಸುವ “ಸಸ್ಯಾಮೃತ’ ಎನ್ನುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರೂ ದಾಸವಾಳ ಸೊಪ್ಪಿನ ಇಡ್ಲಿ, ಪತ್ರೋಡೆ ಪಲ್ಯ, ಬಾಳೆ ಕುಂಡಿಗೆ ಬಜೆ, ನುಗ್ಗೆ ಸೊಪ್ಪಿನ ಬೋಂಡಾ, ಬೂದು ನೇರಳೆ ತಂಬುಳಿ.. ಹೀಗೆ ಬಗೆ – ಬಗೆಯ ಖಾದ್ಯಗಳ ಸವಿಯುಂಡರು.
ಆಹಾರ ಪದ್ಧತಿ ಅರಿವು
ಮೂಡಿಸಲು ಕಾರ್ಯಕ್ರಮ
ಹಿಂದೆ ಆಷಾಢ ಮಾಸದಲ್ಲಿ ವಿವಿಧ ಬಗೆಯ ತಿಂಡಿ- ತಿನಿಸುಗಳು ಮಾಡಿ ತಿನ್ನು ವುದು ಹಿಂದಿನ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಈಗ ಆ ಆಹಾರ ಪದ್ಧತಿಗಳು ಮಾಯವಾಗುತ್ತಿದ್ದು, ಅದರ ಜಾಗವನ್ನು ಪಾಶ್ಚಿಮಾತ್ಯ ಆಹಾರಗಳು ಆಕ್ರಮಿಸಿವೆ. ಆರೋಗ್ಯ ದೃಷ್ಟಿಯಿಂದ ಪಾರಂಪರಿಕ ಆಹಾರ ಪದ್ಧªತಿ ಅತಿ ಅಗತ್ಯ ಎನ್ನುವ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
31 ಖಾದ್ಯಗಳು
ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರಿಗೂ ಔಷಧೀಯ ಗುಣಗಳಿರುವ ಒಟ್ಟು 31 ಬಗೆಯ ಖಾದ್ಯಗಳನ್ನು ತಯಾರಿಸಲಾಗಿತ್ತು. ಪುದೀನಾ ಜ್ಯೂಸ್, ಜಾಯಿಕಾಯಿ ಉಪ್ಪಿನಕಾಯಿ, ಈರುಳ್ಳಿ ಸೊಪ್ಪಿನ ಕೋಸಂಬರಿ, ಕರಿಬೇವಿನ ಎಲೆ ಚಟ್ನಿ, ಸಂದುಬಳ್ಳಿ ಚಟ್ನಿ, ವಾತಂಗಿ ಸೊಪ್ಪಿನ ಚಟ್ನಿ, ಸಾಂಬಾರ್ ಬಳ್ಳಿ ಸೊಪ್ಪಿನ ಚಟ್ನಿ, ಮೆಂತೆ ಸೊಪ್ಪಿನ ಸಾಸಿವೆ, ಕೆಸುವಿನ ದಮಟಿನ ಸಾಸಿವೆ, ಪತ್ರೋಡೆ ಪಲ್ಯ, ಕಣಿಲೆ ಪಲ್ಯ, ಕಣಿಲೆ ಪಲ್ಯ, ಬಾಳೆದಿಂಡಿನ ಪಲ್ಯ, ಮಾವಿನಕಾಯಿ ಮಂಗರಸ, ದಾಸವಾಳ ಸೊಪ್ಪಿನ ಇಡ್ಲಿ, ಸಬ್ಬಕ್ಕಿ ಸೊಪ್ಪಿನ ಶಾವಿಗೆ, ಪತ್ರೋಡೆ ಗಾಲಿ, ಎಲೆ ಉರಗ ಸೊಪ್ಪಿನ್ನ ಚಿತ್ರಾನ್ನ, ದಾಲಿcàನಿ ಎಲೆ ಕಡುಬು, ಅನ್ನ, ಬುದು ನೇರಳೆ ತಂಬುಲಿ, ಅತ್ತಿ ಕುಡಿ ತಂಬಳಿ, ಕಬ್ಬ ಹೆಸರು ಸಾರು, ನೆಕ್ಕರ ಸೊಪ್ಪಿನ ಪಳದಿ, ಹಲಸಿನ ಹಣ್ಣಿನ ಬರ್ಫಿ, ಹಲಸಿನ ಬೀಜದ ವಡೆ, ಬಾಳೆಕಾಯಿ ಸಂಜೀವನ, ತೊಡೆದೇವು, ನುಗ್ಗೆಸೊಪ್ಪಿನ ಬೋಂಡಾ, ಸಾಮೆ ಅಕ್ಕಿಯ ಪಾಯಸ, ಮಜ್ಜಿಗೆ ಹುಲ್ಲಿನ ಮಜ್ಜಿಗೆಯನ್ನು ಉಣ ಬಡಿಸಲಾಯಿತು.
ಅರಿವು ಮೂಡಬೇಕಿದೆ
ನಮ್ಮ ಪ್ರಾಚೀನ ಕಾಲದ ಆಹಾರ ಪದ್ಧತಿಯಿಂದ ಆರೋಗ್ಯಕ್ಕೆ ಹಾನಿಯಿರಲಿಲ್ಲ. ಔಷಧೀಯ ಗುಣಗಳನ್ನು ಹೊಂದಿದ ಆಹಾರವನ್ನು ಹಿಂದಿನವರು ಉಣ್ಣುತ್ತಿದ್ದರು. ಈಗದು ಮಾಯವಾಗುತ್ತಿದೆ. ಅದರ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
– ಸುಭಾಶ್ಚಂದ್ರ ಶೆಟ್ಟಿ,
ಬಾಂಡ್ಯ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕ
ತುಸು ಭಿನ್ನ ಆಹಾರ
ಬಹುತೇಕ ಎಲ್ಲ ಔಷಧೀಯ ಸಸ್ಯಗಳಿಂದ ತಯಾರಿಸಿದ ಆಹಾರ ನಿಜಕ್ಕೂ ಉತ್ತಮವಾಗಿತ್ತು. ಹಿಂದಿನ ವರ್ಷಗಳಿಗಿಂತ ಈ ಬಾರಿ ತುಸು ಭಿನ್ನ ಆಹಾರವಿತ್ತು. ಆರೋಗ್ಯಕ್ಕೆ ಇದು ಉತ್ತಮ. ಜೀರ್ಣಕ್ರಿಯೆಗೂ ಸಹಕಾರಿ.
– ಟಿ.ಬಿ. ಶೆಟ್ಟಿ,ವಕೀಲರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.