Government; ನಮ್ಮ ವರದಿ ಜಾರಿಗೊಳಿಸುವ ವಿಶ್ವಾಸವಿದೆ: ಜಯಪ್ರಕಾಶ್ ಹೆಗ್ಡೆ
Team Udayavani, Oct 10, 2024, 1:07 AM IST
ಉಡುಪಿ: ಸುಮಾರು 163 ಕೋ.ರೂ. ವೆಚ್ಚಮಾಡಿ ಸಿದ್ಧಪಡಿಸಿರುವ ವರದಿಯನ್ನು ಸರಕಾರ ಅನುಷ್ಠಾನಗೊಳಿಸಲು ಸಚಿವ ಸಂಪುಟದ ಮುಂದಿಡಲು ನಿರ್ಧರಿಸಿರುವುದು ಖುಷಿಯ ಸಂಗತಿ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಯೋಗದ ಅಧ್ಯಕ್ಷ ಅವಧಿ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಹಸ್ತಾಂತರ ಮಾಡಿದ್ದೇವೆ. ವರದಿ ಬಹಿರಂಗ ಪಡಿಸುವಂತೆ ಒತ್ತಡ ಹೇರುತ್ತಿದ್ದೇವೆ. ಇತ್ತೀಚಿಗೆ ಮುಖ್ಯಮಂತ್ರಿಯವರು ಕರೆದ ಸಭೆಯಲ್ಲಿ ನಾನೂ ಪಾಲ್ಗೊಂಡಿದ್ದೆ. ಕಾಂತರಾಜ್ ಅವರ ಅವಧಿಯಲ್ಲಿ ನೀಡಿದ್ದ ವರದಿಯನ್ನು ಸರಕಾರಗಳು ಒಪ್ಪಿಲ್ಲ. ನಮ್ಮ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದ್ದು, ಫೆ.18ರಂದು ಸಚಿವ ಸಂಪುಟದ ಮುಂದೆ ಇರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಇದಕ್ಕಿಂತ ಖುಷಿಯ ವಿಷಯ ಬೇರೆ ಇಲ್ಲ ಎಂದರು.
ಇದೊಂದು ಶಾಶ್ವತ ದಾಖಲೆಯಾಗಿ ಉಳಿಯಲಿದೆ. ಸರಕಾರ ಹೇಗೆ ನಿರ್ಧಾರ ತೆಗೆದುಕೊಳ್ಳುವುದು ಗೊತ್ತಿಲ್ಲ. ಮುಂದೆ ಕ್ಯಾಬಿನೆಟ್ ಸಬ್ ಕಮಿಟಿ ಮೂಲಕ ಚರ್ಚೆಗೆ ಕೊಡಬಹುದು. ವರದಿ ಓದದೇ ಯಾರೂ ವಿರೋಧ ಮಾಡಬಾರದು. ಕಾಂತರಾಜ್ ಅವರ ವರದಿಗೆ ನಾವು ಅಂತಿಮ ರೂಪ ನೀಡಿದ್ದೇವೆ. ಒಮ್ಮೆ ವರದಿ ನೋಡಿ ಬದಲಾವಣೆ ಇದ್ದರೆ ಸೂಚಿಸಬಹುದು. ವರದಿಯನ್ನು ಪೂರ್ಣವಾಗಿ ಓದಿದ ಮೇಲೆ ಯಾರೂ ವಿರೋಧಿಸುವ ಸಾಧ್ಯತೆ ಇಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.