ಗೆದ್ದಲು ತಿನ್ನುತ್ತಿರುವ 2000 ಮನೆ ನಿವೇಶನದ ಅರ್ಜಿಗಳನ್ನು ಮತ್ತೆ ತೆರೆಯುತ್ತೇವೆ : ಸೊರಕೆ
ಪೆರ್ಡೂರು ಪೇಟೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ
Team Udayavani, May 3, 2023, 2:34 PM IST
ಪೆರ್ಡೂರು: ನಾನು ಶಾಸಕನಾಗಿದ್ದಾಗ ಕಾಪು ಕ್ಷೇತ್ರದಲ್ಲಿ 94 ಸಿ ಕಾನೂನು ಮತ್ತು ಅಕ್ರಮ ಸಕ್ರಮ ಯೋಜನೆಯಡಿ 2 ಸಾವಿರ ಅರ್ಜಿಗಳನ್ನು ಶಿಫಾರಸು ಮಾಡಿದ್ದೇನೆ. ನಾನು ಶಿಫಾರಸು ಮಾಡಿದ ಅರ್ಜಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ ಎಂದು ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಪೆರ್ಡೂರು ಪೇಟೆಯಲ್ಲಿ ಸೋಮವಾರ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಾನು ಶಿಫಾರಸು ಮಾಡಿದ ಎಲ್ಲಾ ಅರ್ಜಿಗಳು ಗೆದ್ದಲು ಹಿಡಿದಿದ್ದು, ನಿಮ್ಮೆಲ್ಲರ ಆಶೀರ್ವಾದ ಪಡೆದು ಶಾಸಕನಾಗಿ ಆಯ್ಕೆಯಾದ ಮರುಕ್ಷಣವೇ ಅರ್ಜಿಯ ಕಟ್ಟನ್ನು ಮತ್ತೆ ತೆರೆದು, ಅದಕ್ಕೆ ಮರುಜೀವ ಕೊಟ್ಟು ಬಡವರಿಗೆ ಮನೆ ಮಂಜೂರಾತಿ ಮಾಡಿಸಿಕೊಡುವ ಕೆಲಸವನ್ನು ಕೈಗೆತ್ತಿಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು.
ದೇವಸ್ಥಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಒತ್ತು
ಬಿಜೆಪಿ ದೇವಸ್ಥಾನಗಳ ವಿಚಾರದಲ್ಲಿ ರಾಜಕೀಯ ಶುರುಮಾಡಿ ದೇವಸ್ಥಾನದ ಪರಂಪರೆಯನ್ನೇ ನಾಶ ಮಾಡಲು ಪ್ರಯತ್ನ ಮಾಡುತ್ತಿದೆ. ಪೆರ್ಡೂರು ರಸ್ತೆ ಅಗಲೀಕರಣ ಸಂದರ್ಭ ಪೆರ್ಡೂರು ದೇವಸ್ಥಾನಕ್ಕೆ ಹಾನಿಯಾಗದಂತೆ ರಸ್ತೆ ಅಗಲೀಕರಣ ನಡೆಸಬೇಕಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ವಿನಾಕಾರಣ ರಾಜಕೀಯ ಮಾಡುತ್ತಿದೆ. ಈಗಿನ ವ್ಯವಸ್ಥೆಯಲ್ಲಿ ರಸ್ತೆ ಅಗಲೀಕರಣ ನಡೆಸಿದಲ್ಲಿ ಪಾಣಿಪೀಠದಲ್ಲಿ ಕಂಪನ ಉಂಟಾಗುತ್ತದೆ ದೇವಸ್ಥಾನದ ಅರ್ಚಕರೇ ತಿಳಿಸಿದ್ದಾರೆ. ಅದರ ಜತೆಗೆ ಕೆರೆ, ರಥಬೀದಿಯೂ ನಾಶವಾಗುತ್ತದೆ. ಬೆ„ಪಾಸ್ ರಸ್ತೆ ಮೂಲಕ ಕಾಮಗಾರಿ ನಡೆದರೆ ದೇವಸ್ಥಾನಕ್ಕೆ ಯಾವುದೇ ಧಕ್ಕೆಯಾಗುಗುವುದಿಲ್ಲ. ದೇವಸ್ಥಾನ ಮತ್ತು ದೇವಸ್ಥಾನದ ಪಾವಿತ್ರತೆಗೆ ಧಕ್ಕೆಯಾಗದ ರೀತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಒತ್ತು ನೀಡುತ್ತೇವೆ ಎಂದರು.
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
ಕಾಪು ಕ್ಷೇತ್ರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಇದೆ. ಚುನಾವಣಾ ಸಂದರ್ಭದಲ್ಲಿ ಕುಡಿಯುವ ನೀರಿಗೆ ಆದ್ಯತೆ ಕೊಡುತ್ತಿಲ್ಲ. ಮೂಲಭೂತ ಸೌಕರ್ಯದಿಂದ ಜನರನ್ನು ವಂಚಿತರಾಗುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕುಡಿಯುವ ನೀರಿನ ಮೂಲ ಹುಡುಕುವ ಬದಲು ಪೈಪ್ ಲೆ„ನ್ ಮಾತ್ರ ಹಾಕುವ ಕೆಲಸ ನಡೆಸುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಹೆಜಮಾಡಿ ಶಾಂಭವಿ ನದಿ, ಕುರ್ಕಾಲು ಪಾಪನಾಶಿನಿ ನದಿ, ಬೆ„ರಂಪಳ್ಳಿ ಸ್ವರ್ಣಾ ನದಿಯಿಂದ ನೀರೆತ್ತಿ ಶುದ್ದೀಕರಣಗೊಳಿಸಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಮನೆ-ಮನೆಗೆ ನೀರು ಒದಗಿಸಲಾಗುವುದು ಎಂದರು.
ಕಾಪು ಕ್ಷೇತ್ರದ ಜನತೆಗೆ ಸೊರಕೆ ಉತ್ತಮ ಆಯ್ಕೆ
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೊಳಿ ಮಾತನಾಡಿ, ಭ್ರಷ್ಟಾಚಾರ, ವಂಚನೆ, ಅಕ್ರಮ ಪ್ರಕರಣಗಳಲ್ಲಿ ಸಿಲುಕಿರುವ ಬಿಜೆಪಿಯವರ ಬಗ್ಗೆ ಮತದಾರರು ಆಲೋಚಿಸಿ ಮತ ಹಾಕಬೇಕಾಗಿದೆ. ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಗದ್ದೆಯಲ್ಲಿದ್ದರೆ ಚಂದ, ಪ್ರಾಮಾಣಿಕವಾದ ಕೈಅಧಿಕಾರದಲ್ಲಿದ್ದರೆ ಚಂದ ಅಂತೆ. ಹಾಗಾಗಿ ಪ್ರಾಮಾಣಿಕ ವ್ಯಕ್ತಿತ್ವ ಮತ್ತು ಜನಪರ ಕಾಳಜಿ ಹೊಂದಿರುವ ವಿನಯ್ ಕುಮಾರ್ ಸೊರಕೆಯವರೇ ಕಾಪು ಕ್ಷೇತ್ರದ ಜನತೆಯ ಉತ್ತಮ ಆಯ್ಕೆಯಾಗಲಿ ಎಂದು ಅಭಿಪ್ರಾಯ ಪಟ್ಟರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಶಾಂತಾರಾಮ ಸೂಡ, ಚರಣ್ ವಿಠಲ್ ಕುದಿ, ಜಿತೇಂದ್ರ ಫುಟಾರ್ಡೊ, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.
ಯುವಕನಿಂದ ಚಿತ್ರ ಗಿಫ್ಟ್
ವಿನಯ್ ಕುಮಾರ್ ಸೊರಕೆಯವರ ವ್ಯಕ್ತಿತ್ವಕ್ಕೆ ಮನಸೋತ ಸಿದ್ಧಾಪುರದ ಯುವಕನೊಬ್ಬ ಸೊರಕೆಯವರನ್ನು ಹುಡುಕಿಕೊಂಡು ಬಂದು ಸ್ವತಃ ತಾನೇ ಪೆನ್ಸಿಲ್ ಮೂಲಕ ಬಿಡಿಸಿದ ಅವರ ಚಿತ್ರವನ್ನು ಉಡುಗೊರೆಯಾಗಿ ನೀಡಿ ಖುಷಿ ಪಟ್ಟ ಘಟನೆ ಸೋಮವಾರ ನಡೆದಿದೆ. ಪೆರ್ಡೂರಿನಲ್ಲಿ ಚುನಾವಣಾ ಪ್ರಚಾರ ಸಭೆಯ ವೇಳೆ ಈ ಘಟನೆ ನಡೆದಿದ್ದು ವಿನಯ ಕುಮಾರ್ ಸೊರಕೆಯವರ ಪ್ರಾಮಾಣಿಕ, ಜಾತ್ಯಾತೀತ ರಾಜಕಾರಣಕ್ಕೆ ಮನಸೋತಿದ್ದೇನೆ. ತುಂಬಾ ದಿನದಿಂದ ಅವರಿಗೊಂದು ಗಿಫ್ಟ್ ಕೊಡಬೇಕೆಂಬ ಆಸೆ ಮನಸ್ಸಲ್ಲಿತ್ತು. ಇವತ್ತು ಆಸೆ ಕೈಗೂಡಿದೆ ಎಂದು ಕಿರಣ್ ಜನ್ಸಾಲೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.