ನಾವು ಮತ ಹಾಕುತ್ತೇವೆ ನೀವೂ ಮತ ಹಾಕಿ ಅಭಿಯಾನ
Team Udayavani, Mar 14, 2019, 1:00 AM IST
ಮಣಿಪಾಲ : ಸುವರ್ಣ ಸಂಭ್ರಮದಲ್ಲಿರುವ ಉದಯವಾಣಿಯು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸುವ ಸಲುವಾಗಿ “ನಾವು ಮತ ಹಾಕುತ್ತೇವೆ, ನೀವೂ ಮತ ಹಾಕಿ’ ಎಂಬ ಅಭಿಯಾನ ಆರಂಭಿಸುತ್ತಿದೆ.
ಪ್ರಜಾತಂತ್ರವನ್ನು ಬೆಂಬಲಿಸುವ ಮತ್ತು ಅತ್ಯಂತ ಯಶಸ್ವಿಗೊಳಿಸುವ ದಿಸೆಯಲ್ಲಿ ಈ ಅಭಿಯಾನ ಆಯೋಜಿಸಿದೆ. ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಪದವಿ ವಿದ್ಯಾರ್ಥಿಗಳು ನೂರು ಪದಗಳಲ್ಲಿ “ನಮ್ಮ ಒಂದು ಮತ ದೇಶದ ಅಭಿವೃದ್ಧಿಗೆ ಎಷ್ಟು ಮಹತ್ವವಾದುದು’ ಎಂಬುದಾಗಿ ಬರೆದು ನಮ್ಮ ವಾಟ್ಸ್ ಆ್ಯಪ್ ನಂಬರ್‌ಗೆ ಕಳುಹಿಸಬೇಕು. ಹೆಸರು, ವ್ಯಾಸಂಗ ಮಾಡುತ್ತಿರುವ ತರಗತಿ, ಕಾಲೇಜು, ಊರು, ಭಾವಚಿತ್ರ ಹಾಗೂ ಸಂಪರ್ಕ ಸಂಖ್ಯೆಯನ್ನು ನಮೂದಿಸಬೇಕು. ಆಯ್ದ ಅತ್ಯುತ್ತಮ ಬರಹಗಳನ್ನು ಪ್ರಕಟಿಸಲಾಗುವುದು ಹಾಗೂ ಜಿಲ್ಲಾ ಮಟ್ಟದ ಅಭಿಯಾನಕ್ಕೆ ಆಯ್ಕೆ ಮಾಡಲಾಗುವುದು.
ಬರಹ ಸಂಪೂರ್ಣವಾಗಿ ಮತದಾನದ ಪಾವಿತ್ರ್ಯ ಹಾಗೂ ಮಹತ್ವವನ್ನು ಸಾರುವಂತಿರಬೇಕು. ಯಾವುದೇ ರಾಜಕೀಯ ಪಕ್ಷ ಅಥವಾ ಮುಖಂಡರ ಬಗೆಗಾಗಲೀ ಸಾಧನೆ ಬಗೆಗಾಗಲೀ ಇರಬಾರದು. ಅಂಥ ಬರಹಗಳನ್ನು ತಿರಸ್ಕರಿಸಲಾಗುವುದು.
ನಮ್ಮ ವಾಟ್ಸಾಪ್ ಸಂಖ್ಯೆ 80951 92817.
ಯುವ ಪ್ರಣಾಳಿಕೆ ಹೇಗಿರಬೇಕು?
ಉದಯವಾಣಿಯು ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಯುವ ಮತದಾರರ ಆಶೋತ್ತರಗಳನ್ನು ಪ್ರತಿನಿಧಿಸುವ ಸಲುವಾಗಿ ಪ್ರತ್ಯೇಕ “ಯುವ ಪ್ರಣಾಳಿಕೆ’ ರೂಪಿಸುತ್ತಿದೆ.
ಯುವಜನರು ತಮ್ಮ ದೃಷ್ಟಿಯಲ್ಲಿ ಅಭ್ಯರ್ಥಿಗಳು ಈಡೇರಿಸಬೇಕಾದ ಯುವ ಸಮುದಾಯದ ಐದು ಪ್ರಮುಖ ಆಶೋತ್ತರಗಳನ್ನು ಬರೆದು ಉದಯವಾಣಿಯ ಎಲೆಕ್ಷನ್ ಡೆಸ್ಕ್ ವಾಟ್ಸಪ್ ನಂಬರ್‌ಗೆ ಕಳುಹಿಸಬೇಕು. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು ಹಾಗೂ ಪ್ರಮುಖ ಆಶೋತ್ತರಗಳನ್ನು ಒಟ್ಟು ಮಾಡಿ ಯುವ ಪ್ರಣಾಳಿಕೆ ಪ್ರಕಟಿಸಲಾಗುವುದು. ಹೆಚ್ಚು ಪ್ರಶಂಸೆಗೊಳಪಡುವ ಆಶೋತ್ತರಗಳನ್ನು ಕಳುಹಿಸಿದವರನ್ನು ಅಭಿನಂದಿಸಲಾಗುವುದು.
ನಮ್ಮ ವಾಟ್ಸಾಪ್ ಸಂಖ್ಯೆ 7618774529.
ರಸಪ್ರಶ್ನೆ ಸ್ಪರ್ಧೆ
ದಕ್ಷಿಣ ಕನ್ನಡ ಜಿಲ್ಲೆಯ ಸ್ವೀಪ್‌ನ ಸಹಯೋಗದಲ್ಲಿ ಉದಯವಾಣಿಯು ಯುವ ಜನರಲ್ಲಿ ಮತದಾನ, ಚುನಾವಣೆ, ಪ್ರಜಾತಂತ್ರ ಕುರಿತು ಅರಿವು ಮೂಡಿಸುವ ಸಲುವಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಶುಕ್ರವಾರದಿಂದ ಆರಂಭಿಸ ಲಿದೆ. ದಕ್ಷಿಣ ಕನ್ನಡ ಜಿಲ್ಲೆಯವರು ಭಾಗವಹಿಸಿ ಬಹುಮಾನ ಗೆಲ್ಲಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.