ಹವಾಮಾನ-ಜಾಗತಿಕ ಇಂಧನ ನಿರ್ವಹಣೆ: ಮಣಿಪಾಲ ವಿ.ವಿ.ಗೆ “ಐಎಸ್‌ಒ 50001′
Team Udayavani, Jul 13, 2017, 3:30 AM IST
ಉಡುಪಿ: ಮಣಿಪಾಲ ವಿಶ್ವವಿದ್ಯಾನಿಯಲಯವು ಜಾಗತಿಕವಾಗಿ ಹವಾಮಾನ ಬದಲಾವಣೆಯ ಮಾನದಂಡಗಳಿಗೆ ಅನುಗುಣವಾಗಿ ಪರಿಣಾಮಕಾರಿಯಾಗಿ ಇಂಧನ ಬಲ,ಇಂಧನ ಉಪಯೋಗ, ನಿರ್ವಹಣೆ ದಕ್ಷತೆಯನ್ನು ಸಾಧಿಸಿದ ಕಾರಣ ಪ್ರಮಾಣಪತ್ರ ಐಎಸ್‌ಒ 50001 ಲಭ್ಯವಾಗಿದ್ದು, ಟಿಯುವಿ ರೇನ್‌ಲಾÂಂಡ್ ಪ್ರೈ.ಲಿ.ನ ವಲಯ ಪ್ರಬಂಧಕ ಬರ್ನ್ಡ್ ಹೇಗನ್ ಅವರು ಪ್ರಮಾಣ ಪತ್ರವನ್ನು ಬುಧವಾರ ಹಸ್ತಾಂತರಿಸಿದರು.
ಐಎಸ್‌ಒ 50001 ಮಾನದಂಡವನ್ನು ಮಣಿಪಾಲ ವಿವಿಯು ಯಶಸ್ವಿಯಾಗಿ ಅನುಷ್ಠಾನಿಸಿದೆ. ಪರಿಷ್ಕೃತ 9001, 14001 ಪ್ರಮಾಣಪತ್ರಗಳ ಮಾನದಂಡವನ್ನು ಕೂಡ ಪಾಲಿಸುವ ಮೂಲಕ ಗುಣಮಟ್ಟ ಸುಧಾರಣೆ, ಪರಿಸರ ನಿರ್ವಹಣೆಯನ್ನು ಹೆಚ್ಚಿಸಿದೆ ಎಂದು ಮಣಿಪಾಲ ವಿ.ವಿ. ಹೇಳಿದೆ.
ಐಎಸ್‌ಒ 9001 ಪ್ರಮಾಣ ಪತ್ರವನ್ನು ಮಣಿಪಾಲ ವಿವಿ ಸಹಕುಲಪತಿಗಳಾದ ಡಾ| ಪೂರ್ಣಿಮಾ ಬಾಳಿಗಾ ಮತ್ತು ಡಾ| ಜಿ.ಕೆ. ಪ್ರಭು ಅವರು ಸ್ವೀಕರಿಸಿದರು. ಐಎಸ್‌ಒ 14001 ಪ್ರಮಾಣ ಪತ್ರವನ್ನು ಕುಲಸಚಿವ ಡಾ| ನಾರಾಯಣ ಸಭಾಹಿತ್ ಅವರು ಮತ್ತು ಐಎಸ್‌ಒ 50001 ಪ್ರಮಾಣಪತ್ರವನ್ನು ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅವರು ಸ್ವೀಕರಿಸಿದರು. ಐಎಸ್‌ಒ 50001 ಪ್ರಮಾಣಪತ್ರ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ| ಎಚ್.ಎಸ್. ಬಲ್ಲಾಳ್, ಮಣಿಪಾಲ ವಿವಿ ಪರಿಸರದ ಮೇಲೆ ದುಷ್ಪರಿಣಾಮಗಳು ಬೀರದಂತೆ ಗರಿಷ್ಠ ಕಾಳಜಿಯನ್ನು ವಹಿಸಿಕೊಳ್ಳುತ್ತಲಿದೆ. ಶಿಕ್ಷಣ, ಆರೋಗ್ಯದಂತೆಯೇ ಸಮಾನ ಆದ್ಯತೆ ಪರಿಸರಕ್ಕೂ ನೀಡುತ್ತಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.