ಪ್ರವಾಸೋದ್ಯಮ ಅಭಿವೃದ್ಧಿಗೆ ವೆಬ್‌ಸೈಟ್ ಅಪ್‌ಡೇಟ್
Team Udayavani, Jul 17, 2017, 2:50 AM IST
ಉಡುಪಿ: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮಾಹಿತಿ, ಛಾಯಾಚಿತ್ರಗಳನ್ನು ವೆಬ್‌ಸೈಟಿನಲ್ಲಿ ಅಪಡೇಟ್ (ಆಧುನೀಕರಿಸಿ) ಮಾಡಲು ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ. ಈ ವೆಬ್‌ಸೈಟ್ ಬಿಡುಗಡೆ ಮುನ್ನ ಸಮಿತಿಯ ಸದಸ್ಯರು ವೀಕ್ಷಿಸಿ ಅಭಿಪ್ರಾಯ ತಿಳಿಸಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಜಿಲ್ಲೆಯ ಹೊಸ ಸೇರ್ಪಡೆಗಳು, ಹಬ್ಬಗಳ ಮಾಹಿತಿ, ಪ್ರವಾಸಿ ಸ್ಥಳಗಳ ಮಾಹಿತಿಯನ್ನೊಳಗೊಂಡ ಸಮಗ್ರ ವೆಬ್‌ಸೈಟ್ ಇಂದಿನ ಅಗತ್ಯ ಎಂದ ಅವರು, ಹೊಟೇಲ್ ಅಸೋಸಿಯೇಶನ್ ಅವರು ಪ್ರಚಾರಕ್ಕೆ ನೀಡಲೊಪ್ಪಿರುವ ಹೋರ್ಡಿಂಗ್‌ಗಳ ವಿನ್ಯಾಸವನ್ನು ಅಂತಿಮಪಡಿಸಲು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ತ್ರಾಸಿ, ಮರವಂತೆ ಅಕ್ರಮ ವ್ಯಾಪಾರಿಗಳನ್ನು ತೆರವುಗೊಳಿಸಲು ಸಭೆಯಲ್ಲಿ ಉಪಸ್ಥಿತರಿದ್ದ ಸಹಾಯಕ ಆಯುಕ್ತೆ ಶಿಲ್ಪಾ ನಾಗ್ ಅವರಿಗೆ ಜಿಲ್ಲಾಧಿಕಾರಿಗಳು ಹೇಳಿದರು.
ಪಡುಕರೆ ಅಭಿವೃದ್ಧಿ-ಅನುಮೋದನೆ
ಜಿಲ್ಲೆಯಲ್ಲಿ ಹೋಂ ಸ್ಟೇಗಳನ್ನು ಅಭಿವೃದ್ಧಿಪಡಿಸಲು ಕಾರ್ಯಾಗಾರಗಳನ್ನು ನಡೆಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ ಎಂದು ಸಹಾಯಕ ನಿರ್ದೇಶಕಿ ಅನಿತಾ ಅವರು ಸಭೆಗೆ ತಿಳಿಸಿದರು. ಮಲ್ಪೆ ಸಮೀಪದ ಪಡುಕರೆ ಅಭಿವೃದ್ಧಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, ಅದರ ಅನುಮೋದನೆಗಾಗಿ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ ಎಂದ ಅವರು, ಇಲಾಖೆ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಸಭೆಗೆ ನೀಡಿದರು.
ಮಣ್ಣಪಳ್ಳ ಅಭಿವೃದ್ಧಿ-ಚರ್ಚೆ
ಮಣಿಪಾಲದ ಮಣ್ಣಪಳ್ಳ ಅಭಿವೃದ್ಧಿ ಬಗ್ಗೆಯೂ ನಡೆದ ಸಭೆಯಲ್ಲಿ ಕೆರೆ ನಿರ್ವಹಣೆ, ಸಮಿತಿ ಹಣಕಾಸಿನ ಸ್ಥಿತಿ ಬಗ್ಗೆ, ಅಭಿವೃದ್ದಿಗೆ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರ ಮತ್ತು ನಗರಸಭೆಯಿಂದ ನೆರವು ನೀಡಲು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು. ಮಣ್ಣುಪಳ್ಳವನ್ನು ಆಕರ್ಷಣೀಯ ವನ್ನಾಗಿಸಲು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ ಸಹಿತ ಎಲ್ಲ ಇಲಾಖಾಧಿಕಾರಿಗಳು, ಅಭಿವೃದ್ಧಿಗೆ ಟೆಂಡರ್ ಪಡೆದ ಪ್ರಮುಖರು ಸಭೆಯಲ್ಲಿದ್ದರು.
ಸ್ಕೂಬಾ ಡೈವಿಂಗ್: ಕಾಪು ಸೂಕ್ತ
ಕಾಪು ಕಡಲ ತೀರದಲ್ಲಿ ಸ್ಕೂಬಾ ಡೈವಿಂಗ್ ಸಾಹಸ ಕ್ರೀಡೆ ನಡೆಸಲು ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಸೂಕ್ತ ವೆಂದು ತಿಳಿದುಬಂದಿದೆ. ಅಭಿವೃದ್ಧಿ ಪಡಿಸುವ ಸಂಬಂಧ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಫ್ ಅಡ್ವೆಂಚರ್‌ನ ಸಲಹಾಗಾರರಾದ ಕೀರ್ತಿ ಪಾಯಸ್ ಅವರ ಅಭಿಪ್ರಾಯ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.