ಉಡುಪಿಯಲ್ಲಿ ಬೆಳಗ್ಗೆ ಖರೀದಿಗೆ ಅವಕಾಶ
Team Udayavani, Jun 25, 2021, 6:40 AM IST
ಉಡುಪಿ: ಜಿಲ್ಲೆಯಲ್ಲಿ ಈ ಕೆಳಗಿನ ಅಗತ್ಯ ಮತ್ತು ತುರ್ತು ಚಟುವಟಿಕೆ ಗಳನ್ನು ಹೊರತುಪಡಿಸಿ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಆಹಾರ, ದಿನಸಿ, ಹಣ್ಣು, ತರಕಾರಿಗಳು, ಮೀನು, ಮಾಂಸ, ಹಾಲಿನ ಡೇರಿ, ಹಾಲು ಮಾರಾಟ ಕೇಂದ್ರಗಳು ಮತ್ತು ಪ್ರಾಣಿಗಳ ಮೇವಿನ ಅಂಗಡಿಗಳಿಗೆ, ಬೀದಿಬದಿ ವ್ಯಾಪಾರಸ್ಥರಿಗೆ ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ ಅವಕಾಶವಿರುತ್ತದೆ. ಪಾನಿಪುರಿ, ಚಾಟ್ಸ್ ಮುಂತಾದವುಗಳ ಮಾರಾಟಕ್ಕೆ ಅವಕಾಶವಿಲ್ಲ.
- ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಲ್ಲಿ ಬೆಳಗ್ಗೆ 6ರಿಂದ 2ರ ವರೆಗೆ ಪಾರ್ಸೆಲ್ ಕೊಡಬಹುದು.
- ಹೊಟೇಲ್‌ಗಳಿಂದ ಆಹಾರವನ್ನು ಪಾರ್ಸೆಲ್ ಒಯ್ಯಲು, ಹೋಂ ಡೆಲಿವರಿಗೆ ಮಾತ್ರ ಅವಕಾಶವಿದೆ.
- ಸರಕಾರದ ಕಚೇರಿಗಳು, ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ತುರ್ತು, ಅಗತ್ಯ ಸೇವೆಗಳು ಕಾರ್ಯನಿರ್ವಹಿಸುತ್ತವೆ. ಅವುಗಳ ಸಿಬಂದಿಗೆ ಮುಕ್ತ ಸಂಚಾರಕ್ಕೆ ಅವಕಾಶವಿರುತ್ತದೆ.
- ದೂರವಾಣಿ ಹಾಗೂ ಅಂತರ್ಜಾಲ ಸೇವೆಯ, ತುರ್ತು ಮತ್ತು ಅಗತ್ಯ ಸೇವೆಗ ಳೊಂದಿಗೆ ವ್ಯವಹರಿಸುವ ಮತ್ತು 24/7 ಕಾರ್ಯಾಚರಣೆ ಅಗತ್ಯವಿರುವ ಕೈಗಾರಿಕೆಗಳು /ಕಂಪೆನಿಗಳು / ಸಂಸ್ಥೆಗಳ ನೌಕರರು ಗುರುತು ಚೀಟಿ ತೋರಿಸಿ ಸಂಚರಿಸಬಹುದಾಗಿದೆ.
- ಆಸ್ಪತ್ರೆಗೆ ಹೋಗುವವರು, ಲಸಿಕೆ ಪಡೆಯಲು ತೆರಳುವವರು ಸೂಕ್ತ ದಾಖಲೆ ಹೊಂದಿರಬೇಕು.
- ದೂರದ ಬಸ್, ರೈಲು ಮತ್ತು ವಿಮಾನ ಪ್ರಯಾಣಿಕರು, ಅವರನ್ನು ಕರೆದೊಯ್ಯುವ ವರು ಟಿಕೆಟ್ ಇತ್ಯಾದಿ ದಾಖಲೆ ಹೊಂದಿರ ಬೇಕು. ನಿಲ್ದಾಣಗಳಿಂದ ಸಂಚರಿಸುವ ರಿಕ್ಷಾ/ಟ್ಯಾಕ್ಸಿಗಳ ಓಡಾಟವನ್ನು ಅನುಮತಿಸಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.