ರಾ.ಹೆದ್ದಾರಿಯಲ್ಲೇ ಸಂತೆಕಟ್ಟೆ ಸಂತೆ!

Team Udayavani, Mar 6, 2018, 1:41 AM IST

Santhekatte-5-3.jpg

ಉಡುಪಿ: ವ್ಯಾಪಕವಾಗಿ ಬೆಳವಣಿಗೆಯಾಗುತ್ತಿರುವ ಉಡುಪಿಯ ಸಂತೆಕಟ್ಟೆಯ ಸಂತೆ ಇದೀಗ ರಾಷ್ಟ್ರೀಯ ಹೆದ್ದಾರಿ 66ರ ಉದ್ದಗಲಕ್ಕೆ ವ್ಯಾಪಿಸಿದೆ. ರವಿವಾರ ಇಲ್ಲಿ ನಡೆವ ಸಂತೆ ಸರ್ವೀಸ್‌ ರಸ್ತೆ ಪಕ್ಕದ ರಸ್ತೆ ವಿಭಜಕ ಸೇರಿದಂತೆ ಬಸ್‌ಸ್ಟಾಂಡ್‌ ಒಳಗೆ, ಹೊರಗೆ ಎಂದು ಎಲ್ಲೆಂದರಲ್ಲಿ ನಡೆಯುತ್ತಿದೆ. ಇದರಿಂದ ವಾಹನ ಚಾಲಕರಿಗೆ ತೀರ ಗೊಂದಲವಾಗುತ್ತಿದ್ದು, ಅಪಾಯ ಆಹ್ವಾನಿಸುತ್ತಿದೆ. ಉಡುಪಿ ನಗರಸಭೆ ವ್ಯಾಪ್ತಿಯ ಗೋಪಾಲಪುರ ವಾರ್ಡ್‌ನ ಸಂತೆಕಟ್ಟೆ ಜಂಕ್ಷನ್‌ನಲ್ಲಿ ರವಿವಾರ ಮಧ್ಯಾಹ್ನವರೆಗೆ ಸಂತೆ ನಡೆಯುತ್ತದೆ. ಸಂತೆಯ ಸ್ಥಳ ಸಂತೆಕಟ್ಟೆ ಜಂಕ್ಷನ್‌ನ ಪೂರ್ವಭಾಗದ ಬಸ್ಸು ನಿಲ್ದಾಣದ ಹಿಂಭಾಗದಲ್ಲಿದೆ. ಈಗಲೂ ಅಲ್ಲಿ ಸಂತೆ ನಡೆಯುತ್ತಿದೆ. ಇದರೊಂದಿಗೆ ವಿಸ್ತಾರಗೊಂಡಿರುವ ಸಂತೆ ರಸ್ತೆಯನ್ನೇ ಅತಿಕ್ರಮಿಸಿಯೂ ನಡೆಯುತ್ತದೆ.

ಅನಾಹುತಕ್ಕೆ ರಹದಾರಿ
ಚತುಷ್ಪಥ ಹೆದ್ದಾರಿ ರಸ್ತೆ ವಿಸ್ತರಣೆಯಾಗಿ ಇಲ್ಲಿ ಸರ್ವೀಸ್‌ ರಸ್ತೆ, ಡಿವೈಡರ್‌ ನಿರ್ಮಾಣವಾಗಿದೆ. ಈಗ ಇದರಲ್ಲೂ ಸಂತೆ ನಡೆಯುತ್ತದೆ. ತಾತ್ಕಾಲಿಕ ಬಸ್ಸು ತಂಗುದಾಣದ ಒಳಗೆ ಹಾಗೂ ಸುತ್ತಮುತ್ತಲ ಜಾಗವನ್ನೇ ವ್ಯಾಪಿಸಿದೆ. ಸುತ್ತಮುತ್ತಲ ಊರುಗಳಿಗೆ ಸಂತೆಕಟ್ಟೆ ಜಂಕ್ಷನ್‌ ಆಗಿರುವುದರಿಂದ ಸಂತೆ ದೊಡ್ಡದಾಗಿ ಬೆಳೆದಿದೆ. ಜನಸಂದಣಿಯೂ ಅಧಿಕವಾಗಿರುತ್ತದೆ. ಈ ಸಂತೆ ಮಧ್ಯೆ ವಾಹನಗಳು ಸಾಗಬೇಕಾಗಿದೆ. ಒಂದು ವೇಳೆ ವಾಹನ ನಿಯಂತ್ರಣ ತಪ್ಪಿದರೆ ಅನಾಹುತ ಕಟ್ಟಿಟ್ಟದ್ದು. 

ಟ್ರಾಫಿಕ್‌ ಜಾಂ ಸಮಸ್ಯೆ
ಸಂತೆಕಟ್ಟೆ ಜಂಕ್ಷನ್‌ನಲ್ಲಿ ಹೆದ್ದಾರಿಯೂ ತಿರುವಿನಿಂದ ಕೂಡಿದೆ. ಟ್ರಾಫಿಕ್‌ ಸಮಸ್ಯೆಯೂ ಇಲ್ಲಿದೆ. ಇದರ ನಡುವೆ ಸಂತೆ ಪೊಲೀಸರಿಗೆ ತಲೆನೋವಾಗಿದೆ. ಹಿಂದೊಮ್ಮೆ ರವಿವಾರದ ಸಂತೆಯ ದಿನ ಟ್ರಾಫಿಕ್‌ಗೆ ಸಮಸ್ಯೆಯಾಗಿದ್ದ ಕಾರಣ ಪೊಲೀಸರು ಲಾಠಿಚಾರ್ಜ್‌ ಮಾಡಿ ರಸ್ತೆ ವ್ಯಾಪಾರಸ್ಥರನ್ನು ಚದುರಿಸಿದ್ದರು. ಆದರೂ ಮತ್ತೆ ಅದೇ ರಾಗ ಎಂಬಂತಾಗಿದ್ದು. ಒಳಗೆ ಸಂತೆಗೆ ಜಾಗದ ಕೊರತೆ ಇರುವುದರಿಂದ ವ್ಯಾಪಾರಸ್ಥರು ರಸ್ತೆಯನ್ನೇ ಸಂತೆಯನ್ನಾಗಿ ಮಾಡಿಕೊಂಡಿದ್ದಾರೆ. ತರಕಾರಿ ಕೊಳ್ಳುವವರು, ಮಾರಾಟ ಮಾಡುವವರು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ವಾಹನ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಯಾಗುತ್ತಿದೆ.

‘ಮಾರುಕಟ್ಟೆ-ಸ್ಥಳಾಂತರವಾಗಲಿದೆ’
ಸಂತೆಕಟ್ಟೆ-ಕಲ್ಯಾಣಪುರ ಜಂಕ್ಷನ್‌ನಲ್ಲಿ ನಗರಸಭೆಯ ಜಾಗ ಸಾಲದೆ ಹೊರಗಡೆ ರಸ್ತೆಯಲ್ಲಿ ಸಂತೆ ನಡೆಯುತ್ತಿದೆ. ಇದರಿಂದ ತೊಂದರೆಯಾಗುತ್ತಿರುವ ಬಗ್ಗೆ ದೂರಿದೆ. ಈಗಿರುವ ಜಾಗಕ್ಕಿಂತ ಸುಮಾರು 100 ಮೀ. ದೂರದಲ್ಲಿ ಮೌಂಟ್‌ ರೋಸರಿ ಚರ್ಚ್‌ ಮುಂಭಾಗ ಸರಕಾರಿ ಜಾಗಕ್ಕೆ ಮಾರುಕಟ್ಟೆ ಸ್ಥಳಾಂತರವಾಗಲಿದೆ. ಟೆಂಡರ್‌ ಕರೆಯಲಾಗಿದೆ. ಅನುದಾನವನ್ನೂ ನಿಗದಿಪಡಿಸಲಾಗಿದೆ. ಪಕ್ಕದಲ್ಲಿರುವ ಶ್ರೀ ವೀರಭದ್ರ ದೇವಸ್ಥಾನದವರು ತಪ್ಪು ತಿಳಿವಳಿಕೆಯಿಂದ ಮೊದಲು ವಿರೋಧಿಸಿದ್ದರು. ಸಭೆ ನಡೆಸಿ ಅವರ ಮನವೊಲಿಸಲಾಗಿದೆ. ಹಾಗಾಗಿ ಆದಷ್ಟು ಬೇಗನೆ ಸಂತೆ ಸ್ಥಳಾಂತರವಾಗಿ ಸಮಸ್ಯೆ ಪರಿಹಾರವಾಗುವುದು.
– ಚಂದ್ರಕಾಂತ್‌ ನಾಯಕ್‌, ನಗರಸಭೆ ಸದಸ್ಯರು (ಕಾಂಗ್ರೆಸ್‌)

ಟೆಂಡರ್‌ ಆಗಿದೆ, ಕೆಲಸ ನಡೆಯುತ್ತಿದೆ
ಸಂತೆಕಟ್ಟೆ ಮಾರುಕಟ್ಟೆಗೆ ಜಾಗ ಗೊತ್ತುಪಡಿಸಲಾಗಿದೆ. ಅಲ್ಲಿ ಇಂಟರ್‌ಲಾಕ್‌ ಅಳವಡಿಕೆ, ಕಾಂಪೌಂಡ್‌ ನಿರ್ಮಾಣ, ನೀರಿನ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿವೆ. ಆನಂತರದಲ್ಲಿ ಮಾರುಕಟ್ಟೆಯೊಳಗಿನ ಟೆಂಡರ್‌ ಮಾಡಲಾಗುವುದು. ಬಳಿಕ ಸಂತೆಕಟ್ಟೆ ಜಂಕ್ಷನ್‌ ಪಕ್ಕದ ವಾರದ ಸಂತೆ ಅಲ್ಲಿಗೆ ಸ್ಥಳಾಂತರವಾಗಲಿದೆ. 
– ಡಿ. ಮಂಜುನಾಥಯ್ಯ, ನಗರಸಭೆ ಪೌರಾಯುಕ್ತರು

‘ಅನಾಹುತವಾದರೆ ನಗರಸಭೆಯೇ ಹೊಣೆ’
ಉಡುಪಿಯ ಪ್ರಮುಖ ಸಂತೆಯಾಗಿದ್ದರೂ, ಇಲ್ಲಿ ನಗರಸಭೆ ಆಡಳಿತ ಏನೇನೂ ಕಾಳಜಿ ವಹಿಸಿಲ್ಲ. ರಾ.ಹೆ. ಬದಿ ಸಂತೆ ಮಾಡಬಾರದು ಎಂದಿದೆ. ಹೀಗಿರುವಾಗ ರಸ್ತೆಯಲ್ಲಿ ವ್ಯಾಪಾರ, ವಹಿವಾಟು ನಡೆಯುತ್ತಲಿದೆ. ನಗರಸಭೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಏನಾದರೂ ಅನಾಹುತವಾದರೆ ಅದಕ್ಕೆ ನಗರಸಭೆಯೇ ಹೊಣೆ.
– ಯಶಪಾಲ್‌ ಎ. ಸುವರ್ಣ, ನಗರಸಭೆ ಸದಸ್ಯರು (ಬಿಜೆಪಿ)

– ಚೇತನ್‌ ಪಡುಬಿದ್ರಿ ; ಚಿತ್ರ: ಆಸ್ಟ್ರೋ ಮೋಹನ್‌

ಟಾಪ್ ನ್ಯೂಸ್

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Bengaluru: ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

POlice

Udupi: 9 ಲೀಟರ್ ಗೋವಾ ಮದ್ಯ ವಶಕ್ಕೆ

21

Karkala: ಶಾಲೆಯಿಂದ ಲ್ಯಾಪ್‌ಟಾಪ್‌ ಕಳವು

WhatsApp Image 2025-01-01 at 19.31.55

Udupi: ಅಸ್ವಸ್ಥಗೊಂಡ ರೈಲು ಪ್ರಯಾಣಿಕೆ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

13

Surathkal: ಅನಾರೋಗ್ಯದಿಂದ ಸಿ.ಎ. ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.