ನಿವೃತ್ತ ಪೊಲೀಸರ ಕಲ್ಯಾಣ: 25 ಲ.ರೂ. ಬೇಡಿಕೆ ಸಲ್ಲಿಕೆ
ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಎಸ್‌ಪಿ ನಿಶಾ ಜೇಮ್ಸ್
Team Udayavani, Apr 3, 2019, 6:30 AM IST
ಉಡುಪಿ: ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿ/ಸಿಬಂದಿಯ ಕಲ್ಯಾಣ ಕಾರ್ಯಕ್ರಮಗಳಿಗಾಗಿ ನಿವೃತ್ತ ಪೊಲೀಸರ ಕಲ್ಯಾಣ ನಿಧಿಗೆ 25 ಲ.ರೂ. ಅನುದಾನ ನೀಡುವಂತೆ ಈಗಾಗಲೇ ಪೊಲೀಸ್ ಇಲಾಖೆಯ ಪ್ರಧಾನ ಕಚೇರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ಎಸ್‌ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಉಡುಪಿ ಚಂದು ಮೈದಾನದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಜರಗಿದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನಿವೃತ್ತ ಪೊಲೀಸರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಗುತ್ತಿದೆ. ದಿನಬಳಕೆಯ ವಸ್ತುಗಳು ಕಡಿಮೆ ಬೆಲೆಯಲ್ಲಿ ದೊರೆಯುವ ಪೊಲೀಸ್ ಕ್ಯಾಂಟೀನ್‌ಗಳ ಸೌಲಭ್ಯ ನಿವೃತ್ತ ಪೊಲೀಸರಿಗೂ ದೊರೆಯುವಂತೆ ಮಾಡಲಾಗುವುದು. ನಿವೃತ್ತ ಪೊಲೀಸರಿಗೆ ಆರೋಗ್ಯ ತಪಾಸಣೆ, ಒತ್ತಡ ನಿವಾರಣಾ ಶಿಬಿರ ಆಯೋಜಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದರು.
ಎಲ್ಲ ಸೇವೆಗಳಿಗಿಂತ ಮಿಗಿಲು
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಉಪನಿರೀಕ್ಷಕ ಗೋಪಾಲಕೃಷ್ಣ ಗಾಣಿಗ ಅವರು ಮಾತನಾಡಿ, “ಪೊಲೀಸ್ ಸೇವೆ ಎಲ್ಲ ಸೇವೆಗಳಿಗಿಂತ ಮಿಗಿಲಾದುದು. ಪೊಲೀಸ್ ಇಲಾಖೆ ಯಲ್ಲಿ ಸೇವೆ ಸಲ್ಲಿಸಲು ಸಿಕ್ಕಿರುವ ಅವಕಾಶ ನಮ್ಮ ಪುಣ್ಯ. ಸಾರ್ವಜನಿಕರು ಠಾಣೆಗೆ ಬಂದಾಗ ಅವರ ದೂರುಗಳನ್ನು ಸಮಾಧಾನದಿಂದ ಆಲಿಸಿ ಕಾನೂನಾತ್ಮಕ ಸಹಾಯದ ಜತೆಗೆ ಮಾನವೀಯತೆಯ ಸೇವೆ ನೀಡುವುದು ನಮ್ಮ ಜವಾಬ್ದಾರಿ. ಗಡಿಯಲ್ಲಿ ಸೈನಿಕರು ಶತ್ರುಗಳಿಂದ ದೇಶ ರಕ್ಷಿಸಿದರೆ ದೇಶದೊಳಗಿನ ಶತ್ರುಗಳನ್ನು ನಿಭಾಯಿಸುವ ಜವಾಬ್ದಾರಿ ಪೊಲೀಸರದ್ದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ. ನಿವೃತ್ತ ಪೊಲೀಸರಿಗೆ ಆರೋಗ್ಯ ಯೋಜನೆಯಡಿ ನೀಡುವ ವೈದ್ಯಕೀಯ ಮೊತ್ತವನ್ನು ಈಗ ಇರುವ ಶೇ.12ರಿಂದ ಶೇ.50 ಕ್ಕಿಂತ ಹೆಚ್ಚು ಮಾಡಬೇಕು’ ಎಂದು ಹೇಳಿದರು.
ಎಎಸ್‌ಪಿ ಕೃಷ್ಣಕಾಂತ್ ಉಪಸ್ಥಿತ ರಿದ್ದರು. ಎಸ್‌ಪಿ ಕುಮಾರಚಂದ್ರ ವಂದಿಸಿದರು.
ಉಡುಪಿ ಸಿಎಸ್‌ಪಿ ಪೊಲೀಸ್ ಕಂಟ್ರೋಲ್ ರೂಂನ ಪಿಎಸ್‌ಐ ಬಿ.ಮನಮೋಹನ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಡಿಎಆರ್ ಆರ್‌ಪಿಐ ಜಿ.ಆನಂದ ಕುಮಾರ್ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ನಿವೃತ್ತ ಪೊಲೀಸ್ ಉಪನಿರೀಕ್ಷಕ ಗೋಪಾಲಕೃಷ್ಣ ಅವರು ಪೊಲೀಸ್ ಧ್ವಜ ಅನಾವರಣಗೊಳಿಸಿದರು.
ಸಮರ್ಪಣಾ ಭಾವದ ಸೇವೆ
ಪೊಲೀಸ್ ಇಲಾಖೆ ಆಡಳಿತದ ಪ್ರಮುಖ ಯಂತ್ರ. ಶಾಂತಿಯು ಸಮಾಜ ನಿರ್ಮಾಣ ನಮ್ಮ ಪ್ರಮುಖ ಜವಾಬ್ದಾರಿ. ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕರು ನೀಡುವ ಸಹಕಾರ ಕೂಡ ಮಹತ್ವದ್ದಾಗಿರುತ್ತದೆ. ಎಲ್ಲರೂ ಸಮರ್ಪಣಾ ಭಾವದಿಂದ ಕರ್ತವ್ಯ ನಿರ್ವಹಿಸಿ ಆರೋಗ್ಯವಂತ ಸಮಾಜಕ್ಕಾಗಿ ಶ್ರಮಿಸಬೇಕು.
-ನಿಶಾ ಜೇಮ್ಸ್ , ಉಡುಪಿ ಎಸ್‌ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.