ಪಶ್ಚಿಮಘಟ್ಟದ ತಪ್ಪಲಿನ ನಿವಾಸಿಗಳಲ್ಲಿ ಮತ್ತೆ ಭೀತಿ
Team Udayavani, Mar 23, 2017, 4:21 PM IST
ಡಾ| ಕಸ್ತೂರಿರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶ
ಕೊಲ್ಲೂರು: ಕಸ್ತೂರಿರಂಗನ್ ವರದಿಯ ಆತಂಕವು ಕುಂದಾಪುರ ಹಾಗೂ ಕಾರ್ಕಳ ತಾಲೂಕಿನ 17 ಗ್ರಾಮಗಳ ಮೇಲೆ ಪರಿಸರ ಸೂಕ್ಷ್ಮಪ್ರದೇಶವೆಂದು ಕೇಂದ್ರ ಸರಕಾರದ ಸಚಿವಾಲಯದ ಅಧಿಸೂಚನೆಯಲ್ಲಿ ಮರುಪ್ರಕಟವಾದ ಹಿನ್ನೆಲೆಯಲ್ಲಿ ಈ ಭಾಗದ ನಿವಾಸಿಗಳಲ್ಲಿ ಮತ್ತೆ ಆತಂಕದ ವಾತಾವರಣ ಸƒಷ್ಟಿಯಾಗಿದೆ.
ಉಭಯ ತಾಲೂಕುಗಳಲ್ಲಿ ಈ ಹಿಂದೆ ಸೂಚಿಸಿದ್ದ ಗ್ರಾಮಗಳನ್ನು ಕಸ್ತೂರಿರಂಗನ್ ವರದಿಯಿಂದ ಕೈಬಿಡಬೇಕೆಂದು ಗ್ರಾಮಮಟ್ಟದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಏತನ್ಮಧ್ಯೆ ಸಂಪುಟ ಉಪಸಮಿತಿಯು ಸಭೆ ನಡೆಸಿ ಈ ಭಾಗದ ಜನರಿಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಿ ವರದಿ ಸಲ್ಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿತ್ತು. ಇದೀಗ ಪಶ್ಚಿಮ ಘಟ್ಟದ ತಪ್ಪಲಿನ ಕಾರ್ಕಳ ತಾಲೂಕಿನ ಕಚ್ಚಾರು, ಹೆಬ್ರಿ, ಕಬ್ಬಿನಾಲೆ, ಶಿರ್ಲಾಲ, ಕೆರ್ವಾಶೆ, ದುರ್ಗಾ, ಮಾಳ, ಈದು ಹಾಗೂ ನಾಡಾ³ಲ್ ಕುಂದಾಪುರ ತಾಲೂಕಿನ ಕೊಲ್ಲೂರು, ಬೆ„ಂದೂರು, ಹೊಸೂರು, ಹೊಸಂಗಡಿ, ವಂಡ್ಸೆ, ಶೇಡಿಮನೆ, ಹಳ್ಳಿಹೊಳೆ, ಅಮವಾಸ್ಯೆಬೆ„ಲ್ ಪರಿಸರಸೂಕ್ಷ್ಮಪ್ರದೇಶವೆಂದು ಗುರುತಿಸಲ್ಪಟ್ಟಿತ್ತು. ಈ ಅವೈಜ್ಞಾನಿಕ ಪರಿಸರಸೂಕ್ಷ್ಮ ಪ್ರದೇಶವೆಂಬ ಪ್ರಕಟಣೆ ಕೊನೆಗೊಳ್ಳುವುದೆಂಬ ನಿರೀಕ್ಷೆಯಲ್ಲಿದ್ದ ಈ ಭಾಗದ ಜನರನ್ನು ಕೇಂದ್ರದ ಹೊಸ ಅಧಿಸೂಚನೆ ಮತ್ತೆ ಪೇಚಿಗೆ ಸಿಲುಕಿಸಿದ್ದು ರಾಜ್ಯ ಸರಕಾರವು ಸಂಪೂರ್ಣ ಮಾಹಿತಿಯನ್ನೊಳಗೊಂಡ ಮರು ವರದಿ ಸಲ್ಲಿಸುವಿಕೆಯಲ್ಲಿ ಎಡವಬಾರದೆಂಬ ಬೇಡಿಕೆ ಎಲ್ಲೆಡೆಯಿಂದ ಕೇಳಿಬರುತ್ತಿದೆ.
ವಂಡ್ಸೆ ಪರಿಸರದ ನಿವಾಸಿಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ಆದೇಶದಿಂದ ಆತಂಕ ಉಂಟಾಗಿದ್ದು ಗೊಂದಲಕ್ಕೀಡಾಗಿದ್ದಾರೆ. ಬೆ„ಂದೂರು ಕ್ಷೇತ್ರದ ರಾಜಧಾನಿ ಎಂಬಂತೆ ಬಹಳಷ್ಟು ಅಭಿವೃದ್ಧಿ ಪಥದಲ್ಲಿರುವ ವಂಡ್ಸೆ, ಹೊಸೂರು, ಇಡೂರು, ಕೆರಾಡಿ, ಬೆಳ್ಳಾಲ, ಆಲೂರು ಆ ಭಾಗದ ಜನರಲ್ಲಿ ಹೊಸತೊಂದು ಶಂಕೆ ಮೂಡಿಬರುತ್ತಿದ್ದು ಇದಕ್ಕೊಂದು ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯ ಸರಕಾರವು ನುರಿತ ಅನುಭವಿ ಅಧಿಕಾರಿಗಳೊಡನೆ ಕೊನೆಯ ಸಂಪೂರ್ಣ ಮಾಹಿತಿ ವರದಿಯನ್ನು ಸಲ್ಲಿಸುವುದು ಅಗತ್ಯವಾಗಿದೆ. ಕೇರಳದಲ್ಲಿ ”ಕೇರಳ ಸ್ಟೇಟ್ ಬಯೋಡೆ„ವರ್ಸಿಟಿ ಬೋರ್ಡ್” ರಚಿಸಿ ಅರಣ್ಯ ಪ್ರದೇಶಕ್ಕೆ ಮಾತ್ರ ಪರಿಸರಸೂಕ್ಷ್ಮವಲಯವೆಂದು ಪರಿಗಣಿಸಿ ಸೀಮಿತಗೊಳಿಸಿ ಉಳಿಸಿರುವುದು ಅಲ್ಲಿನ ಬಹಳಷ್ಟು ಹೆಕ್ಟೇರ್ ವಿಸ್ತೀರ್ಣದ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸಿದೆ. ಈ ದಿಸೆಯಲ್ಲಿ ಇದಕ್ಕೊಂದು ಮಾರ್ಗೋಪಾಯ ಕಂಡುಹಿಡಿಯುವಲ್ಲಿ ಸರಕಾರ ಬಹಳಷ್ಟು ಶ್ರಮ ವಹಿಸಬೇಕಾಗಿದೆ. ಕೇಂದ್ರದ ಅವೈಜ್ಞಾನಿಕ ಸುತ್ತೋಲೆ ಬಗ್ಗೆ ಶಾಸಕ ಗೋಪಾಲ ಪೂಜಾರಿ, ಸಚಿವ ರಮಾನಾಥ ರೈ ಹಾಗೂ ರಾಜ್ಯ ಸರಕಾರದ ಉನ್ನತ ಅಧಿಕಾರಿಗಳು ಮುಖ್ಯಮಂತ್ರಿ ಗಳೊಡನೆ ಚರ್ಚಿಸಿದ್ದು ಮಾರ್ಗೋಪಾಯ ಕಂಡುಕೊಳ್ಳುವುದರಲ್ಲಿ ನಾನಾ ರೀತಿಯ ಪ್ರಯತ್ನ ನಡೆಸುತ್ತಿರುವುದು ಗಮನೀಯ.
ಕೇಂದ್ರ ಸರಕಾರಕ್ಕೆ ಪರಿಸರ ಸೂಕ್ಷ್ಮಪ್ರದೇಶಗಳ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದ್ದರೂ ಹೊಸ ಅದಿಸೂಚನೆಯಲ್ಲಿ ಬದಲಾವಣೆ ಕಾಣದಿರುವುದು ಈ ಭಾಗದ ನಿವಾಸಿಗಳಲ್ಲಿ ನಿರಾಶೆ ಉಂಟುಮಾಡಿದೆ. ಒಟ್ಟಾರೆ ಅವೈಜ್ಞಾನಿಕವಾಗಿ ಸೆಟ್‌ಲೆ„ಟ್ ಮೂಲಕ ಪ್ರದೇಶದ ಗುರುತಿಸುವಿಕೆಯ ಪ್ರಕ್ರಿಯೆಯು ಪರಿಸರಸೂಕ್ಷ್ಮಪ್ರದೇಶದಿಂದ ಹೊರಗಿರುವ ಪ್ರದೇಶದ ನಿವಾಸಿಗಳಿಗೆ ಅನ್ಯಾಯ ಮಾಡಿದಂತಾಗುವುದು ಎಂದು ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.
– ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Grandfather: ಬಡ ತಾತನ ಹೃದಯ ಶ್ರೀಮಂತಿಕೆ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ಜೈಲು ಶಿಕ್ಷೆ
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.