ವಿ.ಪಿ.ಸಿಂಗ್ ಸರಕಾರವಿದ್ದಾಗ ರಾಮಮಂದಿರ ನಿರ್ಣಯ ಏನಾಗಿತ್ತು?
Team Udayavani, Jun 30, 2017, 3:45 AM IST
ಉಡುಪಿ: ವಿ.ಪಿ.ಸಿಂಗ್ ಪ್ರಧಾನಿ ಯಾಗಿದ್ದಾಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕುರಿತು ಸಭೆ ಜರಗಿತ್ತು. ಆಗ ನಾನೂ ಭಾಗವಹಿಸಿದ್ದೆ. ಆಗ ಹಿಂದೂಗಳು ಮತ್ತು ಮುಸ್ಲಿಮ್ ಪ್ರಮುಖರು ಸಭೆ ಸೇರಿ ವಾರದಲ್ಲಿ ಒಂದು ದಿನ ನಮಾಜು ಮಾಡಲು ಹಿಂದು ಪ್ರಮುಖರು ಒಪ್ಪಿಗೆ ನೀಡಿದ್ದರು. ಕೊನೆಗೆ ಸರಕಾರ ಬಿದ್ದು ಹೋಗಿ ಪ್ರಸ್ತಾವವೂ ಬಿದ್ದು ಹೋಯಿತು. ಆಗ ದೇವಸ್ಥಾನದೊಳಗೇ ನಮಾಜು ಮಾಡಲು ಒಪ್ಪಿಗೆ ನೀಡಲಾಗಿತ್ತು. ಈಗ ನಾನು ಅವಕಾಶ ಮಾಡಿಕೊಟ್ಟದ್ದು ಕೃಷ್ಣಮಠದ ಹೊರ ಆವರಣದಲ್ಲಿ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಗುರುವಾರ ಸುದ್ದಿಗಾರರು ಶ್ರೀರಾಮಸೇನೆಯ ನಾಯಕರ ಪ್ರಶ್ನೆಯನ್ನು ಮುಂದಿಟ್ಟಾಗ ಶ್ರೀಪಾದರು ಮೇಲಿನಂತೆ ಉತ್ತರಿಸಿದರು. ಇದಕ್ಕಿಂತ ಹೆಚ್ಚು ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದರು.
ಪ್ರಮೋದ್ ಮುತಾಲಿಕ್ ಅವರು ಹಿಂದೂಗಳೂ ಗೋಮಾಂಸ ಭಕ್ಷಣೆ ಮಾಡುತ್ತೀರೆಂಬ ಬಗೆಗೆ ಆಕ್ಷೇಪ ಮಾಡಿದ್ದಾರಲ್ಲ ಎಂದು ಪ್ರಶ್ನಿಸಿದಾಗ ಇದನ್ನು ಅರಿವಿದ್ದೇ ಹೇಳಿದ್ದೇನೆ ಎಂದರು. ಗುರುವಾರ ಬಿಜೆಪಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ಭೇಟಿ ಮಾಡಿ ಶ್ರೀಪಾದರ ಜೊತೆ ಚರ್ಚೆ ನಡೆಸಿದರು.
ಎಂದಿನಂತೆ ಚಟುವಟಿಕೆ: ಬುಧವಾರ ಬಿದ್ದು ಭುಜ ಸ್ವಲ್ಪ ಗಾಯಗೊಂಡಿದ್ದ ಶ್ರೀಪಾದರು ಬುಧ ವಾರದಂತೆ ಗುರುವಾರವೂ ಪೂಜೆ, ಪ್ರಸಾದ ವಿತರಣೆ, ವಿದ್ಯಾರ್ಥಿಗಳಿಗೆ ಶಾಸ್ತ್ರ ಪಾಠಗಳನ್ನು ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.