ಜಾನುವಾರು ಕದಿಯಲು ಬಂದ, ಬಾವಿಗೆ ಬಿದ್ದು ಸಿಕ್ಕಿಬಿದ್ದ
Team Udayavani, Oct 28, 2017, 11:37 AM IST
ಸಿದ್ದಾಪುರ: ಜಾನುವಾರುಗಳನ್ನು ಕಳವು ಮಾಡಲು ಹೊಂಚು ಹಾಕಿ ಬಂದ ಕಳ್ಳನೊಬ್ಬ ನಾಯಿ ಕೂಗಿದ ಶಬ್ದಕ್ಕೆ ಗಾಬರಿಗೊಂಡು ಓಡುವ ವೇಳೆ ಮನೆಯ ಮುಂದಿನ ಸುಮಾರು 20 ಅಡಿಗಳ ನೀರಿಲ್ಲದ ಬಾವಿಗೆ ಬಿದ್ದು ಮೇಲೆ ಬರಲಾಗದೆ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ಘಟನೆ ಬೆಳ್ವೆ ಗ್ರಾಮ ಪಂಚಾಯತ್‌ಗೆ ಸೇರಿದ ತೋನ್ನಾಸೆಯಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಸಂಭವಿಸಿದೆ.
ತೋನ್ನಾಸೆ ದೊಡ್ಡಕುಂಬ್ರಿ ಸಂತೋಷ ನಾಯ್ಕ ಅವರ ಮನೆಯ ಬಳಿಯಲ್ಲಿದ್ದ ದನದ ಕೊಟ್ಟಿಗೆಯಲ್ಲಿದ್ದ ಎರಡು ವರ್ಷದ ಎರಡು ಕರುಗಳನ್ನು ತೋನ್ನಾಸೆ ಬುಕ್ಕಿಗುಡ್ಡೆ ಗಣೇಶ ಪೂಜಾರಿ ಕಳವು ಮಾಡಲು ಹೊಂಚು ಹಾಕಿದ್ದ. ಅದೇ ವೇಳೆ ನಾಯಿ ಬೊಗಳಿದಾಗ ಮನೆಯವರು ಎಚ್ಚರಗೊಂಡಿದ್ದರು. ಇದರಿಂದ ಗಾಬರಿಗೊಂಡ ಗಣೇಶ ಓಡಿ ಹೋಗುವಾಗ 20 ಅಡಿ ನೀರಿಲ್ಲದ ಆವರಣವಿಲ್ಲದ ಬಾವಿಗೆ ಬಿದ್ದು ಮೇಲೆ ಬಾರಲಾಗದೇ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಜಾನುವಾರು ಕಳವು ಮಾಡಿಕೊಂಡು ತೆಗೆದು ಕೊಂಡು ಹೋಗಲು ತಂದಿದ್ದ ವಾಹನ ಸ್ಥಳದಿಂದ ಪರಾರಿ ಯಾಗಿದೆ. ದನ ಕಳವುವಿನ ವೇಳೆ ಮನೆಯವರನ್ನು ಬೆದರಿಸಲು ತಂದಿದ್ದ ಮರದ ದೊಣ್ಣೆ ಮನೆಯ ಮುಂಭಾಗದಲ್ಲಿ ಪತ್ತೆಯಾಗಿದೆ.
ಸ್ಥಳೀಯರ ಮಾಹಿತಿಯಂತೆ ಶಂಕರನಾರಾಯಣ ಪೊಲೀಸರು ಬೆಳಗ್ಗೆ ಸ್ಥಳಕ್ಕಾಗಮಿಸಿದ್ದರು. ಬಾವಿಗೆ ಬಿದ್ದ ಕಳ್ಳನನ್ನು ನೋಡಲು ಇದೇ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ಪೊಲೀಸರು ಸ್ಥಳೀಯರ ಸಹಕಾರದಿಂದ ಬಾವಿಗೆ ಬಿದ್ದ ಆತನನ್ನು ಮೇಲೆತ್ತಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.