ಪಡುಬಿದ್ರಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ ಎಲ್ಲಿ?
Team Udayavani, Jun 11, 2018, 6:00 AM IST
ಪಡುಬಿದ್ರಿ: ಹಲವು ಸಮಯಗಳಿಂದ ಸ್ವಂತ ಕಟ್ಟಡವಿಲ್ಲದೆ ದಿನ ದೂಡುತ್ತಿರುವ ಪಡುಬಿದ್ರಿ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರಾದರೂ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಪರಿಸ್ಥಿತಿ ಇದೆ.
ಅಂಚೆ ಇಲಾಖೆ ಕಡತಗಳ ಪ್ರಕಾರ, ಈಗಾಗಲೇ ಪಡುಬಿದ್ರಿ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿದೆ. ಇದಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮೀಸಲು ಆದೇಶ ನೀಡ ಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅಸಲಿಗೆ ಈಗ ಅದರ ಹೆಸರಿನಲ್ಲಿ ಯಾವುದೇ ಜಾಗವಿಲ್ಲ!
ಯಾವುದೇ ಜಾಗ ಮೀಸಲಿಲ್ಲ!
ಸದ್ಯ ಗ್ರಾ.ಪಂ. ಕಡತಗಳ ಪ್ರಕಾರ, ಅಂಚೆ ಇಲಾಖೆಗೆ ಪ್ರತ್ಯೇಕ ಜಾಗ ಮೀಸಲಿರಿಸಿಲ್ಲ! ಪಹಣಿ ಪತ್ರದಲ್ಲೂ ಯಾವುದೇ ಮಾಹಿತಿಗಳಿಲ್ಲ. ಬದಲಿಗೆ ಅಂಚೆ ಇಲಾಖೆ ತನಗೆ ನೀಡಲಾಗಿದೆ ಎಂದು ಹೇಳುವ ಜಾಗದಲ್ಲಿ ಸರಕಾರಿ ಜಾಗ ಎಂದು ನಮೂದಾಗಿದೆ. ಆದ್ದರಿಂದ ಮತ್ತೆ ಜಾಗಕ್ಕಾಗಿ ಅಂಚೆ ಇಲಾಖೆ ಪತ್ರ ವ್ಯವಹಾರ ನಡೆಸುವುದು ಅನಿವಾರ್ಯವಾಗಿದೆ.
ಇಲಾಖೆ ಜಾಗ ಎಲ್ಲಿದೆ?
1990ರಲ್ಲಿ ಅಂಚೆ ಇಲಾಖೆಗೆ ಪಡುಬಿದ್ರಿ ಪೊಲೀಸ್ ಠಾಣೆ ಮತ್ತು ಪಡುಬಿದ್ರಿ ಪ್ರಾ. ಆ. ಕೇಂದ್ರಗಳ ಬಳಿಯಲ್ಲಿನ ನಿವೇಶನವೊಂದನ್ನು ವಿಂಗಡಿಸಿ ಕೊಟ್ಟದ್ದು ಹೌದು. ಆದರೆ ಈ ಜಾಗದಲ್ಲಿ ಇದುವರೆಗೂ ಕಟ್ಟಡವನ್ನು ಅಂಚೆ ಇಲಾಖೆ ನಿರ್ಮಿಸಿಕೊಂಡಿಲ್ಲವಾದ್ದರಿಂದ ಅದು ವಾಪಸ್ ಸರಕಾರದ ಸುಪರ್ದಿಗೆ ಹೋಗಿದೆ. ಆದರೆ ಇಂದಿನ ಕಂದಾಯ ಇಲಾಖಾ ದಾಖಲೆಗಳಲ್ಲಿ ಪಡುಬಿದ್ರಿಯ ನಡಾÕಲು ಗ್ರಾಮದಲ್ಲಿ ಯಾವುದೇ ಭೂಮಿ ಅಂಚೆ ಇಲಾಖೆ ಹೆಸರಲ್ಲಿಲ್ಲ. ಆದರೆ ಕೇಂದ್ರ ಅಂಚೆ ಇಲಾಖೆ ಮಾತ್ರ ಪಡುಬಿದ್ರಿಯ ತನ್ನ ಜಾಗದಲ್ಲಿ 2019ಕ್ಕೆ ಕಟ್ಟಡ ಕಟ್ಟಲು ಸನ್ನದ್ಧವಾಗಿದೆ. ಅಂಚೆ ಇಲಾಖೆಗೆ ನೀಡಿದ್ದ ಜಾಗ ಪಾರ್ಕಿಂಗ್‌ಗೆ, ವಾರದ ಮಾರುಕಟ್ಟೆ ಸಂದರ್ಭ ಗೂಡ್ಸ್ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಬಳಕೆಯಾಗುತ್ತಿದೆ.
ಕಟ್ಟಡ ನಿರ್ಮಾಣ ಯೋಜನಾ ಪಟ್ಟಿಯಲ್ಲಿ ಅಡಕ
ಪಡುಬಿದ್ರಿ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಪ್ರತೀ ವರ್ಷ ಬೇಡಿಕೆ ಪಟ್ಟಿಯನ್ನು ದಿಲ್ಲಿ ನಿರ್ದೇಶನಾಲಯಕ್ಕೆ ರವಾನಿಸಲಾಗುತ್ತಿತ್ತು. ಆದರೆ ಯೋಜನಾ ಪಟ್ಟಿಯಲ್ಲಿ ಸೇರಿರಲಿಲ್ಲ. ಆದರೆ 2019ರ ವಾರ್ಷಿಕ ಯೋಜನಾ ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದ್ದು, ಗ್ರಾ.ಪಂ. ಮೂಲಕ ಜಿಲ್ಲಾಡಳಿತ ನೀಡಿದ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗಲಿದೆ.
– ರವಿ,ಅಂಚೆ ಇಲಾಖೆ
ಸಹಾಯಕ ಅಧೀಕ್ಷಕರು,ಉಡುಪಿ
ಪಹಣಿ ಪತ್ರವಿಲ್ಲ
ನಡಾÕಲು ಗ್ರಾಮದ ಸ.ನಂಬ್ರ 47 – 8 ವಿಸ್ತೀರ್ಣ 1.32 ಎಕ್ರೆ ಸರಕಾರಿ ಜಾಗದ ಕಾಲಂ ನಂಬ್ರ 11ರಲ್ಲಿ ಒಟ್ಟಾರೆ ವಿವಿಧ ಸರಕಾರಿ ಕಟ್ಟಡಗಳಿವೆ. ಇದರಲ್ಲಿ 15 ಸೆಂಟ್ಸ್ ಜಾಗ ವಿಂಗಡಣೆಯಾಗಿದ್ದರೂ ಅಂಚೆ ಕಚೇರಿಗೆ ನೀಡಿದ ಬಗ್ಗೆ ಯಾವುದೇ ವಿವರ ಇಲ್ಲ. ಅಂಚೆ ಕಚೇರಿಗೆ ಕಟ್ಟಡ ಬೇಕಾದಲ್ಲಿ ಪಂಚಾಯತ್ ಠರಾವು ಮಂಡಿಸಿ ಹೊಸ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ರವಾನಿಸಬೇಕಿದೆ.
– ಪಂಚಾಕ್ಷರಿ ಸ್ವಾಮಿ
ಪಡುಬಿದ್ರಿ ಗ್ರಾ. ಪಂ. ಪಿಡಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
Pro Kabaddi: ಹರಿಯಾಣ- ಪಾಟ್ನಾ ಫೈನಲ್ ಹಣಾಹಣಿ
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.