ಮಣಿಪಾಲ ವಿಷ ಪತ್ತೆ ಕೇಂದ್ರಕ್ಕೆ ಡಬ್ಲ್ಯೂಎಚ್ಒ ಮಾನ್ಯತೆ
Team Udayavani, Jul 4, 2019, 5:11 AM IST
ಉಡುಪಿ: ಮಣಿಪಾಲ ಮಾಹೆಯ ‘ಮಣಿಪಾಲ ವಿಷ ಪತ್ತೆ ಕೇಂದ್ರ’ಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಮಾನ್ಯತೆ ನೀಡಿದೆ.
ಮಣಿಪಾಲದ ಈ ಕೇಂದ್ರವು ವಿಷ ಸಂಬಂಧಿ ತೊಂದರೆಗಳ ತಡೆಯುವಿಕೆ, ಚಿಕಿತ್ಸೆ ಮತ್ತು ನಿರ್ವಹಣೆಗಾಗಿ ನಡೆಸುತ್ತಿರುವ ಕಾರ್ಯವನ್ನು ಗಮನಿಸಿ ಈ ಮಾನ್ಯತೆ ನೀಡಲಾಗಿದೆ. 2015ರ ಮಾ. 20ರಂದು ಆರಂಭಗೊಂಡ ಈ ಕೇಂದ್ರವು ಕರ್ನಾಟಕ, ಕೇರಳ, ಆಂಧ್ರಪ್ರದೇಶ ರಾಜ್ಯಗಳ ವಿಷಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿರಂತರವಾಗಿ ನಿಭಾಯಿಸುತ್ತಿದೆ. ಇದು ಟಾಕ್ಸಿಕಾಲಜಿ ಲ್ಯಾಬೊರೇಟರಿ ಮತ್ತು ಕ್ಲಿನಿಕಲ್ ಟ್ರೀಟ್ಮೆಂಟ್ ಯುನಿಟ್‌ಗಳನ್ನು ಕೂಡ ಹೊಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಮಾನ್ಯತೆ ನೀಡಿದ ಬಳಿಕ ಮಣಿಪಾಲದ ವಿಷ ಪತ್ತೆ ಕೇಂದ್ರವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿರುವ ವಿಶ್ವ ವಿಷ ಪತ್ತೆ ಕೇಂದ್ರಗಳ ಡೈರೆಕ್ಟರಿಯಲ್ಲಿ ಸೇರಿಸಿಕೊಂಡಿದೆ. ಇದರ ಸ್ಮರಣಾರ್ಥ ಮಾಹೆಯಲ್ಲಿ ನಾಮಫಲಕವನ್ನು ಮಾಹೆ ಕುಲಪತಿ ಡಾ| ಎಚ್. ವಿನೋದ್ ಭಟ್ ಅನಾವರಣಗೊಳಿಸಿದರು. ಡೀನ್ ಡಾ| ಪ್ರಜ್ಞಾ ರಾವ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.