Udupi ಅಪರಿಚಿತನಿಂದ ಮಹಿಳೆಗೆ ವಂಚನೆ
Team Udayavani, Jul 7, 2024, 11:08 PM IST
ಉಡುಪಿ: ಅಪರಿಚಿತ ವ್ಯಕ್ತಿ ಕರೆ ಮಾಡಿದ ಮೇರೆಗೆ ಮಹಿಳೆಯೊಬ್ಬರು ಆತನ ಖಾತೆಗೆ ಸಾವಿರಾರು ರೂ. ಹಾಕಿ ವಂಚನೆಗೊಳಗಾದ ಘಟನೆ ನಡೆದಿದೆ.
ಉಡುಪಿಯ ಮಹಿಳೆಯೊಬ್ಬರು ಕರ್ತವ್ಯದಲ್ಲಿದ್ದ ವೇಳೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ನಾನು ನಿಮ್ಮ ತಂದೆಯ ಸ್ನೇಹಿತ ಡಾ| ಶರ್ಮಾಜಿ ಮಾತನಾಡುವುದಾಗಿ ನಂಬಿಸಿದ್ದಾರೆ. ಬಳಿಕ ಮುಂದುವರಿದು ಆತ ನಿಮ್ಮ ತಂದೆಗೆ ನಾನು 5,000 ರೂ. ಹಣ ನೀಡಲು ಬಾಕಿ ಇದೆ. ಅದನ್ನು ನಾನು ನಿಮ್ಮ ಖಾತೆಗೆ ಹಾಕುತ್ತೇನೆ ಎಂದು ತಿಳಿಸಿದ್ದಾನೆ. ಅನಂತರ ಮಹಿಳೆಯ ಖಾತೆಗೆ 50 ಸಾವಿರ ರೂ. ಜಮೆಯಾಗಿರುವ ಸಂದೇಶ ಬಂದಿದೆ. ಹೆಚ್ಚುವರಿ ಹಣ ಬಂದ ಬಗ್ಗೆ ಮಹಿಳೆ ಆತನಿಗೆ ತಿಳಿಸಿದ್ದಾರೆ.
ಅದಕ್ಕೆ ಆ ವ್ಯಕ್ತಿ ತಪ್ಪಾಗಿ ಹೆಚ್ಚುವರಿ ಹಣ ಬಂದಿದ್ದು, ಅದನ್ನು ನೀವು ವಾಪಸ್ ಹಾಕಿ ಎಂದು ಮತ್ತೂಂದು ಸಂಖ್ಯೆ ನೀಡಿದ್ದಾನೆ. ಅದರಂತೆ ಮಹಿಳೆ 45,000 ರೂ.ಗಳನ್ನು ಫೋನ್ಪೇ ಮೂಲಕ ಹಂತಹಂತವಾಗಿ ಪಾವತಿ ಮಾಡಿದ್ದರು. ಬಳಿಕ ಮಹಿಳೆಯ ಖಾತೆಯಿಂದ 2 ಬಾರಿ 20,000 ರೂ. ಕಡಿತಗೊಂಡಿದೆ. ಅನಂತರ 16 ಸಾವಿರ ರೂ.ಜಮೆಯಾಗಿರುವ ಬಗ್ಗೆ ಸಂದೇಶ ಬಂದಿತ್ತು. ಪರಿಶೀಲಿಸಿದಾಗ ಹಣ ಜಮೆಯಾಗಿರಲಿಲ್ಲ. ಈ ವೇಳೆ ಮಹಿಳೆಗೆ ತಾನು ಮೋಸ ಹೋಗಿರುವ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.