ಕುಕ್ಕುಂದೂರು: ಮನೆಗೆ ನುಗ್ಗಿ ಮಹಿಳೆಯ ಕೊಲೆ
Team Udayavani, Jul 9, 2018, 9:05 AM IST
ಕಾರ್ಕಳ: ಕಾರ್ಕಳ ಕುಕ್ಕುಂದೂರು ಸಮೀಪದ ಅಯ್ಯಪ್ಪ ನಗರದ ಮನೆಯೊಂದರಲ್ಲಿ ಮಹಿಳೆಯನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ.
ಪ್ಲೋರಿನ್ ಮಚಾದೋ (54) ಕೊಲೆಯಾದ ಮಹಿಳೆ. ರವಿವಾರ ಮಧ್ಯಾಹ್ನದ ವೇಳೆಗೆ ಕೊಲೆ ಕೃತ್ಯ ಬಹಿರಂಗವಾಗಿದೆ. ಮೃತದೇಹ ಬೆಡ್‌ಶೀಟ್ ಮುಚ್ಚಿದ ಸ್ಥಿತಿಯಲ್ಲಿತ್ತು. ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಕತ್ತಿಯಿಂದ ಕಡಿದು ಕೊಲೆಗೈದಿರಬಹುದು ಎಂದು ಶಂಕಿಸಲಾಗಿದೆ.
ಗಂಡಹೆಂಡತಿ ಪ್ರತ್ಯೇಕ ವಾಗಿದ್ದರು
ಮೃತ ಮಹಿಳೆಯು ಗಂಡನೊಂದಿಗೆ ವೈಮನಸ್ಸು ಹೊಂದಿದ್ದು, ಐದಾರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಗಂಡ ಮಾಳ ಸಮೀಪದ ಹುಕ್ರಟ್ಟೆಯಲ್ಲಿ ಮತ್ತು ಫ್ಲೋರಿನ್ ಕುಕ್ಕುಂದೂರಿನಲ್ಲಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಕಿರಿಯ ಮಗ ತಂದೆಯ ಜತೆಗೆ ಹಾಗೂ ಹಿರಿಯ ಮಗ ತಾಯಿಯ ಬಳಿ ಇದ್ದರು. ಶನಿವಾರ ರಜೆಯ ಹಿನ್ನೆಲೆಯಲ್ಲಿ ಹಿರಿಯ ಮಗನೂ ತಂದೆಯ ಮನೆಗೆ ತೆರಳಿದ್ದ. ಅಂದು ರಾತ್ರಿ ಮನೆಯಲ್ಲಿ ಫ್ಲೋರಿನ್ ಒಬ್ಬರೇ ಇದ್ದರು.
ರವಿವಾರ ಫ್ಲೋರಿನ್ ಪ್ರಾರ್ಥನೆಗಾಗಿ ಚರ್ಚ್‌ಗೆ ಬಂದಿರಲಿಲ್ಲ. ಹೀಗಾಗಿ ಮಧ್ಯಾಹ್ನದ ವೇಳೆಗೆ ಇವರ ಸಂಬಂಧಿ ಮಹಿಳೆಯೊಬ್ಬರು ಮನೆಗೆ ಬಂದಿದ್ದು, ಆಗ ಕೊಲೆ ಘಟನೆ ಬೆಳಕಿಗೆ ಬಂದಿದೆ.
ಬಡ್ಡಿ ವ್ಯವಹಾರ ಮುಳುವಾಯಿತೇ?
ಫ್ಲೋರಿನ್ ಅವರು ಬಡ್ಡಿಗೆ ಹಣ ನೀಡುವ ವ್ಯವಹಾರ ನಡೆಸುತ್ತಿದ್ದರೆಂದು ಹೇಳಲಾಗುತ್ತಿದೆ. ಆದರೆ ಇತ್ತೀಚೆಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಹೊರಗಡೆ ನೀಡಿದ್ದ ಹಣವೂ ಸರಿಯಾಗಿ ವಾಪಸ್ ಬರುತ್ತಿರಲಿಲ್ಲ.
ಈ ವ್ಯವಹಾರದಿಂದಲೇ ಕೊಲೆ ನಡೆಯಿತೇ ಎನ್ನುವ ಬಲವಾದ ಶಂಕೆ ಮೂಡಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಡಿವೈಎಸ್ಪಿ ಕುಮಾರಸ್ವಾಮಿ, ಕಾರ್ಕಳ ನಗರ ಠಾಣಾ ಪಿಎಸ್‌ಐ ನಂಜ ನಾಯ್ಕ, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಸಂಪರ್ಕ
ಕೆಲವು ವರ್ಷಗಳಿಂದ ಫ್ಲೋರಿನ್‌ಗೆ ಪೊಲೀಸರ ಜತೆಗೆ ಸಂಪರ್ಕವಿತ್ತು ಎಂದು ಹೇಳಲಾಗುತ್ತಿದೆ. ಬಡ್ಡಿಯ ಹಣದ ವಸೂಲಿಗಾಗಿ ಪೊಲೀಸರ ಸಂಪರ್ಕವಿತ್ತೇ ಅಥವಾ ಬೇರೇನಾದರೂ ಬೆದರಿಕೆ ಇದ್ದಿರಬಹುದೇ? ಅಥವಾ ಅದೆಲ್ಲವನ್ನೂ ಮೀರಿದ ಖಾಸಗಿ ಕಾರಣಗಳಿರಬಹುದೇ ಎಂಬ ಅನುಮಾನಗಳೂ ವ್ಯಕ್ತವಾಗಿವೆ.
ಬೊಬ್ಬೆ ಕೇಳಿಸಲಿಲ್ಲ
ಶನಿವಾರ ಅವರ ಮನೆಯಲ್ಲಿ ಒಬ್ಬರೇ ಇದ್ದರು. ಆದರೆ ಈ ಘಟನೆಗೆ ಸಂಬಂಧಿಸಿ ರಾತ್ರಿ ಯಾವುದೇ ಸುಳಿವು ಸಿಕ್ಕಿಲ್ಲ. ಮನೆಯಿಂದ ಬೊಬ್ಬೆಯೂ ಕೇಳಿಸಲಿಲ್ಲ ಎನ್ನುತ್ತಾರೆ ಸ್ಥಳೀಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.