ಮಹಿಳೆಯ ಗೂಡಂಗಡಿ ಕಿತ್ತೆಸೆತ; ಪ್ರತಿಭಟನೆ
Team Udayavani, Jan 13, 2021, 11:43 PM IST
ಉಡುಪಿ: ಉಡುಪಿಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿರುವ ನಗರಸಭೆಯ ಸ್ಥಳದಲ್ಲಿ ಚಿಪ್ಪು ಸುಣ್ಣದ ಗೂಡಂಗಡಿ ಇಟ್ಟುಕೊಂಡು ಹಲವು ವರ್ಷಗಳಿಂದ ಬದುಕು ಸಾಗಿಸಿಕೊಂಡಿದ್ದ ಮಹಿಳೆಯ ಅಂಗಡಿಯನ್ನು ವಿನಾ ಕಾರಣಕ್ಕಾಗಿ ಎತ್ತಂಗಡಿ ಮಾಡಲಾಗಿದೆ.
ಉದ್ಯಾವರದ ವನಿತಾ ಅವರು ಸುಮಾರು 40 ವರ್ಷಗಳಿಂದ ಇಲ್ಲಿ ಅಂಗಡಿ ನಡೆಸುತ್ತಿದ್ದರು. ಆದರೆ ಇವರ ಗೂಡಂಗಡಿ ಪಕ್ಕದ ಕಟ್ಟಡದ ಮಾಲಕರು ತಮ್ಮ ವ್ಯವಹಾರದ ಉದ್ದೇಶಕ್ಕೆ ನಿರ್ಮಿಸಿದ್ದ ಕಟ್ಟಡಕ್ಕೆ ಆವರಣ ಗೋಡೆ ನಿರ್ಮಿಸುವುದಕ್ಕಾಗಿ ಆಕೆಗೆ ಯಾವುದೇ ಮೂನ್ಸೂಚನೆ ನೀಡದೆ ಕಾಂಪೌಂಡ್ ಗೋಡೆ ಕಟ್ಟುವ ನೆಪದಲ್ಲಿ ಅವಮಾನೀಯವಾಗಿ ಅಂಗಡಿಯನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ರಾತ್ರಿ ಸಮಯದಲ್ಲಿ ಯುವತಿಗೆ ವಿಷಯ ತಿಳಿದಿದ್ದು, ಆಕೆ ಮನೆಯಿಂದ ಸ್ಥಳಕ್ಕೆ ಆಗಮಿಸಿ ನೋಡಿದಾಗ ದಿಗ್ಭ್ರಮೆಗೊಳಗಾಗಿದ್ದಾರೆ. ಖಾಸಗಿಯವರ ದೌರ್ಜನ್ಯ ಕಂಡು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಯಿತು. ನೊಂದ ಯುವತಿಗೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದರು. ಅಡಿಪಾಯ ಹಾಕಲು ತೋಡಿರುವ ಗುಂಡಿಯಲ್ಲಿ ಮಲಗಿ ಅನ್ಯಾಯದ ವಿರುದ್ಧ ಯುವತಿ ಪ್ರತಿಭಟಿಸಿದಳು. ಕೊನೆಗೆ ಪೋಲಿಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್
Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.