ಮಹಿಳೆಯರ ಸ್ಯಾನಿಟರಿ ನ್ಯಾಪ್‌ಕಿನ್ ತೆರಿಗೆ ಮುಕ್ತಗೊಳಿಸುವಂತೆ ಮನವಿ
Team Udayavani, Jul 15, 2017, 2:20 AM IST
ಮಲ್ಪೆ: ಮಹಿಳೆಯರಿಗೆ ಮೂಲಭೂತವಾಗಿ ಅವಶ್ಯಕವಾಗಿರುವ ಸ್ಯಾನಿಟರಿ ನ್ಯಾಪ್‌ಕಿನ್‌ನ ಮೇಲೆ ವಿಧಿಸಿರುವ ಜಿಎಸ್‌ಟಿ ತೆರಿಗೆಯನ್ನು ಮುಕ್ತಗೊಳಿಸಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಮಹಿಳೆಯರು ತಮ್ಮ ಋತುಸ್ರಾವದ ಸಮಯದಲ್ಲಿ ಉಪಯೋಗಿಸುವ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಇತೀ¤ಚೆಗೆ ನೂತನವಾಗಿ ಜಾರಿಗೆ ತಂದ ತೆರಿಗೆ ಪದ್ಧತಿ ಜಿ.ಎಸ್.ಟಿ ಯೋಜನೆಯಡಿ ಶೇ.12 ರಷ್ಟು ತೆರಿಗೆ ವಿಧಿಸಿರುವುದು ಖಂಡನೀಯ ಹಾಗೂ ಆಕ್ಷೇಪಾರ್ಹ. ಇದನ್ನು ಕೇವಲ ಒಂದು ಪ್ರಾಡಕ್ಟ್ ಆಗಿ ಗಮನಕ್ಕೆ ತೆಗೆದುಕೊಳ್ಳುವುದಕ್ಕಿಂತ ಹೆಣ್ಮಕ್ಕಳ ಅನಿವಾರ್ಯತೆ ಎಂದು ಅರಿಯಬೇಕಾಗಿತ್ತು.
ಜಿ.ಎಸ್.ಟಿ. ಜಾರಿಯಾಗುವ ಮುನ್ನವೇ ಹಲವು ಮಹಿಳಾ ಪರ ಸಂಘಟನೆಗಳು ತಮಗೆ ಹಾಗೂ ಅರ್ಥ ಸಚಿವರಿಗೆ ಈ ಬಗ್ಗೆ ಮನವಿ ಮಾಡಲಾಗಿತ್ತು. ಋತುಸ್ರಾವದ ಸಮಯದಲ್ಲಿ ಯೌವನಾವಸ್ಥೆಯ ವಿದ್ಯಾರ್ಥಿನಿಯರ, ಯುವತಿಯರ, ಮನೋಭಾವನೆಯನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಪ್ರಾಕೃತಿಕ ಪ್ರಕ್ರಿಯೆಗೆ ವಿಧಿಸಿರುವ ತೆರಿಗೆ ಮಹಿಳಾ ವಿರೋಧಿ ನೀತಿಯಾಗಿದೆ.
ಬಳೆಗಳು, ಬಿಂದಿ, ಗರ್ಭನಿರೋಧಕ ಮಾತ್ರೆಗಳು, ಕಾಂಡಮ್‌ಗಳು ಇವೆಲ್ಲದರ ಮೇಲೆ ಶೇ.0 ಜಿ.ಎಸ್‌ಟಿ. ವಿಧಿಸಿದ್ದು, ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಅತೀ ಅವಶ್ಯಕ ವಸ್ತುವಿನಡಿಯಲ್ಲಿ ಯಾಕೆ ಸೇರಿಸಿಲ್ಲ ಎಂಬುದೇ ಪ್ರಶ್ನಾತೀತವಾಗಿದೆ. ಈಗಲಾದರೂ ಇದರ ಗಂಭೀರತೆಯನ್ನು ಮತ್ತು ಅವಶ್ಯಕತೆಯನ್ನು ಅರಿತು, ಇದನ್ನು ತೆರಿಗೆ ಮುಕ್ತಗೊಳಿಸಿ ದೇಶದ 50% ಜನಸಂಖ್ಯೆಯಾದ ಮಹಿಳೆಯರ ಮಾನಸಿಕ ಭಾವನೆಗಳಿಗೆ ಸ್ಪಂದನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ನಿಯೋಗದಲ್ಲಿ ವೆರೋನಿಕಾ ಕೆರ್ನೇಲಿಯೋ, ಸರಳ ಕಾಂಚನ್, ಡಾ. ಸುನೀತ ಶೆಟ್ಟಿ, ರೋಶ್ನಿ ಒಲಿವರ್, ಜೋÂತಿ ಹೆಬ್ಟಾರ್, ಚಂದ್ರಿಕಾ ಶೆಟ್ಟಿ, ರಮಾದೇವಿ, ಪ್ರಮೀಳಾ ಜತ್ತನ್ನ, ಮೇರಿ ಡಿಸೋಜಾ, ಸಾಮಂತ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.