![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 25, 2019, 5:01 AM IST
ಅನಾದಿ ಕಾಲದಿಂದಲೂ ವಿಶ್ವದಲ್ಲಿ ಮಹಿಳೆಯರ ಮೇಲೆ ಹಿಂಸೆ, ದೌರ್ಜನ್ಯ ನಡೆಯುತ್ತಲೇ ಬಂದಿದೆ. ಅದರ ವಿರುದ್ಧ ಹೋರಾಟ, ಜಾಗೃತಿ ಪ್ರಯತ್ನಗಳು ನಡೆಯುತ್ತಲೇ ಇವೆ. ಪೂರಕವಾಗಿ ಲಿಂಗ ಸಮಾನತೆ ಬಗ್ಗೆ ಅರಿವು ಮೂಡಿಸುವ ಕಾರ್ಯಗಳೂ ಜತೆಗೆ ಸಾಗುತ್ತಿವೆ. ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನ (ಇಂಟರ್‌ನ್ಯಾಷನಲ್ ಡೇ ಫಾರ್ ದ ಎಲಿಮಿನೇಷನ್ ಆಫ್ ವಯಲೆನ್ಸ್ ಎಗೇನ್ಸ್$r ವುಮೆನ್) ಎಂಬ ಕಾರ್ಯಕ್ರಮವೂ ಇದೇ ನಿಟ್ಟಿನಲ್ಲಿ ಪ್ರತಿವರ್ಷ ನವೆಂಬರ್ 25ರಂದು ಆಚರಿಸಲ್ಪಡುತ್ತಿದೆ.
ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನ ಎಂಬುದು ಸರಕಾರಗಳು, ಅಂತಾರಾಷ್ಟ್ರೀಯ ಸಂಘಟನೆಗಳು ಮತ್ತು ಸರಕಾರೇತರ ಸಂಸ್ಥೆಗಳಿಗೆ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಇರುವ ಒಂದು ಸದವಕಾಶವಾಗಿದೆ. ಈ ದಿನ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಕ್ರಮಗಳನ್ನು ಮುಂದುವರಿಸುವ ಅಗತ್ಯದ ಬಗೆಗೆ ಗಮನ ಸೆಳೆಯಲು ವಿಶ್ವಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಮಹಿಳೆ ಮತ್ತು ಆಕೆಯ ಮಕ್ಕಳು ಹಿಂಸೆಯಿಂದ ಪಾರಾಗಲು ಅನುಕೂಲವಾಗುವಂಥ ಯೋಜನೆಗಳು, ಮಹಿಳೆಯರ ಮೇಲಿನ ದೌರ್ಜನ್ಯದ ಪರಿಣಾಮಗಳ ಕುರಿತಂತೆ ಜನರಿಗೆ ತಿಳಿವಳಿಕೆ ನೀಡುವ ಪ್ರಚಾರಾಂದೋಲನಗಳನ್ನು ಕೈಗೊಳ್ಳಲಾಗುತ್ತದೆ. ಸ್ಥಳೀಯವಾಗಿ ಈ ದಿನ ಮಹಿಳಾ ಸಂಘಟನೆಗಳು ರ್ಯಾಲಿ, ಕಮ್ಯುನಲ್ ಮೀಲ್ಸ್ (ಒಂದು ಸಾಮಾಜಿಕ/ ಸೆರೆಮೋನಿಯಲ್ ಉದ್ದೇಶದ ಒಂದು ಗುಂಪು ಅಥವಾ ತಂಡದಿಂದ ನೀಡಲಾಗುವ ಭೋಜನ), ನಿಧಿಸಂಗ್ರಹಣೆ ಇತ್ಯಾದಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು.
ಆಚರಣೆಯ ಉದ್ದೇಶ ವಿಶ್ವಾದ್ಯಂತ ಮಹಿಳೆಯರು ಅತ್ಯಾಚಾರ, ಕೌಟುಂಬಿಕ ಹಿಂಸೆ ಮತ್ತಿತರ ರೀತಿಯ ಹಿಂಸೆಗೆ ಗುರಿಯಾಗುತ್ತಿದ್ದಾರೆ ಎಂಬ ಅಂಶದ ಬಗೆಗೆ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಪೂರ್ವಸಿದ್ಧಾಂತ.
16 ದಿನಗಳ ಕ್ರಿಯಾವಾದ
ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನಾಚರಣೆಯೊಂದಿಗೆ ನಡೆಯುವ 16 ದಿನಗಳ ಆ್ಯಕ್ಟಿವಿಸಂ (ಕ್ರಿಯಾವಾದ) (ಲಿಂಗಾಧಾರಿತ ಹಿಂಸೆಯ ವಿರುದ್ಧ) ಎಂಬುದು ನ.25ರಂದು ಆರಂಭ ವಾಗಿ ಡಿಸೆಂಬರ್ 10 (ಮಾನವ ಹಕ್ಕುಗಳ ದಿನ) ರವರೆಗೆ ನಡೆಯುವ ಒಂದು ಅಂತಾರಾಷ್ಟ್ರೀಯ ಚಳವಳಿ. 1991ರಲ್ಲಿ ಆರಂಭವಾದ ಇದು ಪ್ರತಿವರ್ಷ ಸೆಂಟರ್ ಫಾರ್ ವುಮೆನ್ಸ್ ಗ್ಲೋಬಲ್ ಲೀಡರ್‌ಶಿಪ್‌ನಿಂದ ಸಂಯೋಜಿಸಲ್ಪಡುತ್ತದೆ. ಮಹಿಳೆ ಮತ್ತು ಹೆಣ್ಣುಮಕ್ಕಳ ಮೇಲಿನ ಹಿಂಸೆಯನ್ನು ನಿರ್ಮೂಲನೆ ಮಾಡಲು ಕರೆ ನೀಡುವುದಕ್ಕಾಗಿ ವಿಶ್ವಾದ್ಯಂತ ಸಂಸ್ಥೆಗಳು ಈ ಚಳವಳಿಯನ್ನು ಒಂದು ಸಂಘಟನಾತ್ಮಕ ಕಾರ್ಯತಂತ್ರವನ್ನಾಗಿ ಬಳಸುತ್ತವೆ. ಜತೆಗೆ, ಇದಕ್ಕೆ ಪೂರಕವಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್ ಅವರ ನಾಯಕತ್ವದ ಯುನೈಟ್ ಕ್ಯಾಂಪೇನ್ (United Nations Secretary-General’s UNiTE by 2030 to End Violence against Women campaign) ಜಾಗೃತಿ ಹೆಚ್ಚಳ, ಜ್ಞಾನ ಹಂಚುವಿಕೆ ಮತ್ತು ಬದಲಾವಣೆಗಾಗಿ ಜಾಗತಿಕ ಕ್ರಮಕ್ಕಾಗಿ ಕರೆ ನೀಡುತ್ತದೆ.
ಹಿನ್ನೆಲೆ
ಡೊಮೆನಿಕನ್ ಗಣರಾಜ್ಯದಲ್ಲಿ 1960ರ ನವೆಂಬರ್ 25ರಂದು ನಡೆದ ಮಿರಾಬಲ್ ಸೋದರಿಯರ ಪ್ರಾಣಾರ್ಪಣೆಯ ಗೌರವಾರ್ಥ ಈ ದಿನಾಚರಣೆ ನಡೆಯುತ್ತಿದೆ. ಮಿರಾಬಲ್ ಸೋದರಿಯರು (ಪ್ಯಾಟ್ರಿಯಾ ಮರ್ಸಿಡಿಸ್ ಮಿರಾಬಲ್, ಮರಿಯಾ ಅರ್ಜೆಂಟಿನಾ ಮಿನರ್ವಾ ಮಿರಾಬಲ್ ಮತ್ತು ಆ್ಯಂಟೋನಿಯಾ ಮರಿಯಾ ತೆರೆಸಾ ಮಿರಾಬಲ್) ಅಂದಿನ ಡೊಮೆನಿಕನ್ ದೊರೆ ರಫಾಯೆಲ್ ಟ್ರಾಜಿಲ್ಲೊನ ಸರ್ವಾಧಿಕಾರಿ ಆಡಳಿತ ಕೊನೆಗೊಳಿಸಲು ಹೋರಾಟ ನಡೆಸಿದ್ದರು. ಟ್ರಾಜಿಲ್ಲೊನ ಆದೇಶದಂತೆ ಮಿರಾಬಲ್ ಸೋದರಿಯರನ್ನು ಕೊಲ್ಲಲಾಯಿತು. ಅನಂತರ 1981ರಿಂದ ಮಹಿಳಾ ಹಕ್ಕುಗಳ ಹೋರಾಟಗಾರರು ಈ ಮೂವರ ಮರಣದ ವಾರ್ಷಿಕ ಆಚರಣೆಯ ದಿನವನ್ನು ಹಿಂಸೆ ವಿರೋಧಿ ದಿನವನ್ನಾಗಿ ಆಚರಿಸಲಾರಂಭಿಸಿದರು. 1999ರ ಡಿಸೆಂಬರ್ 17ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 25ನ್ನು ಮಹಿಳೆಯರ ಮೇಲಿನ ಹಿಂಸೆಯನ್ನು ತೊಡೆದುಹಾಕಲಿಕ್ಕಾಗಿ “ಇಂಟರ್‌ನ್ಯಾಷನಲ್ ಡೇ ಫಾರ್ ದ ಎಲಿಮಿನೇಷನ್ ಆಫ್ ವಯಲೆನ್ಸ್ ಎಗೇನ್ಸ್$r ವುಮೆನ್’ ಎಂಬುದಾಗಿ ಘೋಷಿಸಿತು. ಈ ದಿನವನ್ನು ಪ್ರತಿವರ್ಷ ಒಂದೊಂದು ಥೀಮ್ (ವಿಷಯವಸ್ತು) ನೊಂದಿಗೆ ಆಚರಿಸಲಾಗುತ್ತಿದೆ. ಯುನೈಟೆಡ್ ನೇಶನ್ಸ್ ಡೆವಲಪ್‌ಮೆಂಟ್ ಫಂಡ್ ಫಾರ್ ವುಮೆನ್ (UNIFEM) ಮೂಲಕ ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನಾಚರಣೆಯ ಕಾರ್ಯಕ್ರಮಗಳು ಸಂಯೋಜಿಸಲ್ಪಡುತ್ತವೆ.
ಆರೇಂಜ್
ದಿ ವರ್ಲ್ಡ್
ಆರೇಂಜ್ ದಿ ವರ್ಲ್ಡ್: ಜನರೇಶನ್ ಈಕ್ವಾಲಿಟಿ ಸ್ಟಾಂಡ್ಸ್ ಎಗೇನ್ಸ್$r ರೇಪ್!- ಇದು ಈ ಬಾರಿಯ ಯುನೈಟ್ ಕ್ಯಾಂಪೇನ್ ಅಥವಾ ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನದ ಥೀಮ್. ವಿವಿಧ ಸನ್ನಿವೇಶ, ಸಮಯದಲ್ಲಿ ಸಾರ್ವತ್ರಿಕವಾಗಿ ಮಹಿಳೆಯರು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವ ಈ ವೇಳೆಯಲ್ಲಿ ಬೆಳಕಿಗೆ ಬಾರದ ಪ್ರಕರಣಗಳು ಅದೆಷ್ಟೋ. ಇತ್ತೀಚಿನ ವರ್ಷಗಳಲ್ಲಿ ಮೀಟೂ, ಟೈಮ್ಸ್‌ಅಪ್, ನಾಟ್‌ವನ್‌ಮೋರ್ ಇತ್ಯಾದಿ ಕ್ಯಾಂಪೇನ್‌ಗಳ ಮೂಲಕ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಯುನೈಟ್ ಕ್ಯಾಂಪೇನ್ ಕೂಡ ಸಮಾಜವನ್ನು ಬಾಧಿಸುತ್ತಿರುವ ರೇಪ್ ಕಲ್ಚರ್‌ನ ವಿರುದ್ಧ ಒಂದು ನಿಲುವು ಕೈಗೊಳ್ಳಲು ಸಹಾಯ ಮಾಡುತ್ತದೆ.
-ಕುದ್ಯಾಡಿ ಸಂದೇಶ್ ಸಾಲ್ಯಾನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.