ಬ್ರಹ್ಮಾವರ: ನೀರಿನ ಭರವಸೆ ಮರೆಯಲ್ಲಿ ಆತಂಕ

ಹಲವು ಕಡೆಗಳಲ್ಲಿ ಕಾಮಗಾರಿ ; ಕೆಲವೆಡೆ ನೀರಿನ ಕೊರತೆಯ ಭಯ

Team Udayavani, Mar 17, 2020, 5:28 AM IST

ಬ್ರಹ್ಮಾವರ: ನೀರಿನ ಭರವಸೆ ಮರೆಯಲ್ಲಿ ಆತಂಕ

ಬ್ರಹ್ಮಾವರ ನಗರ ಹಾಗೂ ಗ್ರಾಮಾಂತರ ಭಾಗದ ಹಲವು ಕಡೆಗಳಲ್ಲಿ ಪ್ರತಿ ವರ್ಷ ನೀರಿನ ಕೊರತೆ ಮತ್ತು ಉಪ್ಪು ನೀರಿನ ಸಮಸ್ಯೆ ತಲೆದೋರುತ್ತದೆ. ಕೆಲವು ಕಡೆ ನೀರಿನ ಸಮಸ್ಯೆ ಪರಿಹಾರಕ್ಕೆ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನು ಹಲವಾರು ಸ್ಥಳಗಳಲ್ಲಿ ಈ ಬಾರಿಯೂ ಸಮಸ್ಯೆಯಾಗುವ ಭಯವಿದೆ.

ಬ್ರಹ್ಮಾವರ: ಕಳೆದ ಬೇಸಗೆಯಲ್ಲಿ ಮುಖ್ಯವಾಗಿ ಚೇರ್ಕಾಡಿ ಪಂಚಾಯತ್‌ ವ್ಯಾಪ್ತಿಯ ಪ್ರಗತಿನಗರ, ಗಂಗಾಡಿ, ಜಾರ್ಜೆಡ್‌, ಹುತ್ತಿ ಪರುಬೆಟ್ಟು ಮೊದಲಾದೆಡೆ ಹಾಹಾಕಾರ ಎದ್ದಿತ್ತು. ಅಂತರ್ಜಲ ಕುಸಿತಗೊಂಡ ಪರಿಣಾಮ 6 ಬೋರ್‌ವೆಲ್‌, ಎರಡು ಬಾವಿ ನಿರುಪಯುಕ್ತವಾಗಿವೆ.

ಇದಕ್ಕಾಗಿ ಈ ಬಾರಿ ಜಿಲ್ಲಾ ಪಂಚಾಯತ್‌ ಕುಡಿಯುವ ನೀರಿನ ಯೋಜನೆಯಡಿ 30.5 ಲಕ್ಷ ರೂ. ಅನುದಾನದಲ್ಲಿ ಶಾಶ್ವತ ಕಾಮಗಾರಿ ಜರಗುತ್ತಿದೆ. ನೀಲಾವರ ತಡೆಕಲ್ಲು ಬಳಿಯ ಸೀತಾ ನದಿಯಿಂದ ನೀರನ್ನು ತಂದು ಜಾರ್ಜೆಡ್‌ನ‌ಲ್ಲಿ ಸಂಸ್ಕರಿಸಲಾಗುತ್ತದೆ. ಅಲ್ಲಿಯೇ 1 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಿ ಪೈಪ್‌ಲೈಲ್‌ ಮೂಲಕ ವಿತರಿಸುವ ಯೋಜನೆ ಇದಾಗಿದೆ.

ಚಾಂತಾರು ಗ್ರಾ.ಪಂ.
ಹೇರೂರು ಹೊಳೆಬದಿ, ಭಂಡಾÕಲೆಬೆಟ್ಟು, ಬದನೆಕಾಡು, ರಾಜೀವನಗರ, ಮಾರಿಕಟ್ಟೆ, ಕೊಳಂಬೆಯಲ್ಲಿ ಉಪ್ಪು ನೀರಿನ ಸಮಸ್ಯೆಯಿದ್ದು, ಈ ಬಾರಿ ಮಾರಿಕಟ್ಟೆಯಲ್ಲಿ ಹೊಸ ಬೋರ್‌ವೆಲ್‌ ಹಾಗೂ ಪೈಪ್‌ಲೈನ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕರ್ಜೆ ಗ್ರಾ.ಪಂ.
ಕರ್ಜೆಯ ತಡಾಲಿನಲ್ಲಿ ಮದಗದ ಹೂಳೆತ್ತಲಾಗಿದ್ದು, ಬಾಳೆಬೆಟ್ಟು, ದರ್ಖಾಸು, ಕುರ್ಪಾಡಿ ಪ್ರದೇಶಕ್ಕೆ ಅನುಕೂಲವಾಗಲಿದೆ. ಆದರೆ ಕಡಂಗೋಡು, ಬ್ರಾಹ್ಮಣರಬೆಟ್ಟು, ಹಾಡಿಬೆಟ್ಟು, ಕೆಳಬೆಟ್ಟು, ಗುಂಡಾಳ, ನೂಜಿ, ಆಲಡ್ಕ, ತಳಬ, ಕಂಗಿಬೆಟ್ಟು, ಮರ್ಡಿ, ಸರಂಬಳ್ಳಿ, ತೆಂಕಬೈಲು, ಕುಕ್ಕುಡೆ, ನೆಕ್ಕರಾಡಿ, ಉದ್ದಳ್ಕ ಪ್ರದೇಶದ ಸಮಸ್ಯೆಗೆ ಪರಿಹಾರ ದೊರೆತಿಲ್ಲ.

ಹೆಗ್ಗುಂಜೆಯಲ್ಲಿ ಕಾಮಗಾರಿ:
ಕಾಡಿನಕೊಡೆR ಬಳಿ ಸೀತಾ ನದಿಯಿಂದ ಪೈಪ್‌ಲೈನ್‌ ಮೂಲಕ ನೀರನ್ನು ತಂದು ಪಂಚಾಯತ್‌ ಬಳಿ ಸಂಸ್ಕರಿಸಿ ವಿತರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಪಂಚಾಯತ್‌ ಬಳಿ 1 ಲಕ್ಷ ಲೀ. ನ ಟ್ಯಾಂಕ್‌ ನಿರ್ಮಿಸಲಾಗುತ್ತಿದೆ. ಇದರಿಂದ ಮಂದಾರ್ತಿ ಪೇಟೆ, ನಾಕೋಡಿ, ನೀರ್ಜೆಡ್‌, ಹಂದಿಗದ್ದೆ, ಒಳಮಕ್ಕಿ ಪ್ರದೇಶಕ್ಕೆ ಅನುಕೂಲವಾಗಲಿದೆ. ಆದರೆ ಜಾರ್ಕಲ್‌, ಹೆಮ್ಮಣಿಕೆ, ಬಾರಾಳಿಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಈ ಭಾಗದಲ್ಲಿ ಮತ್ತೆ ನಾಲ್ಕು ಬೋರ್‌ವೆಲ್‌ ವಿಫಲವಾಗಿವೆ.

ಬಾರಕೂರಿನಲ್ಲಿ ಉಪ್ಪೂರು ನೀರು
ಬಾರಕೂರು ಪಂಚಾಯತ್‌ ವ್ಯಾಪ್ತಿಯ ಕಚ್ಚಾರು ಮೂಡಹಿತ್ಲು, ಕಳುವಿನ ಬಾಗಿಲು, ಹಾಲೆಕೊಡಿ, ಅಜ್ಜಿಮನೆ ಬೆಟ್ಟು, ರಾಯರ ತೋಟ, ದೇವಾಡಿಗರ ಬೆಟ್ಟು, ಹೊಸಾಳ, ಗರಡಿ ವಠಾರ, ನಾಗರಮಠ, ಬದನಗೋಳಿ, ಬಾಯರ್‌ಬೆಟ್ಟು, ಜಪRಳಿ ಕುದ್ರು ಮೊದಲಾದೆಡೆ ಉಪ್ಪು, ಕೆಂಪು ನೀರಿನ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ. ಪ್ರಸ್ತುತ ಬಾರಕೂರು ಆಸ್ಪತ್ರೆ ಹಾಗೂ ಹೊಸಾಳ ಶಾಲೆ ಬಳಿಯ ಟ್ಯಾಂಕ್‌ನಿಂದ ನೀರು ಪೂರೈಸಲಾಗುತ್ತಿದೆ. ಆದರೆ ಟ್ಯಾಂಕಿ ನೀರಿನ ಒತ್ತಡ ಸಾಲುತ್ತಿಲ್ಲ. ಬಹುತೇಕ ಕಡೆ ಉಪ್ಪು ನೀರಿನ ಸಮಸ್ಯೆಯಿಂದ ಬೇಸಗೆಯಲ್ಲಿ ಟ್ಯಾಂಕರ್‌ ನೀರು ಅನಿವಾರ್ಯವೆನಿಸಿದೆ.

ಹಾರಾಡಿ ಗ್ರಾ.ಪಂ.
ಪಂಚಾಯತ್‌ ವ್ಯಾಪ್ತಿಯ ಗಾಂಧಿನಗರ ವಲಸೆ ಕಾರ್ಮಿಕರ ಪ್ರದೇಶದಲ್ಲಿ ಹೊಸ ಬಾವಿಯಾಗಿದೆ. ಕುಕ್ಕುಡೆ ಎಸ್‌ಸಿ ಕಾಲೋನಿಗೆ ಬಾವಿ ಮಂಜೂರಾಗಿದೆ. ಕೊಳ್ಕೆಕೆರೆಯಲ್ಲಿ ಬಾವಿ ದುರಸ್ತಿ, ಜಿ.ಎಂ. ಹಿಂಭಾಗದ ಬಾವಿಗೆ ಫಿಲ್ಟರ್‌ಗೆ ಪ್ರಸ್ತಾವನೆ ಇದೆ. ಗಾಂಧಿನಗರ ವ್ಯಾಪ್ತಿಯವರಿಗೆ ಖಾಸಗಿ ಬಾವಿಯಿಂದ ಪೂರೈಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಮಟಪಾಡಿ ಬಳ್ಳಿಕೆರೆಯಲ್ಲಿ ಹೊಸ ಬಾವಿ ನಿರ್ಮಿಸಲಾಗಿದ್ದು, ಬಲ್ಜಿಯ ಸಮಸ್ಯೆ ನೀಗಲಿದೆ. ಕಳೂ¤ರು ಗ್ರಾ.ಪಂ.ನ ಕೊಠಾರಿಬೆಟ್ಟು, ಕೋಂಬೆ, ಹೊಗೆ ಬೆಳಾರ, ಸುಳ್ಳಿ, ಮುಲ್ಕಿ, ಕೆಂಜೂರಿನ ಪೂಜಾರಿಬೆಟ್ಟು, ಅಮುಜಿಯಲ್ಲಿ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಇದೆ. ಪ್ರಸ್ತುತ ವರ್ಷ ಕಾಯಿನಾಡಿಗೆ ಪೈಪ್‌ ಲೈನ್‌ ಆಗಿದೆ. ಹೊಸ ಟ್ಯಾಂಕ್‌ ಆಗಲಿದೆ. ಕೆಂಜೂರಿನ ಜಾಂಗಾಲ್‌ನಲ್ಲಿ ಟ್ಯಾಂಕ್‌, ಪೈಪ್‌ಲೈನ್‌ ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕೂರು ಗ್ರಾಮದ ಕಜೆR, ಮಿಯಾರು, ಕೋಡ್‌ಜಡ್ಡು, ಮರಿಯಣ್ಣಮಕ್ಕಿ, ಮಾರಾಳಿ, ಚಂದಾಳಕಟ್ಟೆಯಲ್ಲಿ ಸಮಸ್ಯೆ ತಲೆದೋರಿತ್ತು. ಈ ಬಾರಿ ಕೋಡ್‌ಜಡ್ಡು, ತೊಟ್ಲಕಲ್ಲಿನಲ್ಲಿ ಹೊಸ ಬಾವಿಯ ಪ್ರಸ್ತಾವನೆ ಇಡಲಾಗಿದೆ.

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ.

ಶೀಘ್ರ ಪರಿಹಾರದ ಭರವಸೆ
ಸೀತಾನದಿಯಿಂದ ಜಾರ್ಜೆಡ್ಡಿಗೆ ನೀರನ್ನು ತರುವ ಶಾಶ್ವತ ಯೋಜನೆ ಪ್ರಗತಿಯಲ್ಲಿದೆ. ವಿದ್ಯುತ್‌ತ್ಛಕ್ತಿ ಕೆಲಸ ನಡೆಯುತ್ತಿದೆ. ಈಗಿರುವ ಪೈಪ್‌ಲೈನ್‌ನಲ್ಲಿ ಎ.15ರ ಒಳಗೆ ಕುಡಿಯುವ ನೀರು ಪೂರೈಸುವ ಭರವಸೆ ಇದೆ. ಜೂನ್‌ ತಿಂಗಳ ಒಳಗೆ ಟ್ಯಾಂಕ್‌ ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ.
-ಹರೀಶ್‌ ಶೆಟ್ಟಿ
ಅಧ್ಯಕ್ಷರು, ಚೇರ್ಕಾಡಿ ಗ್ರಾ.ಪಂ.

ಪ್ರಸ್ತಾವನೆ ಇದೆ
ಹೆರಂಜೆ ಕಿಂಡಿ ಅಣೆಕಟ್ಟು ಬಳಿಯ ಬಾವಿಯಲ್ಲಿ ಹೇರಳ ನೀರಿದ್ದರೂ ಬೇಸಗೆಯಲ್ಲಿ ಉಪ್ಪಿನ ಅಂಶದಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಮಾರಿಕಟ್ಟೆಯಲ್ಲಿ ಹೊಸ ಬೋರ್‌ವೆಲ್‌ ಹಾಗೂ ಪೈಪ್‌ಲೈನ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಮೀರಾ ಆರ್‌.
ಪಿಡಿಒ ಚಾಂತಾರು

ಟಾಪ್ ನ್ಯೂಸ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-mit

Manipal MIT: ಅಂತಾರಾಷ್ಟ್ರೀಯ ಕಾರ್ಯಾಗಾರ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.