ವ್ಯಕ್ತಿಯ ಹೆಸರಿಗೆ ಗಿಡನಾಟಿಯೊಂದಿಗೆ ಸಂರಕ್ಷಣೆಯ ಜವಾಬ್ದಾರಿ
Team Udayavani, Jun 9, 2018, 6:20 AM IST
ಹೆಬ್ರಿ : ಗುಣಮಟ್ಟದ ಶಿಕ್ಷಣದ ಜತೆ ವಿನೂತನ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅವಕಾಶ ಕಲ್ಪಿಸುತ್ತಿರುವ ಹೆಬ್ರಿ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗ ಈ ಬಾರಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ವಠಾರದಲ್ಲಿ ವ್ಯಕ್ತಿಯ ಹೆಸರಿರುವ ಫಲಕದಡಿಯಲ್ಲಿ ಗಿಡವೊಂದನ್ನು ನಾಟಿ ಮಾಡಿ ವಿನೂತನವಾಗಿ ಆಚರಿಸಿದೆ.
ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶೇಷಶಯನ ಕೆ. ಅವರ ಹೆಸರಿನಲ್ಲಿ ಮೇಣ ರಹಿತ ಹಲಸಿನ ಗಿಡ ನಾಟಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಸಿಗಳನ್ನು ನಾವು ಪ್ರೀತಿಸಿದರೆ ಅವು ತಕ್ಕ ಪ್ರತಿಫಲ ನೀಡುತ್ತವೆ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಮುಂದಿನ ದಿನಗಳಲ್ಲಿ ಸುಂದರ ಪರಿಸರ ನಿರ್ಮಿಸುವಂತೆ ಒಂದು ವ್ಯಕ್ತಿಯ ಹೆಸರಿನ ಫಲಕದೊಂದಿಗೆ ಗಿಡನೆಟ್ಟು ಆತನ ಪರಿಶೀಲನೆಯೊಂದಿಗೆ ಅದನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಅದೇ ಶಾಲೆಯ ವಿದ್ಯಾರ್ಥಿಗೆ ನೀಡಲಾಗಿದ್ದು ಆತನ ಹೆಸರನ್ನು ನಾಮ ಫಲಕದಲ್ಲಿ ಮುದ್ರಿಸಿ ಆತನ ಜವಾಬ್ದಾರಿ ಬಗ್ಗೆ ಗಮನ ಸೆಳೆದಿದ್ದಾರೆ. ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ , ಶಿಕ್ಷಕರು ,ಪ್ರಾಂಶುಪಾಲ ,ಉಪನ್ಯಾಸಕರ ಹೆಸರಿನಲ್ಲಿ ಶಾಲಾ ವಠಾರದಲ್ಲಿ ಗಿಡ ನೆಡಲಾಯಿತು.
ಹೆಬ್ರಿ ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಅಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕೆ. ಭಾಗವಹಿಸಿದ್ದರು. ಕಾಲೇಜಿನ ಖಜಾಂಚಿ ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಪರಿಸರ ಸ್ವಚ್ಚತೆ
ಸಂಸ್ಥೆಯ ಇಕೋ ಕ್ಲಬ್ ಮತ್ತು ರಾಮನ್ವಿಜ್ಞಾನ ಸಂಘದ ವತಿಯಿಂದ ಜಗದೀಶ ಭಂಡಾರಿ ಮತ್ತು ದಿನೇಶ ಶೆಟ್ಟಿಗಾರ ಅವರ ನೇತೃತ್ವದಲ್ಲಿ ಶಾಲಾ ಬಳಿಯ ಹೆಬ್ರಿ ಬಸ್ ತಂಗುದಾಣ ಹಾಗೂ ಅದರ ಸುತ್ತಮುತ್ತಲಿನ ಪರಿಸರ ಸ್ವಚ್ಚಗೊಳಿಸಿ ಪ್ಲಾಸ್ಟಿಕ್ ಮುಕ್ತ ವಲಯ ಕುರಿತು ಜನಜಾಗೃತಿ ಮೂಡಿಸುವುದರೊಂದಿಗೆ ಶಾಲಾ ವಠಾರವನ್ನು ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸಲಾಯಿತು.
ಸರ್ವಶಿಕ್ಷಾ ಅಭಿಯಾನದ ಸಹಾಯಕ ಯೋಜನಾಧಿಕಾರಿ ಚಂದ್ರನಾಯ್ಕ, ಉಪ ವಲಯ ಅರಣ್ಯಾಧಿಕಾರಿ ವಿಕಾಸ್ ಶೆಟ್ಟಿ ನಿವೃತ್ತ ಶಿಕ್ಷಕಿ ಪ್ರಭಾವತಿ ಹೆಗ್ಡೆ ಉಪಸ್ಥಿತರಿದ್ದರು.ಸಂಸ್ಥೆಯ ಉಪಪ್ರಂಶುಪಾಲ ದಿವಾಕರ ಮರಕಾಲ ಸ್ವಾಗತಿಸಿ , ಪ್ರಕಾಶ ಪೂಜಾರಿ ನಿರೂಪಿಸಿ, ಶಶಿಧರ ಶೆಟ್ಟಿ ವಂದಿಸಿದರು.
ಜವಾಬ್ದಾರಿ ಇದೆ.ಶಾಲೆಯಲ್ಲಿ ತನ್ನ ಹೆಸರಿನಲ್ಲಿ ನೆಟ್ಟಿರುವ ಗಿಡದ ಆರೈಕೆಯ ಜವಾಬ್ದಾರಿ ತಾನೇ ವಹಿಸಿಕೊಂಡು ಆಗಾಗ್ಗೆ ಭೇಟಿ ನೀಡಿ ಅದರ ಬೆಳವಣಿಗೆ ಪರಿಶೀಲನೆ ಮಾಡುತ್ತೇನೆ. ತಾನು ಹಿಂದೆ ಸೇವೆ ಸಲ್ಲಿಸಿದ ಎಲ್ಲ ಕಡೆಗಳಲ್ಲಿ ಇದೇ ರೀತಿಯ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇನೆ.
– ಶೇಷಶಯನ ಕೆ.,
ಉಪನಿರ್ದೇಶಕರು ,ಸಾರ್ವಜನಿಕ ಶಿಕ್ಷಣ ಇಲಾಖೆ,ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.