“ಸಣ್ಣ ಹಳ್ಳಿಯಲ್ಲೂ ರಂಗ ತಂಡಗಳು ಬೆಳಗಲಿ’

Team Udayavani, Mar 27, 2018, 6:30 AM IST

World-Theater-Day-Today.jpg

ಮಾ. 27 ವಿಶ್ವ ರಂಗಭೂಮಿ ದಿನ. ವಿಶ್ವದೆಲ್ಲೆಡೆ ರಂಗಾಸಕ್ತರು ಈ ದಿನವನ್ನು ಸಂಭ್ರಮಿಸುತ್ತಾರೆ. ಆಧುನಿಕ ಮಾಧ್ಯಮಗಳ ಮಧ್ಯೆ ರಂಗಭೂಮಿಯ ಪ್ರಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ ಎನಿಸಿದರೂ ಈಗಲೂ ರಂಗ ಚಳವಳಿ ನಿಂತಿಲ್ಲ. ಜತೆಗೆ ಸೂಕ್ಷ್ಮ ಸಂವೇದನಾ ರಂಗ ಪ್ರಯೋಗಗಳಿಗೆ ವೀಕ್ಷಕರು ಇದ್ದಾರೆ. ಈ ಹಿನ್ನೆಲೆಯಲ್ಲೇ ಕುಂದಾಪುರ ಭಾಗದಲ್ಲಿ ರಂಗ ಪ್ರಯೋಗಗಳು ಹೆಚ್ಚಲು ಏನು ಮಾಡಬೇಕು ಎನ್ನುವ ಕುರಿತು ಹಿರಿಯ ರಂಗಕರ್ಮಿಗಳು, ರಂಗಾಸಕ್ತರ ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.

ಯುನೆಸ್ಕೋ ಸಹಯೋಗದಲ್ಲಿ 1948 ರಲ್ಲಿ ಆರಂಭವಾದ ಇಂಟರ್‌ ನ್ಯಾಶನಲ್‌ ಥಿಯೇಟರ್‌ ಇನ್‌ಸ್ಟಿಟ್ಯೂಟ್‌ (ಐಟಿಐ) 1961ರ ಮಾರ್ಚ್‌ 27ರಂದು ವಿಶ್ವರಂಗಭೂಮಿ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಮೊದಲ ಆಚರಣೆ ನಡೆದದ್ದು 1962ರಲ್ಲಿ. ಪ್ರತಿ ವರ್ಷವೂ ಓರ್ವ ವಿಶ್ವದ ರಂಗ ದಿಗ್ಗಜರಿಂದ ಆ ವರ್ಷದ ಸಂದೇಶವನ್ನು ನೀಡಲಾಗುತ್ತದೆ. ಈ ವರ್ಷ ಸಂಸ್ಥೆಯ 70ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಆಫ್ರಿಕಾ, ಅಮೆರಿಕಾ, ಅರಬ್‌ ದೇಶಗಳು, ಏಶ್ಯಾ ಪೆಸಿಫಿಕ್‌ ಹಾಗೂ ಯುರೋಪ್‌ನ ಐವರು ರಂಗದಿಗ್ಗಜರಿಗೆ ಸಂದೇಶ ನೀಡುವ ಅವಕಾಶ ದೊರೆತಿದೆ. ಆ ಪೈಕಿ ಏಶ್ಯಾ ಪೆಸಿಫಿಕ್‌ ನ ಪರವಾಗಿ ನಮ್ಮ ದೇಶದ ರಾಮ್‌ ಗೋಪಾಲ್‌ ಬಜಾಜ್‌ ಅವರು ಸಂದೇಶ ನೀಡಿದ್ದಾರೆ. ಇವರು ಹಿರಿಯ ರಂಗಕರ್ಮಿ, ನಟ, ರಾಷ್ಟ್ರೀಯ ನಾಟಕ ಶಾಲೆಯ ಮಾಜಿ ನಿರ್ದೇಶಕರು.

ತೊಡಗಿಸಿಕೊಳ್ಳುವಿಕೆ ಹೆಚ್ಚಬೇಕು
ರಂಗ ಪ್ರಯೋಗಗಳು ನಡೆಯುವ ಬಗ್ಗೆ ಸೂಕ್ತ ಮಾಹಿತಿ ಸಿಗಬೇಕು. ಪ್ರೇಕ್ಷಕರು ಒಂದೊಂದು ತಂಡಕ್ಕೆ ಮಾತ್ರ ಸೀಮಿತ ಎನ್ನುವಂತಾಗಿರುವುದು ರಂಗಭೂಮಿಯ ಮೇಲಿನ ಪ್ರೀತಿ ಕಡಿಮೆಯಾಗುತ್ತಿದೆಯೇನೋ ಎಂದೆನಿಸುತ್ತಿದೆ. ಆದರೆ ಎಲ್ಲ ಪ್ರಯೋಗಳನ್ನು ಆಸ್ವಾದಿಸುವ ವಾತಾವರಣ ಸೃಷ್ಟಿಯಾಗಬೇಕು.
– ಡಾ| ರಶ್ಮಿ ಕೋಟೇಶ್ವರ, ರಂಗಾಸಕ್ತರು

ಮಕ್ಕಳಲ್ಲಿ ರಂಗ ಆಸಕ್ತಿ ಬೆಳೆಸಬೇಕು
ನಾಟಕಗಳನ್ನು ಹೆಚ್ಚಾಗಿ ನೋಡುವಂತೆ ಮಕ್ಕಳಲ್ಲಿ ರಂಗ ಆಸಕ್ತಿ ಬೆಳೆಸಬೇಕು. ಶಿಬಿರ, ತರಬೇತಿ, ಕಾರ್ಯಾಗಾರಗಳನ್ನು ನಡೆಸಿ ಮಕ್ಕಳನ್ನು ಪ್ರೇರೇಪಿಸಬೇಕು. ಹೊರ ರಾಜ್ಯದ ನಾಟಕ ತಂಡಗಳನ್ನು ಕರೆಸಿ ಇಲ್ಲಿ ಹೆಚ್ಚು – ಹೆಚ್ಚು ನಾಟಕಗಳನ್ನು ಪ್ರದರ್ಶಿಸುವ ಕಾರ್ಯ ಆಗಬೇಕಿದೆ.
– ಸದಾನಂದ ನಾವುಡ, 
ರಂಗಾಸಕ್ತರು 

ರಂಗ ಕಾರ್ಯಾಗಾರ ನಡೆಸಬೇಕು
ಆಧುನಿಕ ನಾಟಕಗಳಿಗೆ ಕುಂದಾಪುರದಲ್ಲಿ ಪ್ರೇಕ್ಷಕರಿದ್ದಾರೆ. ಆದರೆ ಹೆಚ್ಚು ಪ್ರಯೋಗಗಳು ನಡೆಯುತ್ತಿಲ್ಲ. ನಮ್ಮ ರಾಜ್ಯವಲ್ಲದೇ ಹೊರರಾಜ್ಯದ ನಾಟಕಗಳನ್ನೂ ಹೆಚ್ಚಾಗಿ ಪ್ರದರ್ಶಿಸಬೇಕು. ಈ ಕೆಲಸ ನಿರಂತರವಾಗಿ ನಡೆಯಬೇಕು. ರಂಗ ಪ್ರಯೋಗಗಳನ್ನು ಆಸ್ವಾದಿಸುವಂತೆ ಯುವಜನತೆಯನ್ನು ಪ್ರೇರೇಪಿಸಬೇಕಿದೆ. ಹೊಸ ಹೊಸ ನಿರ್ದೇಶಕರು ಹುಟ್ಟಿಕೊಳ್ಳಬೇಕು. ರಂಗ ಕಾರ್ಯಾಗಾರವನ್ನು ನಡೆಸಿದರೆ ಈ ಸಮಸ್ಯೆ ನೀಗಬಹುದು.
– ವಸಂತ ಬನ್ನಾಡಿ, 
ಸಂಚಾಲಕರು, ರಂಗ ಅಧ್ಯಯನ ಕೇಂದ್ರ ಕುಂದಾಪುರ 

ಅಲ್ಲಲ್ಲಿ ರಂಗ ತಂಡಗಳ ರಚನೆಯಾಗಲಿ
ರಂಗ ಚಟುವಟಿಕೆಗಳಿಗೆ ಪೂರಕ ಚಟುವಟಿಕೆಗಳ ವಾತಾವರಣವನ್ನು ನಿರ್ಮಿಸಬೇಕು. ಈ ಭಾಗದಲ್ಲಿ ಈಗಲೂ ರಂಗ ಪ್ರಯೋಗಗಳನ್ನು ಆಸ್ವಾದಿಸುವ ದೊಡ್ಡ ವರ್ಗವೇ ಇದೆ. ನೋಡುವುದು ಮಾತ್ರವಲ್ಲ, ಅನೇಕ ಮಂದಿಗೆ ಇಂತಹ ನಾಟಕಗಳಲ್ಲಿ ನಟಿಸಬೇಕೆಂಬ ಇಚ್ಛೆಯೂ ಇದೆ. ಅದಕ್ಕಾಗಿ ತರಬೇತಿ, ಕಾರ್ಯಾಗಾರ, ಸಂಘಟನೆ ಕುರಿತ ಮಾಹಿತಿ ನೀಡಬೇಕು. ಈಗ ಗುಣಮಟ್ಟದ ಪ್ರಯೋಗಗಳು ಬರುತ್ತಿಲ್ಲ ಎನ್ನುವ ಕಾರಣಕ್ಕೆ ಪ್ರೇಕ್ಷಕರು ದೂರ ಹೋಗಿರಬಹುದು. ಆದರೆ ಅಲ್ಲಲ್ಲಿ ತಂಡಗಳನ್ನು ಕಟ್ಟಿಕೊಂಡು ಪ್ರಯೋಗಗಳನ್ನು ನಡೆಸಿದರೆ ಆಸಕ್ತರು ಹೆಚ್ಚಬಹುದು. ಕೇರಳದ ಸಣ್ಣ ಸಣ್ಣ ಹಳ್ಳಿಗಳಲ್ಲೂ ದೊಡ್ಡ-ದೊಡ್ಡ ತಂಡಗಳನ್ನು ಕಟ್ಟಿಕೊಂಡು ಪ್ರಯೋಗ ಮಾಡುತ್ತಿದ್ದಾರೆ. ಸಹಜವಾಗಿಯೇ ಪ್ರೇಕ್ಷಕ ವರ್ಗವೂ ದೊಡ್ಡದಿದೆ. ನಮ್ಮಲ್ಲೂ ಇಂಥ ಕೆಲಸವಾಗಬೇಕು.
– ರಾಮಕೃಷ್ಣ ಹೇಳೆì, ರಂಗಾಸಕ್ತರು ಕುಂದಾಪುರ

ವಾರ್ಷಿಕೋತ್ಸವದಲ್ಲಿ ನಾಟಕ ಬೇಕು
ಹಿಂದೆ ಎಲ್ಲೆಡೆ ಸಂಘ-ಸಂಸ್ಥೆಗಳು, ಯುವಕ ಮಂಡಲಗಳು ತಮ್ಮ ವಾರ್ಷಿಕೋತ್ಸವಗಳಲ್ಲಿ ಸಂಘದ ಸದಸ್ಯರೇ ಸ್ವತಃ ತರಬೇತಿ ಪಡೆದು ನಾಟಕ ಪ್ರದರ್ಶಿಸುತ್ತಿದ್ದರು. ಆದರೆ ಈ ಪದ್ಧತಿ ಇತ್ತೀಚೆಗೆ ಕಡಿಮೆಯಾಗಿದೆ. ಸಿನೆಮಾ ನೃತ್ಯ, ಬೇರೆ ನಾಟಕ ತಂಡಗಳನ್ನು ಕರೆಸುವುದೇ ಸಾಮಾನ್ಯವಾಗಿದೆ. ಅದರಲ್ಲೂ ಅಸಂಬದ್ಧಗಳೇ ಹೆಚ್ಚು. ಆದರೆ ಹಿಂದಿನ ಹವ್ಯಾಸವೇ ಮರುಕಳಿಸಿದರೆ ನಾಟಕಗಳ ಗುಣಮಟ್ಟವೂ ಹೆಚ್ಚಬಹುದು. ವೀಕ್ಷಕರ ಸಂಖ್ಯೆಯೂ ಹೆಚ್ಚಲಿದೆ.
– ಗಣೇಶ ಕಾರಂತ, 
ಲಾವಣ್ಯ ನಾಟಕ ತಂಡ ಬೈಂದೂರು

ಎಲ್ಲೆಡೆ ಹರಡಲಿ
ರಂಗ ಚಟುವಟಿಕೆ ಗ್ರಾಮೀಣ ಮತ್ತು ನಗರ ಎಲ್ಲೆಡೆ ಹರಡ ಬೇಕು. ರಂಗಭೂಮಿ ಮಾನವೀ ಯತೆ ಕಾಪಾಡಲು ಅವಶ್ಯ.
-ರಾಮ್‌ ಗೋಪಾಲ್‌ ಬಜಾಜ್‌
(ಈ ಬಾರಿಯ ಸಂದೇಶದ 
ಒಟ್ಟೂ ಸಾರ)

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

3(1

Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.