ಯಡ್ತರೆ: ಮದ್ಯದಂಗಡಿ ವಿರೋಧಿಸಿ ಡಿಸಿ, ಆಯುಕ್ತರಿಗೆ ಮನವಿ
Team Udayavani, Jul 16, 2017, 2:45 AM IST
ಉಡುಪಿ: ಬೈಂದೂರಿನ ಯಡ್ತರೆ ಗ್ರಾ. ಪಂ. ವ್ಯಾಪ್ತಿಯ ಬಂಕೇಶ್ವರದ ಕಾವೇರಿ ಮಾರ್ಗದಲ್ಲಿ ಮದ್ಯದಂಗಡಿ ತೆರೆಯಲು ಅನಮತಿ ನೀಡದಂತೆ ಒತ್ತಾಯಿಸಿ ಜಿಲ್ಲಾ ಅಬಕಾರಿ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ನೂರಾರು ಮಂದಿ ಸ್ಥಳೀಯರು ಶನಿವಾರ ಮನವಿ ಸಲ್ಲಿಸಿದರು.
ಜನವಸತಿ ಪ್ರದೇಶವಾಗಿರುವ ಕಾವೇರಿ ಮಾರ್ಗದಲ್ಲಿ ಮದ್ಯದಂಗಡಿಗೆ ನಿಗದಿಪಡಿಸಿರುವ ಕಟ್ಟಡಕ್ಕೆ ಹೊಂದಿಕೊಂಡು ಸಾಕಷ್ಟು ವಾಸ್ತವ್ಯದ ಮನೆಗಳಿವೆ. ಅಲ್ಲದೇ ರಸ್ತೆ ಕೂಡ ಕಿರಿದಾಗಿದ್ದು, ಉದ್ಯೋಗಸ್ಥ ಮಹಿಳೆ, ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಮದ್ಯದಂಗಡಿ ತೆರೆಯುವುದರಿಂದ ಪರಿಸರದ ಮೇಲೆ ಪ್ರತಿಕೂಲಪರಿಣಾಮ ಬೀರುತ್ತದೆ ಎಂದು ಸ್ಥಳೀಯ ನಾಗರಿಕರು ಅಬಕಾರಿ ಆಯುಕ್ತರ ಬಳಿ ಮನವಿ ಮಾಡಿದರು. ಈ ಕುರಿತು ಹಿಂದೆ ತಹಶೀಲ್ದಾರ್, ಸ್ಥಳೀಯ ಠಾಣೆ, ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಈವರೆಗೆ ಸ್ಥಳ ಪರಿಶೀಲನೇಯಾಗಲಿ, ಸಾರ್ವಜನಿಕರ ಜತೆ ಮಾತುಕತೆಯನ್ನಾಗಲಿ ಅಧಿಕಾರಿಗಳು ನಡೆಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಮಾರ್ಗ ನಿವಾಸಿಗಳಾದ ಜೋಕಿನ್ ಫೆರ್ನಾಂಡೀಸ್, ವೀಣಾ ಫೆರ್ನಾಂಡಿಸ್, ಕಮಲ ದೇವಾಡಿಗ, ಷಾರ ಫೆರ್ನಾಂಡಿಸ್, ಭಾಸ್ಕರ್ ಮೊಗವೀರ, ಉಮೇಶ್ ಶೇರಿಗಾರ್, ನಾಗರಾಜ ಗಾಣಿಗ, ರಾಮಚಂದ್ರ ಅಡಿಗ, ಅಮಿತ್, ಅಸ್ಲಾಂ, ಚೇತನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.