ಹೈಫಾ ಯುದ್ಧದ ಶತಮಾನೋತ್ಸವ ಸಂಭ್ರಮಾಚರಣೆ
Team Udayavani, Sep 24, 2018, 6:00 AM IST
ಮೈಸೂರು: ಐತಿಹಾಸಿಕ “ಹೈಫಾ’ ಯುದ್ಧದ ಶತಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಇದೀಗ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೈಫಾ ಯುದ್ಧವನ್ನು ನೆನಪಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳು ನಡೆಯಬೇಕಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.
ಹೈಫಾ ಶತಮಾನೋತ್ಸವ ಆಚರಣೆ ಸಮಿತಿ ವತಿಯಿಂದ ನಗರದ ರಾಜೇಂದ್ರ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಐತಿಹಾಸಿಕ ಹೈಫಾ ಯುದ್ಧದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹೈಫಾ ಯುದ್ಧದ ಸ್ಮರಣಾರ್ಥ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಶತಮಾನೋತ್ಸವ ಆಚರಣಾ ಸಮಿತಿ ಮುಂದಾಗಬೇಕಿದೆ. ಇದಕ್ಕಾಗಿ ಮೈಸೂರು ರಾಜವಂಶದ ವತಿಯಿಂದ ಎಲ್ಲ ರೀತಿಯ ಸಹಕಾರ
ನೀಡಲಾಗುವುದು ಎಂದರು.
ಹೈಫಾ ಯುದ್ಧದ ಸ್ಮರಣಾರ್ಥ ಇತ್ತೀಚೆಗೆ ಇಂಗ್ಲೆಂಡಿನ ಲಾರ್ಡ್ಸ್ ಹಾಗೂ ದೆಹಲಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಹೈಫಾ ಯುದಟಛಿದಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಸೈನಿಕರ ಧೈರ್ಯ, ಶೌರ್ಯಗಳನ್ನು ಸ್ಮರಣೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಯುದ್ಧದ ಶತಮಾನೋತ್ಸವ ಆಚರಣೆಗಿಂತಲೂ ಮುಖ್ಯವಾಗಿ ಯುದಟಛಿದಲ್ಲಿ ಭಾಗವಹಿಸಿದ್ದ ನಮ್ಮ ಸೈನಿಕರ ಶೌರ್ಯವನ್ನು ಸ್ಮರಿಸಬೇಕಾದ ಅಗತ್ಯವಿದೆ ಎಂದರು.
ಸಂಸದ ಪ್ರತಾಪಸಿಂಹ ಮಾತನಾಡಿದರು. ಇದೇ ಸಂದರ್ಭದಲ್ಲಿ ಐತಿಹಾಸಿಕ ಹೈಫಾ ಯುದ್ಧದಲ್ಲಿ ಭಾಗವಹಿಸಿದ್ದ ಲಿಂಗರಾಜ ಅರಸ್ ಅವರ ಮೊಮ್ಮಗ ಟಿ.ಬಿ.ನಾಗಪ್ರಸನ್ನರಾಜೇ ಅರಸ್, ಕರ್ನಲ್ ದೇವರಾಜೇ ಅರಸ್ ಅವರ ಮೊಮ್ಮಗಳು ಚಿನ್ನಮಾಂಭ ಅರಸ್,ಕರ್ನಲ್ ಕೃಷ್ಣೇ ಅರಸ್ ಅವರ ಮೊಮ್ಮಕ್ಕಳಾದ ಜಯಂತಿ ಅರಸ್, ಮಂಜುಳಾ ಅರಸ್, ಲೆμrನೆಂಟ್ ಕರ್ನಲ್ ಅಬ್ದುಲ್ ಗಫರ್ ಅವರ ಮೊಮ್ಮಗ ಇμ¤ಯಾಜ್ ಅರಸ್ ಹಾಗೂ ಚಾಮರಾಜ ಅರಸ್ ಅವರ ಮೊಮ್ಮಗಳು ಯಶೋಮತಿ ಅರಸ್ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jogging: ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೈಟ್ ರನ್ನಿಂಗ್, ಜಾಗಿಂಗ್
Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Tabla Maestro; ಉಸ್ತಾದ್ ಜಾಕೀರ್ ಹುಸೇನ್ ದೈವೀ ಪುರುಷ
Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
ಕಲ್ಮಕಾರು: ಅಯ್ಯಪ್ಪ ವೃತಧಾರಿ ಮೇಲೆ ಕಾಡಾನೆ ದಾಳಿ… ಆಸ್ಪತ್ರೆಗೆ ದಾಖಲು
Jogging: ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೈಟ್ ರನ್ನಿಂಗ್, ಜಾಗಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.