ಸಾರಥಿ ಇಲ್ಲದೆ ಸೊರಗಿದ ಯಕ್ಷಗಾನ ಅಕಾಡೆಮಿ
ಮಹತ್ವಾಕಾಂಕ್ಷಿ ಯೋಜನೆ ನನೆಗುದಿಗೆ; ಪ್ರಶಸ್ತಿ ಪ್ರದಾನವೂ ನಡೆದಿಲ್ಲ
Team Udayavani, Oct 7, 2019, 5:30 AM IST
ಸಾಂದರ್ಭಿಕ ಚಿತ್ರ.
ಕೋಟ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಹೊಸ ಸರಕಾರ ರಚನೆಯಾದಾಗ ಎಲ್ಲ ಅಕಾಡೆಮಿಗಳ ಪದಾಧಿಕಾರಿಗಳನ್ನು ವಜಾಗೊಳಿಸಿದ್ದು, ಯಕ್ಷಗಾನ ಅಕಾಡೆಮಿಯೂ ಸೇರಿದೆ. ತೆರವಾದ ಈ ಸ್ಥಾನಗಳಿಗೆ ಪುನರ್ ನೇಮಕ ಆಗದಿರುವುದ
ರಿಂದ ಹಲವಾರು ಮಹತ್ವಾಕಾಂಕ್ಷಿ ಕಾರ್ಯ ಕ್ರಮಗಳು ಸ್ಥಗಿತಗೊಂಡಿವೆ.
ಯಕ್ಷಗಾನ ಅಕಾಡೆಮಿಯಿಂದ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ,ಯಕ್ಷ ಸಿರಿ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನನೀಡಲಾಗುತ್ತದೆ. ಚುನಾವಣೆ, ಅರ್ಥಿಕ ಕೊರತೆ ಮುಂತಾದ ಕಾರಣಗಳಿಂದಾಗಿ 2018ನೇ ಸಾಲಿನಲ್ಲಿ ಈ ಕಾರ್ಯಕ್ರಮ ನಡೆದಿ ರಲಿಲ್ಲ. ಅನಂತರ 2018ರ ಪ್ರಶಸ್ತಿಗೆ 2019ರ ಜುಲೈಯಲ್ಲಿ 18 ಮಂದಿಯನ್ನು ಆಯ್ಕೆ ಮಾಡ ಲಾಗಿತ್ತು. ಆಗಸ್ಟ್ ಕೊನೆ ವಾರದಲ್ಲಿ ಶಿರಸಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತಯಾರಿಯೂ ನಡೆದಿತ್ತು. ಅಷ್ಟರಲ್ಲೇ ಆಡಳಿತ ಮಂಡಳಿ ವಜಾ ಆಗಿ ಸ್ಥಗಿತಗೊಂಡಿದೆ.
ಪ್ರಸಂಗ ಡಿಜಿಟಲೀಕರಣ ಸ್ಥಗಿತ
ನೂರಾರು ಯಕ್ಷಗಾನ ಕೃತಿಗಳ ಡಿಜಿಟಲೀಕರಣ ಅಕಾಡೆಮಿಯ ಮಹತ್ವಾ ಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿತ್ತು. ಸೆಪ್ಟಂಬರ್ ಮೊದಲ ವಾರದಲ್ಲಿ ವೆಬ್‌ಸೈಟ್ ಲೋಕಾರ್ಪಣೆಗೆ ತಯಾರಿ ನಡೆಸಲಾಗಿತ್ತು. ಇದೂ ಸ್ಥಗಿತಗೊಂಡಿದೆ.
ಇತರ ಅಕಾಡೆಮಿಗಳಲ್ಲೂ ಇತರ ಹಲವು ಅಕಾಡೆಮಿಗಳಿಗೂ ಪದಾ ಧಿಕಾರಿ ನೇಮಕವಾಗದೆ ಇದೇ ಸ್ಥಿತಿ ಇದೆ.
ತರಬೇತಿ ಶಿಬಿರಗಳಿಗೆ ಹಿನ್ನಡೆ
ಯಕ್ಷಗಾನ ತರಬೇತಿ ಶಿಬಿರಗಳನ್ನು ಆಯೋಜಿಸಲು ಅರ್ಜಿ ಆಹ್ವಾನಿಸಲಾ ಗಿತ್ತು ಮತ್ತು ನೂರಕ್ಕೂ ಮಿಕ್ಕಿ ಅರ್ಜಿಗಳು ಬಂದಿದ್ದವು. ಆದರೆ ಆಯ್ಕೆ ಹಂತದಲ್ಲಿ ಅಧಿಕಾರ ಇಲ್ಲವಾಯಿತು.
ಕೀರ್ತಿಶೇಷ ಕಲಾವಿದರನ್ನು ಸ್ಮರಿಸುವ “ಹಿರಿಯರ ನೆನಪು’ ಎನ್ನುವ ಅಪರೂಪದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೇಷ್ಠ ಕಲಾವಿದರು ಮತ್ತು ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕ ರಚನೆ ಜಾರಿ ಯಲ್ಲಿತ್ತು. ಇವೆಲ್ಲ ಸ್ಥಗಿತಗೊಂಡಿವೆ.
ಅಕಾಡೆಮಿಯ ಅಧ್ಯಕ್ಷನಾಗಿ ಒಂದೇ ವರ್ಷದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತಂದ ತೃಪ್ತಿ ಇದೆ. ಸರಕಾರ ಬದಲಾಯಿತೆಂದು ಅಕಾಡೆಮಿಯ ಪದಾಧಿಕಾರಿಗಳನ್ನು ಬರ್ಖಾಸ್ತುಗೊಳಿಸುವುದು ಕೆಟ್ಟ ಸಂಪ್ರದಾಯ. ನನಗೆ ಅಧಿಕಾರ ಹೋಗಿದೆ ಎನ್ನುವ ನೋವಿಲ್ಲ. ಕೈಗೆತ್ತಿಕೊಂಡ ಕೆಲಸಗಳು ಪೂರ್ಣಗೊಳ್ಳಲಿಲ್ಲವಲ್ಲ ಎನ್ನುವ ಬೇಸರವಿದೆ. ಆದಷ್ಟು ಶೀಘ್ರ ಅಕಾಡೆಮಿಗೆ ಆಡಳಿತ ಮಂಡಳಿ ರಚನೆಯಾಗಲಿ. ಅವರು ನಮ್ಮ ಉತ್ತಮ ಕೆಲಸಗಳನ್ನು ಮುಂದುವರಿಸಲಿ ಎನ್ನುವುದೇ ಕೋರಿಕೆಯಾಗಿದೆ.
– ಎಂ.ಎ. ಹೆಗಡೆ
ನಿಕಟಪೂರ್ವ ಅಧ್ಯಕ್ಷರು, ಯಕ್ಷಗಾನ ಅಕಾಡೆಮಿ
ಮಂಜೂರಾಗಿ ಅರ್ಧಕ್ಕೆ ಸ್ಥಗಿತಗೊಂಡ ಕೆಲಸಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಹೊಸ ಆಡಳಿತ ಮಂಡಳಿ ನೇಮಕವಾದ ಮೇಲೆ ಅನುಮೋದನೆಗೊಂಡ ಕೆಲಸಗಳು ಮುಂದುವರಿಯಲಿವೆ ಮತ್ತು ಪ್ರಸ್ತಾವನೆ ಹಂತದಲ್ಲಿರುವುದರ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ.
-ಶಿವರುದ್ರಪ್ಪ
ರಿಜಿಸ್ಟ್ರಾರ್, ಯಕ್ಷಗಾನ ಅಕಾಡೆಮಿ
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.