Yakshagana ಸ್ಪರ್ಧೆ: ಕುತ್ಪಾಡಿ ಪ್ರಥಮ, ತೊಟ್ಟಂ ದ್ವಿತೀಯ
ಬ್ರಹ್ಮಬೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿ ವಜ್ರಮಹೋತ್ಸವ
Team Udayavani, Feb 11, 2024, 11:37 PM IST
ಮಲ್ಪೆ: ಕಡೆಕಾರು ಕಿದಿಯೂರು ಶ್ರೀ ಬ್ರಹ್ಮಬೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿಯ ವಜ್ರ ಮಹೋತ್ಸವ ಸಮಾರಂಭ, ದಿ| ತೋನ್ಸೆ ಜಯಂತ್ ಕುಮಾರ್ ನಿರ್ದೇಶಿಸಲ್ಪಟ್ಟ ಆಯ್ದ ಹವ್ಯಾಸಿ ಯಕ್ಷಗಾನ ಸಂಘಗಳ ಯಕ್ಷಗಾನ ಸ್ಪರ್ಧೆಯ ಸಮಾರೋಪ ಫೆ. 10ರಂದು ಜರಗಿತು.
ಯಕ್ಷಗಾನ ಸ್ಪರ್ಧೆಯಲ್ಲಿ ಕುತ್ಪಾಡಿಯ ಶ್ರೀ ರಾಮಕೃಷ್ಣ ಯಕ್ಷಗಾನ ಕಲಾ ಮಂಡಳಿ ಪ್ರಥಮ, ತೊಟ್ಟಂ ಗಜಾ ನನ ಯಕ್ಷಗಾನ ಕಲಾಮಂಡಳಿ ಎರಡ ನೇ ಸ್ಥಾನವನ್ನು ಗೆದ್ದುಕೊಂಡಿದೆ. ಅತ್ಯುತ್ತಮ ವಾಗಿ ಅಭಿನಯಿಸಿದ ಕಲಾವಿದರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗಿದೆ.ಕಲ್ಮಾಡಿ ಬ್ರಹ್ಮಬೈದರ್ಕಳ ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷ ಅಚ್ಚುತ ಅಮೀನ್ ಕಲ್ಮಾಡಿ ಅಧ್ಯಕ್ಷತೆ ವಹಿಸಿದ್ದರು.
ಎಂಐಟಿಯ ಪ್ರಾಧ್ಯಾಪಕ ಪ್ರೊ| ಎಸ್.ವಿ. ಉದಯ ಕುಮಾರ್ ಶೆಟ್ಟಿ ಮಾತನಾಡಿ ಸುಸಂಸ್ಕೃತ, ಆತ್ಮವಿಶ್ವಾಸವನ್ನು ಬೆಳೆಸುವ ಸಂಪ್ರ ದಾಯ ನಮ್ಮಲ್ಲಿ ಬರಬೇಕು, ಇದು ಯಕ್ಷಗಾನದಿಂದ ಸಾಧ್ಯ. ಸಂಘಸಂಸ್ಥೆಗಳು ಆಗಾಗ ಮಕ್ಕಳ ಯಕ್ಷಗಾನ ಸ್ಪರ್ಧೆ, ಕಮ್ಮಟಗಳನ್ನು ನಡೆಸುವ ಮೂಲಕ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
ಶಾಸಕ ಯಶ್‌ಪಾಲ್ ಸುವರ್ಣ, ಕಾಂಚನ ಹುಂಡೈನ ಆಡಳಿತ ನಿರ್ದೇಶಕ ಪ್ರಸಾದ್‌ರಾಜ್ ಕಾಂಚನ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ ಕುಮಾರ್ ಶೆಟ್ಟಿ, ಕಡೆಕಾರು ಗ್ರಾ. ಪಂ. ನ ಅಧ್ಯಕ್ಷ ಜಯಕರ್ ಸೇರಿಗಾರ್, ಅಂಬಲಪಾಡಿ ಗ್ರಾ. ಪಂ.ನ ಅಧ್ಯಕ್ಷೆ ಸುಜಾತಾ ವೈ. ಶೆಟ್ಟಿ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರು, ಕಿದಿಯೂರು ನಾರಾಯಣಗುರು ಸೇವಾ ಸಮಿತಿಯ ಅಧ್ಯಕ್ಷ ಸುಧಾಕರ್ ಕಲ್ಮಾಡಿ, ಕಡೆಕಾರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಂಕರ್ ಜಿ. ಸುವರ್ಣ, ಉದ್ಯಮಿ ರವಿರಾಜ್ ಕಿದಿಯೂರು, ಸ್ತ್ರೀಶಕ್ತಿ ಸ್ವಸಹಾಯ ಸಂಘದ ನಿರ್ದೇಶಕ ಐರಿನ್ ಎಲ್. ಅಂದ್ರಾದೆ, ಸಂಘದ ಗೌರವಾಧ್ಯಕ್ಷರಾದ ಜಯಶೀಲ ಕಿದಿಯೂರು, ಧರ್ಮಪಾಲ ಕಡೆಕಾರು ಉಪಸ್ಥಿತರಿದ್ದರು.
ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷ ಪ್ರಸಾದ್ ಟಿ.ಆರ್. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಡಿ. ಪಾಲನ್ ವರದಿ ವಾಚಿಸಿದರು. ದಯಾನಂದ ಉಗ್ಗೆಲ್‌ಬೆಟ್ಟು ಮತ್ತು ಭಾಸ್ಕರ ಸುವರ್ಣ ಕನ್ನರ್ಪಾಡಿ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸತೀಶ್ ಕಿದಿಯೂರು ವಂದಿಸಿದರು.
ವಜ್ರ ಮಹೋತ್ಸವ ಪ್ರಶಸ್ತಿ ಪ್ರಧಾನ
ಹಿರಿಯ ಬಣ್ಣದ ವೇಷಧಾರಿ ಎಲ್ಲಂಪಳ್ಳಿ ಜಗನ್ನಾಥ ಆಚಾರ್ ಅವರಿಗೆ ವಜ್ರ ಮಹೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ಗುರು ಕೆ. ರತ್ನಾಕರ ಆಚಾರ್ಯ ಅವರಿಗೆ ಗುರುವಂದನೆ ನೀಡಲಾಯಿತು. ಸಂಘದ ಹಿರಿಯ ಸದಸ್ಯರಾದ 13 ಮಂದಿಯನ್ನು ಸಮ್ಮಾನಿಸಲಾಯಿತು. ಕಡೆಕಾರು ಮತ್ತು ಕಿದಿಯೂರು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.