ತಿರುಗಾಟಕ್ಕೆ ಸಜ್ಜಾದ ಯಕ್ಷಗಾನ ಮೇಳಗಳು
Team Udayavani, Nov 15, 2019, 5:38 AM IST
ಬಸ್ರೂರು: ಮಳೆಗಾಲ ಮುಗಿದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಯಕ್ಷಗಾನ ಮೇಳಗಳ ತಿರುಗಾಟ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಯಕ್ಷರಂಗದ ಬಗ್ಗೆ ಒಂದು ಮುನ್ನೋಟ ಬೀರುವುದು ಹೆಚ್ಚು ಪ್ರಸ್ತುತವಾಗಿದೆ.
ಬಡಗು ತಿಟ್ಟಿನಲ್ಲಿ ಡೇರೆ ಮೇಳಗಳಿರುವುದು ಶ್ರೀ ಸಾಲಿಗ್ರಾಮ ಮತ್ತು ಶ್ರೀ ಪೆರ್ಡೂರು ಮೇಳಗಳು ಮಾತ್ರ. ಈ ಎರಡೂ ಮೇಳಗಳು ಈ ವರ್ಷದ ತಿರುಗಾಟಕ್ಕೆ ಎರಡು-ಮೂರು ಹೊಸ ಪ್ರಸಂಗಗಳನ್ನು ಈಗಾಗಲೇ ತಯಾರು ಮಾಡಿಕೊಂಡಿದೆ. ಈ ಎರಡೂ ಮೇಳಗಳು ಮಳೆಗಾಲದ ಯಕ್ಷಗಾನ ತಿರುಗಾಟವನ್ನು ಮುಗಿಸಿದ್ದು ತಿರುಗಾಟಕ್ಕೆ ಹೊಸ ಕಲಾವಿದರ ಸೇರ್ಪಡೆ ಮತ್ತಿತರ ಬದಲಾವಣೆಯೊಂದಿಗೆ ಸಜ್ಜಾಗಿದೆ.
ಕಳೆದ ವರ್ಷ ಶ್ರೀ ಜಲವಳ್ಳಿ ಮೇಳ ಯಶಸ್ವಿ ತಿರುಗಾಟ ನಡೆಸಿದ್ದರೂ ಈ ಬಾರಿ ತಿರುಗಾಟವನ್ನು ನಡೆಸುತ್ತಿಲ್ಲ. ನಷ್ಟದ ಕಾರಣದಿಂದ ತಿರುಗಾಟವನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಮೇಳದಲ್ಲಿದ್ದ ಪ್ರಸಿದ್ಧ ಕಲಾವಿದರೀಗ ಬೇರೆ ಬೇರೆ ಮೇಳಗಳಲ್ಲಿ ಸೇರ್ಪಡೆಗೊಂಡಿದ್ದಾರೆ.
ಉಳಿದಂತೆ ಬಡಗು ತಿಟ್ಟಿನಲ್ಲಿ ಹಲವು ಬಯಲಾಟದ ಮೇಳಗಳಿದ್ದು ಅವುಗಳಲ್ಲಿ ಶ್ರೀ ಮಂದಾರ್ತಿ, ಶ್ರೀ ಮಾರಣಕಟ್ಟೆ, ಶ್ರೀ ಅಮƒತೇಶ್ವರಿ, ಶ್ರೀ ಕಮಲಶಿಲೆ ಮೇಳಗಳು ಐದು ಮತ್ತು ಎರಡೆರಡು ಮೇಳಗಳನ್ನು ಹೊಂದಿದ್ದು ಖಾಯಂ ಸೇವೆಯಾಟದ ಒತ್ತಡದಲ್ಲಿದೆ. ಉಳಿದಂತೆ ಬಡಗಿನ ಶ್ರೀ ಸೌಕೂರು, ಶ್ರೀ ಮಡಾಮಕ್ಕಿ, ಶ್ರೀ ಹಿರಿಯಡಕ, ಶ್ರೀ ಗೋಳಿಗರಡಿ, ಶ್ರೀ ಚೋನ ಮನೆ ಆಜ್ರಿ, ಶ್ರೀ ಸಿಗಂಧೂರು, ಶ್ರೀ ಹಟ್ಟಿಯಂಗಡಿ, ಶ್ರೀ ಮೇಗರವಳ್ಳಿ, ಶ್ರೀ ಹಾಲಾಡಿ ಮತ್ತಿತರ ಮೇಳಗಳು ಹರಕೆಯಾಟಗಳು ಮತ್ತು ಕಟ್ಟುಕಟ್ಟಲೆಯಾಟವನ್ನು ಯಶಸ್ವಿಯಾಗಿ ನಡೆಸುತ್ತಿವೆ.
ಯಕ್ಷರಂಗಕ್ಕೆ ನಷ್ಟ
ಬಡಗು ತಿಟ್ಟಿನ ಹೆಸರಾಂತ ಕಲಾವಿದರಾಗಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ಜಲವಳ್ಳಿ ವೆಂಕಟೇಶ ರಾವ್ ಅವರ ನಿಧನ ಯಕ್ಷರಂಗಕ್ಕೆ ತುಂಬಲಾಗದ ನಷ್ಟವಾಗಿದೆ. ಹಲವು ಹಿರಿಯ ವೇಷಧಾರಿಗಳ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುತ್ತಿದ್ದು, ಈ ಬಾರಿಯೂ ನೀಡಲಾಗಿದೆ. ಈ ಬಾರಿಯ ತಿರುಗಾಟದಲ್ಲಿ ಡೇರೆ ಮೇಳಗಳಲ್ಲಿ ಯಾವ ಪ್ರಸಂಗ ಯಶಸ್ವಿಯಾಗಿ ರಂಜಿಸಬಹುದು?
ಯಾವ ಕಲಾವಿದ ಯಾವ ನೂತನ ದಾಖಲೆ ಮಾಡುತ್ತಾನೆ ಎಂಬುದಕ್ಕೆ ಮೇಳಗಳ ತಿರುಗಾಟ ಆರಂಭವಾದ ನಂತರವೇ ಉತ್ತರವನ್ನು ಪ್ರೇಕ್ಷಕರು ಕಂಡುಕೊಳ್ಳಬೇಕಾಗಿದೆ.
-ದಯಾನಂದ ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.