‘ಯಕ್ಷಗಾನ ಸಮೃದ್ಧವಾದ ಕಲೆ’
Team Udayavani, Jul 18, 2017, 2:55 AM IST
ಕುಂದಾಪುರ: ಯಕ್ಷಗಾನ ಸಮೃದ್ಧವಾದ ಕಲೆ. ನೃತ್ಯ, ಹಾಡುಗಾರಿಕೆ, ವೇಷಭೂಷಣ ಅಭಿನಯಗಳಿಂದ ಕೂಡಿದ ಈ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಕಲಾವಿದರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ ಜೀವನ ಪರ್ಯಂತ ಕಲಾಸೇವೆ ಮಾಡಿದ ಕಲಾವಿದರು ಕೊನೆಗಾಲದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇಂತಹ ಕಲಾವಿದರಿಗೆ ಸರಕಾರ ಹಾಗೂ ಯಕ್ಷಪ್ರೇಮಿಗಳು ಸಹಕಾರ ನೀಡಬೇಕಾಗಿದೆ ಎಂದು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಘ್ನೇಶ್ವರ ಮಂಜ ಹೇಳಿದರು. ಅವರು ಜು.13 ರಂದು ಮಾರಣಕಟ್ಟೆ ವಾಸುಕಿ ಸಭಾಭವನದಲ್ಲಿ ಮಾರಣಕಟ್ಟೆ ವಿಪ್ರ ಯಕ್ಷಗಾನ ಅಭಿಮಾನಿ ಬಳಗದ ವತಿಯಿಂದ ಮಂದಾರ್ತಿ ಮೇಳದ ಹಾಸ್ಯಗಾರ ಮಹಾಬಲ ದೇವಾಡಿಗ ಅವರಿಗೆ ನಡೆದ ಸಮ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಹಿರಿಯ ಅರ್ಚಕ ನಾಗೇಂದ್ರ ಭಟ್ ವಹಿಸಿ ಕಲಾವಿದ ಮಹಾಬಲ ದೇವಾಡಿಗರನ್ನು ಸಮ್ಮಾನಿಸಿದರು. ಮಹಾಬಲ ದೇವಾಡಿಗ ಅವರಿಗೆ ರೂ. 50 ಸಾವಿರ ಆರ್ಥಿಕ ಸಹಾಯವನ್ನು ನೀಡಿ ಸಮ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ಯಕ್ಷಗಾನ ಭಾಗವತ ವಿಶ್ವೇಶ್ವರ ಸೋಮಯಾಜಿ, ಸಾಲಿಗ್ರಾಮ ಮೇಳದ ಭಾಗವತ ರಾಘವೇಂದ್ರ ಮಯ್ಯ ಭಾಗವಹಿಸಿದ್ದರು. ಮಾರಣಕಟ್ಟೆಯ ಹೋಟೆಲ್ ಉದ್ಯಮಿ ಶಂಕರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುರಾಜ್ ಭಟ್ ಶಂಕ್ರಪ್ಪನಕೊಡ್ಲು ಸಮ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಗುರು ಸೋಮಯಾಜಿ ಮೋರ್ಟು, ಗಣಪತಿ ಅಡಿಗ ಕುಂಜ್ಞಾಡಿ ಹಾಗೂ ಸಂಗಡಿಗರು ಕಾರ್ಯಕ್ರಮ ಸಂಘಟಿಸಿದರು. ಸುಧೀಂದ್ರ ಉಡುಪ ಹೊಸೂರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.