ನ. 17ರಿಂದ ಕಮಲಶಿಲೆ ಯಕ್ಷಗಾನ ಮೇಳಗಳ ತಿರುಗಾಟ ಆರಂಭ
Team Udayavani, Nov 17, 2019, 5:58 AM IST
ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇಗುಲದ ವತಿಯಿಂದ ನಡೆಸಲ್ಪಡುವ ಶ್ರೀ ಕ್ಷೇತ್ರ ದಶಾವತಾರ ಯಕ್ಷಗಾನ ಎರಡು ಮೇಳಗಳು ರಂಗು ರಂಗಿನ ವೇಷ ಭೂಷಣಗಳೊಂದಿಗೆ, ನುರಿತ ಕಲಾವಿದರೊಂದಿಗೆ ತಿರುಗಾಟಕ್ಕೆ ಸಜ್ಜುಗೊಂಡಿವೆ. ನ. 17ರಂದು ಪ್ರಥಮ ದೇವರ ಸೇವೆ ಆಟದೊಂದಿಗೆ 2019-20ನೇ ಸಾಲಿನ ತಿರುಗಾಟ ಆರಂಭಗೊಳ್ಳಲಿದೆ.
ಶ್ರೀ ಕ್ಷೇತ್ರದಲ್ಲಿ ನ. 17ರ ರವಿವಾರದಂದು ಪೂರ್ವಾಹ್ನ 11.25ಕ್ಕೆ ಶ್ರೀ ಗಣಪತಿಹೋಮ, ಮಹಾಗಣಪತಿ ಪೂಜೆ, ರಾತ್ರಿ 8.30ರಿಂದ ಪ್ರಥಮ ದೇವರ ಸೇವೆ ಆಟದೊಂದಿಗೆ 2019-20ನೇ ಸಾಲಿನ ತಿರುಗಾಟಕ್ಕೆ ಚಾಲನೆ ದೊರೆಯಲಿದೆ. ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಾರ್ಯಾಲಯದ ಜನರಲ್ ಮ್ಯಾನೇಜರ್ ಯೋಗೀಶ್ ಆಚಾರ್ಯ ಅವರು ಸೇವೆಯಾಟದ ತಿರುಗಾಟವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರದ ಆನುವಂಶಿಕ ಆಡಳಿತ ಧರ್ಮದರ್ಶಿ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಭಾಗವತ ರವೀಂದ್ರ ಶೆಟ್ಟಿ ಹೊಸಂಗಡಿ ಅವರು ಎರಡು ಮೇಳಗಳಿಗೂ ಭಾಗವತರಾಗಿ ಭಾಗವಹಿಸಲಿದ್ದಾರೆ.
“ಎ’ ಮೇಳ: ಸಂಚಾಲಕರಾಗಿ ಎಚ್. ನಾರಾಯಣ ಶೆಟ್ಟಿ, ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ ಶೆಟ್ಟಿ ಬೆಳ್ವೆ ಹಾಗೂ ಅಶೋಕ ಕುಮಾರ್ ಮುದುಕೊಡ್ಲು, ಸಂಗೀತದಲ್ಲಿ ಅನಿಲ್ ಪ್ರಕಾಶ ಶೆಟ್ಟಿ ಮೂಡುಬಗೆ, ಮದ್ದಲೆಗಾರರಾಗಿ ಚಂದ್ರಶೇಖರ ರಾಮಚಂದ್ರ ಭಟ್ ಮಂಚುಗುಳಿ ಶಿರಸಿ ಹಾಗೂ ವಿಶ್ವನಾಥ ಭಟ್ ಯಲ್ಲಾಪುರ, ಚಂಡೆಯಲ್ಲಿ ಪ್ರಶಾಂತ ಭಂಡಾರಿ ಗುಣವಂತೆ, ವಿಘ್ನೇಶ ಆಚಾರ್ಯ ಸಿದ್ದಾಪುರ, ಸ್ತ್ರೀ ಪಾತ್ರದಲ್ಲಿ ಜಯರಾಮ ಕೊಠಾರಿ ಕಮಲಶಿಲೆ, ಸುಕುಮಾರ ನೀರ್‌ಜೆಡ್ಡು, ಮಹೇಶ್ ಹೊನ್ನಪ್ಪ ವಂದಿಗೆ, ಶಶಾಂಕ ಮಲ್ಲಾಪುರ, ಅಕ್ಷಯ ಕುಮಾರ ಶಿರಿಯಾರ, ಬಣ್ಣದ ವೇಷದಲ್ಲಿ ಪ್ರಭಾಕರ ನಾಯ್ಕ ನಂಚಾರು, ಹಾಸ್ಯಗಾರರಾಗಿ ಕುಶಲ ಪೂಜಾರಿ ನಾಗರಕೊಡಿಗೆ, ಅನಿಲ್ ಶೆಟ್ಟಿ ಮುದ್ದೂರು, ಮುಮ್ಮೇಳದಲ್ಲಿ ಗಣೇಶ ಆಲ್ಮನೆ, ಉದಯಕುಮಾರ್ ತಾರೆಕೋಡ್ಲು, ಉದಯ ಕೊಠಾರಿ ಚಕ್ರಮೈದಾನ, ವಿಶ್ವನಾಥ ಹೆನ್ನಾಬೈಲು, ಭಾಸ್ಕರ್ ತಿಮ್ಮ ಮರಾಠೆ, ರಾಮಚಂದ್ರ ಹೆಗಡೆ ಗುಡ್ಡೆದಿಂಬ, ರಾಘವೇಂದ್ರ ಆಚಾರ್ ಅಮಾಸೆಬೈಲು, ಅಜಂತ ಆಚಾರ್ ಯಡಮೊಗೆ, ವಿಘ್ನೇಶ ಶೆಟ್ಟಿ ಯಡಮೊಗೆ, ಅನಿಲ್ ಶೆಟ್ಟಿ ಮುದ್ದೂರು, ಜಯಂತ ಸೂರ್ಗೋಳಿ, ಕೃಷ್ಣ ನಾಯ್ಕ ಕಕ್ಕುಂಜೆ ಭಾಗವಹಿಸಲಿದ್ದಾರೆ.
“ಬಿ’ ಮೇಳ: ಸಂಚಾಲಕರಾಗಿ ಸೌಡ ಗೋಪಾಲ, ಭಾಗವತರಾಗಿ ಗಣೇಶ್ ನಾಯ್ಕ ಯಡಮೊಗೆ ಹಾಗೂ ಗಜೇಂದ್ರ ಶೆಟ್ಟಿ ಆಜ್ರಿ, ಸಂಗೀತದಲ್ಲಿ ಸುರೇಶ ನಾಯ್ಕ ಕೊಕ್ಕರ್ಣೆ, ಮದ್ದಲೆಗಾರರಾಗಿ ನಾಗರಾಜ ನಾಯ್ಕ ಯಡಮೊಗೆ, ಕೃಷ್ಣ ಸಂತೆಕಟ್ಟೆ, ಚಂಡೆಯಲ್ಲಿ ಕುಮಾರ್ ಮರಕಾಲ ಕೊಕ್ಕರ್ಣೆ, ಚೇತನ ಆಚಾರ್ ಬೆಳ್ಳಾಲ, ಸ್ತ್ರೀ ಪಾತ್ರದಲ್ಲಿ ಪಂಜು ಕುಮಾರ್ ಬಗ್ವಾಡಿ, ಕೃಷ್ಣ ಗಾಣಿಗ ಹೊಸಂಗಡಿ, ರವೀಂದ್ರ ಶೆಟ್ಟಿ ಯಡಮೊಗೆ, ಪ್ರದೀಪ ತಂತ್ರಾಡಿ,ಯೋಗೀಶ್ ಪೂಜಾರಿ ನೇರಳಕಟ್ಟೆ, ಬಣ್ಣದ ವೇಷದಲ್ಲಿ ನಾಗರಾಜ ದೇವಾಡಿಗ ಕಂಬದಕೋಣೆ, ಹಾಸ್ಯಗಾರರಾಗಿ ವಿಶ್ವನಾಥ ನಾಯ್ಕ ಕುಳ್ಳಂಬಳ್ಳಿ, ಸುರೇಶ ಮೂಡುಬಗೆ, ಮುಮ್ಮೇಳದಲ್ಲಿ ಗೋಪಾಲ ಸೌಡ, ಸಂಜು ಗಾಣಿಗ ಹೆರಂಜಾಲು, ನಾಗೇಶ್ ದೇವಾಡಿಗ ಬಿಜೂರು, ನಾಗರಾಜ ದೇವಾಡಿಗ ಆಲೂರು, ನಿತಿನ್ ಶೆಟ್ಟಿ ಹೆಗ್ಗೊàಡ್ಲು, ಕೃಷ್ಣ ಕುಡೇರಿ, ಚಂದ್ರಶೇಖರ ಮರಾಠೆ, ಚೇತನ ಕೊಕ್ಕರ್ಣೆ, ಸುರೇಶ್ ಪೂಜಾರಿ, ಮೇಘರಾಜ ಬೆಳ್ವೆ, ಪ್ರಶಾಂತ ನಾಯ್ಕ ಪಾಲ್ಗೊಳ್ಳಲಿದ್ದಾರೆ.
ಪೌರಾಣಿಕ ಪ್ರಸಂಗಗಳಿಗೆ ಆದ್ಯತೆ
ಈಗಾಗಲೇ ಹೆಚ್ಚಿನ ಆಟಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಸಂಘ-ಸಂಸ್ಥೆಗಳು, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಈ ಸಾಲಿನ ತಿರುಗಾಟದ ಅವಧಿಯಲ್ಲಿ ಇನ್ನೂ ಕೆಲವು ದಿನಗಳಲ್ಲಿ ಆಟ ಆಡಿಸಲು ಅವಕಾಶವಿದೆ. ಪೌರಾಣಿಕ ಪ್ರಸಂಗಗಳಿಗೆ ಮಾತ್ರ ಆದ್ಯತೆ. ಕಾಲಮಿತಿ ಪ್ರದರ್ಶನಕ್ಕೂ ಅವಕಾಶವಿದೆ. ಆಟ ಆಡಿಸುವವರು ದೇಗುಲದ ಕಚೇರಿ ಅಥಾವ ಮೇಳದ ಸಂಚಾಲಕರ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು.
-ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ,ಆನುವಂಶಿಕ ಆಡಳಿತ ಮೊಕ್ತೇಸರರು ಶ್ರೀ ಕ್ಷೇತ್ರ ಕಮಲಶಿಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.