“ಯಕ್ಷಗಾನ ಕ್ಷೇತ್ರಂ ಸಂಸ್ಕೃತೇನ ಉಪಕೃತಮ್”
Team Udayavani, Aug 24, 2018, 10:09 AM IST
ಉಡುಪಿ: ಯಕ್ಷಗಾನ ಕ್ಷೇತ್ರಂ ಸಂಸ್ಕೃತೇನ ಬಹು ಉಪಕೃತಂ ಅಸ್ತಿ ತಥಾ ಪ್ರಾಚೀನ ಕಾಲೇ ಸಂಸ್ಕೃತಂ ಸಾಮಾನ್ಯ ಜನಾನಾಂ ಭಾಷಾ ಆಸೀತ್ -ಇತಿ ವಿದ್ವಾನ್ ಡಾ| ರಾಘವ ನಂಬಿಯಾರ್ ಮಹೋದಯಃ ಉಕ್ತವಾನ್|
ಉಡುಪಿ ತೆಂಕಪೇಟೆ ಸಂಸ್ಕೃತ ಭಾರತೀ ಕಾರ್ಯಾಲಯದಲ್ಲಿ ಗುರುವಾರ ಆರಂಭ ಗೊಂಡ ಸಂಸ್ಕೃತ ಸಪ್ತಾಹದಲ್ಲಿ ಮಾತನಾಡಿದ ಡಾ| ನಂಬಿಯಾರ್, ಯಕ್ಷಗಾನದ ಪ್ರಸಿದ್ಧ ಕಲಾವಿದರು ಸಂಸ್ಕೃತ ಮೂಲದಿಂದಲೇ ಬಂದವರು ಎಂದರು.
ಸಂಸ್ಕೃತ ಕಲಿಕೆ, ಉಚ್ಚಾ ಕಷ್ಟ. ಆದರೆ ಚಿಕ್ಕ ಪ್ರಾಯದಲ್ಲಿ ಮಕ್ಕಳಿಗೆ ಇಂತಹ ಕಷ್ಟ ಕೊಡಬೇಕು. ಸಂಸ್ಕೃತ ಸುಭಾಷಿತಗಳ ಕೊಡುಗೆ ಅಪಾರ. ಕಷ್ಟದ ಸಂದರ್ಭದಲ್ಲಿ ಅದು ಸಹಾಯಕ್ಕೆ ಬರುತ್ತದೆ. ಸಾಹಿತ್ಯರಾಶಿಯಂತೂ ಆನಂದಸಾಗರದಂತೆ. ಸಂಸ್ಕೃತ ಭಾರತಿಯವರು ಎಲ್ಲ ಜಾತಿಯವರಿಗೆ ಸಂಸ್ಕೃತ ಕಲಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಇಂಗ್ಲಿಷ್‌ನಿಂದ ತಮೋಗುಣ, ಆದರೆ ಸಂಸ್ಕೃತದಿಂದ ಸತ್ವಗುಣ ವೃದ್ಧಿಯಾಗು ತ್ತದೆ ಎಂದು ಇಸ್ಕಾನ್ ಪ್ರಮುಖ ರಕ್ತಕ ಗೋವಿಂದದಾಸ್ ಅಭಿಪ್ರಾಯಪಟ್ಟರು. ಸಂಸ್ಕೃತ ಭಾರತೀ ಜಿಲ್ಲಾಧ್ಯಕ್ಷ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಶ್ರೀಹರಿ ಶರ್ಮ ಸ್ವಾಗತಿಸಿ, ಸಂಸ್ಕೃತ ಸಂಭಾಷಣಾ ಶಿಬಿರದ ಶಿಕ್ಷಕಿ ವನಿತಾ ವಂದಿಸಿದರು. ಆರ್.ಟಿ. ಭಟ್ ಕಾರ್ಯಕ್ರಮ ನಿರ್ವಹಿಸಿದರು. ಒಂದು ವಾರ ಕಾಲ ವಿವಿಧೆಡೆಗಳಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯಲಿವೆ.
ತೊದಲು ನುಡಿ, ಖನ್ನತೆಗೆ ಸಂಸ್ಕೃತ ಪರಿಹಾರ
ತೊದಲು ನುಡಿ ತೊಂದರೆ ಅನುಭವಿಸುವವರಿಗೆ ಸಂಸ್ಕೃತ ಕಲಿಕೆಯಿಂದ ಪರಿಹಾರ ಕಂಡುಕೊಂಡಿದ್ದೇನೆ. ಇದ ರಿಂದ ಉಚ್ಚಾರ ಸ್ಪಷ್ಟತೆ ಉಂಟಾಗುತ್ತದೆ. ಜೋತಿಷ, ಆಯುರ್ವೇದ, ಸಂಸ್ಕೃತ ಸಾಹಿತ್ಯ, ವಾಸ್ತು ಇತ್ಯಾದಿ ಕ್ಷೇತ್ರಗಳು ಧರ್ಮದ ವಿಚಾರ ವನ್ನು ಹೇಳದೆ ಅದಕ್ಕೆ ಮೀರಿದ ವಿಷಯಗಳನ್ನೇ ಹೇಳುತ್ತವೆ. ಇವೆಲ್ಲವೂ ಸಂಸ್ಕೃತ ದಲ್ಲಿರುವುದರಿಂದ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸದೆ ಇತರ ಲೌಕಿಕ ವ್ಯವಹಾರ ಕ್ಷೇತ್ರಕ್ಕೂ ಬಳಸುವಂತಾಗಬೇಕು. ಖನ್ನತೆಗೆ ವಿಷ್ಣು ಸಹಸ್ರ ನಾಮ ಉಚ್ಚಾರಣೆ ಉತ್ತಮ. ಸಂಸ್ಕೃತ ಉಚ್ಚಾರಣೆಯಿಂದ ಮಿದುಳು ಚುರುಕಾಗಿ ಕಾರ್ಯನಿರ್ವಹಿಸುತ್ತದೆ ಎಂದು ಉದ್ಘಾಟಿಸಿದ ಆಯುರ್ವೇದ ವೈದ್ಯ ಡಾ| ತನ್ಮಯ ಗೋಸ್ವಾಮಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.