“ಸಂಡೆ’ ಜೀವನಕ್ಕೆ ಬಾಬಾ ರಾಮದೇವ್ ಸಲಹೆ
ಉಡುಪಿ ಜನತೆಯಲ್ಲಿ ಹೆಚ್ಚಿದ ಯೋಗೋತ್ಸಾಹ
Team Udayavani, Nov 18, 2019, 5:41 AM IST
ಉಡುಪಿ: ಪರ್ಯಾಯಶ್ರೀ ಪಲಿಮಾರು ಮಠಾಧೀಶರ ಆಸ್ಥೆಯಿಂದ ಆಯೋಜನೆಗೊಂಡಿರುವ ಪ್ರಸಿದ್ಧ ಯೋಗಪಟು ಬಾಬಾ ರಾಮದೇವ್ ಅವರ ಯೋಗ ಶಿಬಿರದಲ್ಲಿ ರವಿವಾರ ಎರಡನೇ ದಿನ ಜನರು ಹೆಚ್ಚಿನ ಆಸಕ್ತಿಯಿಂದ ಪಾಲ್ಗೊಂಡರು.
ಸಾಮಾನ್ಯವಾಗಿ ಸಮಾಜದಲ್ಲಿ ಕಂಡು ಬರುತ್ತಿರುವ ರವಿವಾರದ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವಂತೆ ರಾಮದೇವ್ ಕರೆ ನೀಡಿದರು.
ರವಿವಾರ ಇತರ ದಿನಗಳಿಗಿಂತ ಹೆಚ್ಚಿನ ಸಮಯವನ್ನು ಯೋಗಾಸನ, ಪ್ರಾಣಾಯಾಮ ಅಭ್ಯಾಸಗಳಿಗೆ ಕೊಡಬೇಕು ಎಂದರು.
ಸೂರ್ಯಾರ್ಘ್ಯ ಮಹತ್ವ
ಮುಖ್ಯಮಂತ್ರಿಯಾಗಿದ್ದ ಖಂಡೂರಿ ಸೂರ್ಯನಿಗೆ ಅರ್ಘ್ಯ ಕೊಟ್ಟದ್ದರಿಂದ ಅವರ ದೃಷ್ಟಿ ಸಮಸ್ಯೆ ನಿವಾರಣೆಯಾ ಯಿತು. ಸೂರ್ಯದೇವನಿಗೆ ನೀರಿನಲ್ಲಿ ಅರ್ಘ್ಯಕೊಡುವುದೂ ಮುಖ್ಯ. ರೇಡಿಯೇಶನ್ ತಡೆ ಶಕ್ತಿಯ ತುಳಸಿ ಗಿಡಕ್ಕೆ ಬೆಳಗ್ಗೆದ್ದು ನೀರೆರೆದು ಸೂರ್ಯನಿಗೆ ಅರ್ಘ್ಯ ಕೊಡುವುದೂ ವಿಜ್ಞಾನವಾಗಿದೆ. ಬಾಲ ಸೂರ್ಯನ ಬಿಸಿಲಿನಲ್ಲಿ ಒಂದು ಗಂಟೆ ಓಡಾಡಿದರೆ ವಿಟಮಿನ್ ಡಿ ಕೊರತೆಯಾಗುವುದಿಲ್ಲ ಎಂದರು.
ಪುಸ್ತಕ ಬಿಡುಗಡೆ
ಆಚಾರ್ಯ ಬಾಲಕೃಷ್ಣರು ಬರೆದ “ಆಯುರ್ವೇದ ಸಿದ್ಧಾಂತದ ರಹಸ್ಯ’ ಪುಸ್ತಕದ ಅನುವಾದವನ್ನು ಕರ್ಣಾಟಕ ಬ್ಯಾಂಕ್ ಎಂಡಿ ಮಹಾಬಲೇಶ್ವರ ಅವರ ಪತ್ನಿ ಅನ್ನಪೂರ್ಣ ಅವರು ಮಾಡಿದ್ದು ಈ ಕೃತಿಯನ್ನು ರಾಮದೇವ್ ಮತ್ತು ಪೇಜಾವರ ಶ್ರೀಗಳು ಬಿಡುಗಡೆಗೊಳಿಸಿದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರ್ಣಾಟಕ ಬ್ಯಾಂಕ್ ಎಜಿಎಂಗಳಾದ ಶ್ರೀನಿವಾಸ ದೇಶಪಾಂಡೆ, ಗೋಪಾಲಕೃಷ್ಣ ಸಾಮಗ, ಪತಂಜಲಿ ಸಮಿತಿಯ ಜ್ಞಾನೇಶ್ವರ ನಾಯಕ್, ಕರಂಬಳ್ಳಿ ಶಿವರಾಮ ಶೆಟ್ಟಿ, ಶಂಕರ ಶೆಟ್ಟಿ ಉಪಸ್ಥಿತರಿದ್ದರು. ಎರಡನೆಯ ದಿನದ ಕಾರ್ಯಕ್ರಮವನ್ನು ಪೇಜಾವರ ಶ್ರೀಗಳು ಉದ್ಘಾಟಿಸಿದರು. ಪರ್ಯಾಯ ಶ್ರೀ ಪಲಿಮಾರು ಮಠಾಧೀಶರು, ಪೇಜಾ
ವರ ಕಿರಿಯ, ಪಲಿಮಾರು ಕಿರಿಯ ಶ್ರೀಗಳು ಉಪಸ್ಥಿತರಿದ್ದರು. ಸುಜಾತಾ ಮಾರ್ಲ ಸ್ವಾಗತಿಸಿದರು.
ಬೊಜ್ಜು ಕರಗಿಸಿದ ಮಹಿಳೆಯರು
ಎಂಜಿನಿಯರಿಂಗ್ ಪದವೀಧರೆ ಗ್ರೀಷ್ಮಾ 30 ಕೆಜಿ ತೂಕ ಕಡಿಮೆ ಮಾಡಿ ರುವುದಾಗಿ ಹೇಳಿದಾಗ ಅವರನ್ನು ವೇದಿಕೆಗೆ ಕರೆದು ರಾಮದೇವ್ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರೀಷ್ಮಾ ಸಾಧನೆ ಅನುಕರಣೀಯ ಎಂದರು. ಅದೇ ರೀತಿ ವಿವಿಧ ಮಹಿಳೆಯರು 15, 16, 11 ಕೆ.ಜಿ. ಬೊಜ್ಜು ಇಳಿಸಿಕೊಂಡ ಅನುಭವವನ್ನು ಹೇಳಿಕೊಂಡರು. ಬೊಜ್ಜು ಕರಗಲು ಅಶ್ವಗಂಧ ಸಹಕಾರಿ ಎಂದು ರಾಮದೇವ್ ಹೇಳಿದರು.
ವಾಯುಮಾಲಿನ್ಯ ಪರಿಹಾರಕ್ಕೆ
ರಾತ್ರಿ 7 ಗಂಟೆಯೊಳಗೆ ಉಂಡರೆ ಉತ್ತಮ, 8 ಗಂಟೆ ಬಳಿಕ ಏನನ್ನೂ ತಿನ್ನಬಾರದು. ಅಕ್ಕಿ, ಗೋಧಿ ಪ್ರಮಾಣ ಕಡಿಮೆ ಮಾಡಿ ತರಹೇವಾರಿ ತರಕಾರಿಗಳ ಸೇವನೆ ಹೆಚ್ಚಿಸಬೇಕು. ದಿನಕ್ಕೆ ಮೂರು ಲೀ. ನೀರು ಕುಡಿಯಬೇಕು. ಮನೆ ಆವರಣದಲ್ಲಿ ತುಳಸಿ, ಅಲೊವೇರಾ, ಅಮೃತಬಳ್ಳಿಗಳನ್ನು ಬೆಳೆಸಿ. ಇವುಗಳಲ್ಲಿ ಅಗಾಧವಾದ ಔಷಧೀಯ ಗುಣವಿದೆ. ವಾತಾವರಣವೂ ಸರಿಯಾಗುತ್ತದೆ. ದಿಲ್ಲಿಯ ವಾತಾವರಣ ಕಲುಷಿತ ಎನ್ನುತ್ತೇವೆ. ಅಲ್ಲಿ ಇಂತಹ ಔಷಧೀಯ ಗಿಡಗಳಿಗೆ ಮಹತ್ವ ನೀಡದಿರುವುದೂ ಇದಕ್ಕೆ ಕಾರಣ. ಡೆಂಗ್ಯೂ, ಚಿಕೂನ್‌ಗುನ್ಯದಂತಹ ಜ್ವರಗಳಿಗೂ ಇವುಗಳು ಪರಿಣಾಮಕಾರಿ ಎಂದು ರಾಮದೇವ್ ಕಿವಿಮಾತು ನುಡಿದರು.
ಯೋಗಮಯ ಕರ್ನಾಟಕ
ಕರ್ನಾಟಕವನ್ನು ರೋಗಮುಕ್ತ ಮಾಡಲು “ಯೋಗಮಯ ಕರ್ನಾಟಕ’ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ನುರಿತ ಯೋಗ ಶಿಕ್ಷಕರು ಬೇಕು. ಆಸಕ್ತರಿಗೆ ತರಬೇತಿ ನೀಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.