ಮಹಿಳಾ ಪೊಲೀಸರಿಗೆ ಯೋಗ ತರಬೇತಿ
Team Udayavani, Mar 9, 2019, 12:30 AM IST
ಉಡುಪಿ: ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಜ್ಜರಕಾಡು ಮಹಿಳಾ ಸಮಾಜದ ಹಾಲ್‌ನಲ್ಲಿ ಮಹಿಳಾ ಪೊಲೀಸರಿಗೆ ಯೋಗ ತರಬೇತಿ ನಡೆಯಿತು.
ಅಯ್ಯಂಗಾರ್ ಯೋಗ ಸೆಂಟರ್ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಎಸ್‌ಪಿ ನಿಶಾ ಜೇಮ್ಸ್ ಉದ್ಘಾಟಿಸಿದರು.
ಎಸ್‌ಪಿ, 4 ಮಂದಿ ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ಗಳು ಹಾಗೂ 70 ಕ್ಕೂ ಅಧಿಕ ಮಹಿಳಾ ಪೊಲೀಸ್ ಸಿಬಂದಿ ಇದರ ಪ್ರಯೋಜನ ಪಡೆದುಕೊಂಡರು. ಯೋಗಶಿಕ್ಷಕಿ ಶೋಭಾ ಶೆಟ್ಟಿ ಹಾಗೂ ಸಿಬಂದಿ ಮಾರ್ಗದರ್ಶನ ನೀಡಿದರು. ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ನಡೆಯಿತು.
ಅಯ್ಯಂಗಾರ್ ಯೋಗ ಸೆಂಟರ್ ವತಿಯಿಂದ ಭಾರತದಾದ್ಯಂತ ಯೋಗದ ಬಗ್ಗೆ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಉಡುಪಿಯಲ್ಲಿ 30 ವರ್ಷಗಳಿಂದ ತರಬೇತಿ ನೀಡಲಾಗುತ್ತಿದೆ.
ಆರೋಗ್ಯ ರಕ್ಷಣೆಗೆ ಸಹಕಾರಿ
ಮಹಿಳಾ ಪೊಲೀಸರು ಸಾರ್ವಜನಕರ ರಕ್ಷಣೆಯಲ್ಲಿ ತೊಡಗುತ್ತಾರೆ. ಈ ವಿದ್ಯೆ ಅವರಿಗೆ ಪ್ರಯೋಜನವಾಗಬಹುದು. ಅವರು ಶಿಸ್ತಿನಿಂದ ಇರುವ ಕಾರಣ ಯೋಗ ಅವರಿಗೆ ಉಪಯೋಗವಾಗುತ್ತದೆ. ಅವರ ಆರೋಗ್ಯ ರಕ್ಷಣೆಗೂ ಸಹಕಾರಿಯಾಗುತ್ತದೆ.
ಹಲವಾರು ಆಸನಗಳನ್ನು ಪೊಲೀಸರಿಗೆ ತಿಳಿಸಿಕೊಡಲಾಗಿದೆ. ಬೇರೆ ಬೇರೆ ಕ್ಷೇತ್ರಗಳ ಮಹಿಳೆಯರಿಗೂ ತರಬೇತಿ ನೀಡುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ ಎಂದರು.
ಯೋಗ ಅವಶ್ಯ
ಮಹಿಳೆಯರಿಗೆ ಅಧಿಕ ಒತ್ತಡ ಇರುತ್ತದೆ. ಅವರ ಒತ್ತಡ ನಿಯಂತ್ರಿಸಲು ಯೋಗ ಅತೀ ಅಗತ್ಯ. ಸ್ವಲ್ಪ ಸಮಯ ಯೋಗ ಮಾಡಿದಾಗ ಉತ್ತಮ ಅನುಭವ ಸಿಗುತ್ತದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಯೋಗಶಿಕ್ಷಣದಲ್ಲಿ ನಿರತರಾದರೆ ಒತ್ತಡ ನಿವಾರಿಸಬಹುದು ಎನ್ನುತ್ತಾರೆ ಯೋಗ ಶಿಕ್ಷಕಿ ಶೋಭಾ ಶೆಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.